ಟಾಮ್​ ಕ್ರೂಸ್ 3 ವಿಚ್ಛೇದನಕ್ಕೂ '33'ಕ್ಕೂ ಇದೇ ಸಂಬಂಧ! ಇದು ಹಾಲಿವುಡ್​ ಸ್ಟಾರ್​ ನಟನ ದಾಂಪತ್ಯ ಕಹಾನಿ | Tom Cruise

ವಿಜಯವಾಣಿ (70)
Published on

Tom Cruise: ಅಂದಿನ ಕಾಲಘಟ್ಟಕ್ಕೆ ಹಾಲಿವುಡ್​ನ ಸ್ಟಾರ್​ ಹೀರೋ ಟಾಮ್ ಕ್ರೂಸ್ ಅಂದರೆ ಯುವತಿಯರಿಗೆ ಅದೇನೋ ಹುಚ್ಚು ವ್ಯಾಮೋಹ, ಪ್ರೀತಿ. ತಮ್ಮ ನೆಚ್ಚಿನ ನಟನೊಂದಿಗೆ ಒಂದು ಫೋಟೋ ಅಥವಾ ಅವರನ್ನು ನೇರವಾಗಿ ಕಣ್ತುಂಬಿಕೊಳ್ಳಲು ಕಾತರ ವ್ಯಕ್ತಪಡಿಸುತ್ತಿದ್ದರು. ಆ ಮಟ್ಟಿಗಿನ ಅಭಿಮಾನವನ್ನು ಹೊಂದಿದ್ದರು. ನಟನ ಬಣ್ಣದ ಬದುಕು ಅದ್ಭುತವಾಗಿ ಸಾಗಿದ್ದೇ ಆದರೂ ದಾಂಪತ್ಯ ಜೀವನ ಮಾತ್ರ ಅಂದುಕೊಂಡಂತೆ ಸಾಗಲಿಲ್ಲ. ಆದ ಮೂರು ಮದುವೆಯೂ ವಿಚ್ಚೇದನದಲ್ಲಿ ಅಂತ್ಯಗೊಂಡಿತು.

ಮೂವರಿಗೂ ಡಿವೋರ್ಸ್​

63 ವರ್ಷ ವಯಸ್ಸಿನ ಈ ಸೂಪರ್‌ಸ್ಟಾರ್ ಒಂದಲ್ಲ, ಎರಡಲ್ಲ ಮೂರು ಬಾರಿ ಮದುವೆಯಾದರು. ಆದರೆ, ಮೂವರು ಹೆಂಡಿರು ನಟನೊಂದಿಗೆ ಬಾಳಲಾಗದೆ, ಡಿವೋರ್ಸ್​ ಕೊಟ್ಟು ಇದೀಗ ತಮ್ಮದೇ ಹಾದಿಯಲ್ಲಿ ಬದುಕುತ್ತಿದ್ದಾರೆ. ನಟನ ಮುರಿದು ಬಿದ್ದ ದಾಂಪತ್ಯದಲ್ಲಿ ಒಂದು ಸಾಮಾನ್ಯ ವಿಷಯವನ್ನು ಕಂಡುಕೊಂಡಿರುವ ಅವರ ಅಭಿಮಾನಿಗಳು, 33 ಸಂಖ್ಯೆಯನ್ನು ಹಲವು ಬಾರಿ ಜಾಲತಾಣಗಳಲ್ಲಿ ಚರ್ಚಿಸಿದ್ದಾರೆ. ಅಷ್ಟಕ್ಕೂ ಏನಿದು 33? ಯಾವ ವಿಚಾರವನ್ನು ಟಾಮ್​ ಕ್ರೂಸ್​ ಫ್ಯಾನ್ಸ್ ಇಲ್ಲಿ ಪ್ರಸ್ತಾಪಿಸಿದ್ದಾರೆ? ಎಂಬುದರ ವಿವರ ಹೀಗಿದೆ ನೋಡಿ.

ಕ್ರೂಸ್ ಅವರ ಮೊದಲ ವಿವಾಹ 1987ರ ಮೇ ತಿಂಗಳಲ್ಲಿ ಮಿಮಿ ರೋಜರ್ಸ್ ಅವರೊಂದಿಗೆ ಅದ್ಧೂರಿಯಾಗಿ ನಡೆಯಿತು. ದಂಪತಿಗಳು ಮೂರು ವರ್ಷಗಳ ಕಾಲ ಸಂಸಾರ ಸಾಗಿಸಿ, 1990ರಲ್ಲಿ ಬೇರ್ಪಟ್ಟರು. ಡಿಸೆಂಬರ್ 1990ರಲ್ಲಿ, ಎರಡನೇ ಮದುವೆಗೆ ಮುಂದಾದ ಟಾಮ್​, ನಿಕೋಲ್ ಕಿಡ್‌ಮನ್ ಅವರೊಂದಿಗೆ ಉಂಗುರ ಬದಲಿಸಿಕೊಂಡರು. ಇವರೊಂದಿಗೆ 11 ವರ್ಷಗಳ ಕಾಲ ದಾಂಪತ್ಯ ಜೀವನ ನಡೆಸಿದ ಕ್ರೂಸ್​, 2001ರಲ್ಲಿ ವಿಚ್ಛೇದನ ಪಡೆದರು. ಅದಾದ ಬಳಿಕ ಮೂರನೇ ವಿವಾಹವು 2006ರಲ್ಲಿ ಕೇಟೀ ಹೋಮ್ಸ್ ಜತೆಗೆ ನಡೆಯಿತು. ಇವರೊಂದಿಗೂ ಸುಖ ಸಂಸಾರ ಸಾಗಿಸದ ಕ್ರೂಸ್​, ಆರು ವರ್ಷಗಳ ಬಳಿಕ ಅಂದರೆ 2012ರಲ್ಲಿ ಡಿವೋರ್ಸ್​ ನೀಡಿದರು. ಈ ದಂಪತಿಗಳಿಗೆ ಸುರಿ ಎಂಬ ಮಗಳಿದ್ದಾಳೆ.

As of Wednesday evening Tom Cruise is officially single after his latest high profile relationship, this time with Cuban actress Ana de Armas (pictured), came to an abrupt end

33 ವಯಸ್ಸು!

ಅಸಲಿಗೆ ಅಭಿಮಾನಿಗಳು ಕಂಡುಕೊಂಡ ವಿಚಾರ ಏನೆಂದರೆ, ಟಾಮ್ ಕ್ರೂಸ್ ಅವರ ಮಾಜಿ ಪತ್ನಿಯರಲ್ಲಿ ಮೂವರೂ ಸಹ ದಾಂಪತ್ಯ ಸಂಬಂಧ ಮುರಿದುಕೊಂಡಾಗ 33 ವಯಸ್ಸಿನವರಾಗಿದ್ದರು. ಇದು ನಿಜಕ್ಕೂ ಕಾಕತಾಳೀಯ ಎಂದೇ ಹೇಳಬಹುದು. ವಿಚ್ಛೇದನ ನೀಡಿದ ಸಮಯದಲ್ಲಿ ಆ ಮೂವರಿಗೂ 33 ವರ್ಷ ತುಂಬಿತ್ತು ಎನ್ನಲಾಗಿದೆ. ಈ ಸುದ್ದಿ ಹಲವು ಬಾರಿ ಜಾಲತಾಣಗಳಲ್ಲಿ ಹರಿದಾಡಿದ್ದು, ನೆಟ್ಟಿಗರ ಕುತೂಹಲಕ್ಕೆ ಕಾರಣವಾಗಿದೆ.ಇದನ್ನೂ ಓದಿ: ಈಕೆ ಜಗತ್ತು ನೋಡ್ತಿರೋದೇ 42ನೇ ವಯಸ್ಸಲ್ಲಿ! ಹೆತ್ತವರಿಂದಲೇ ನರಕ ಕಂಡ ಮಹಿಳೆ ಕಡೆಗೂ ಸಾವಿನಿಂದ ಬಚಾವ್​ | Women

ಈ ಮಧ್ಯೆ ಡೇಟಿಂಗ್ ವದಂತಿ

ಆನಾ ಡಿ ಆರ್ಮಸ್​ ಎಂಬ ಮಹಿಳೆಯೊಂದಿಗೆ 9 ತಿಂಗಳಿಂದ ಟಾಮ್​ ಕ್ರೂಸ್​ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ವದಂತಿಗಳು ಜಾಲತಾಣಗಳಲ್ಲಿ ಹರಿದಾಡಿತ್ತು. ಅದರಲ್ಲೂ ಈ ಜೋಡಿ ಸ್ಪೇಸ್​ನಲ್ಲಿ ಮದುವೆ ಆಗಲಿದೆ ಎಂದು ಒಂದಷ್ಟು ಸುದ್ದಿ ವಾಹಿನಿಗಳು ವರದಿ ಮಾಡಿತ್ತು. ಆದರೀಗ, ಅವರಿಬ್ಬರ ಮಧ್ಯೆ ಬಿರುಕು ಮೂಡಿದ್ದು, ಇಬ್ಬರು ಪರಸ್ಪರ ದೂರ ಸರಿದಿದ್ದಾರೆ ಎನ್ನಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net