

ಪಕ್ಕದ ಟಾಲಿವುಡ್ನಲ್ಲಿಯೂ ಸಿನಿಮಾ ಮಂದಿಯ ರಕ್ಷಾಬಂಧನದ ಸಡಗರ ಜೋರಾಗಿತ್ತು. ನೆಚ್ಚಿನ ಸಹೋದರ, ಸಹೋದರಿಯರು ರಾಕಿ ಕಟ್ಟುವ ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡು ಶುಭಾಶಯ ಕೋರಿದರು. ರಾಕುಲ್ ಪ್ರೀತ್, ರಾಮ್ ಪೋತಿನೇನಿ, ಲಕ್ಷ್ಮೀ ಮಂಚು, ವಿಷ್ಣು ಮಂಚು, ಅಲ್ಲು ಅರ್ಜುನ್ ಸೇರಿ ಹಲವು ಕಲಾವಿದರು ರಕ್ಷಾ ಬಂಧನ ಹಬ್ಬವನ್ನು ಆಚರಿಸಿದರು. ಇತ್ತ ಮಹೇಶ್ ಬಾಬು ಅವರ ಗೌತಮ್ಗೆ ಸಿತಾರಾ ರಾಕಿ ಕಟ್ಟಿ ಸಂಭ್ರಮಿಸಿದರು. ಇತ್ತಿಚೆಗಷ್ಟೇ ಮದುಯಾದ ನಟಿ ನಿತಿನ್ ಅಕ್ಕನಿಂದ ರಕ್ಷೆ ಪಡೆದರು. ನಟ ವರುಣ್ ತೇಜ, ರಾಮ್ ಚರಣ್ ತೇಜ, ಚಿರಂಜೀವಿ ಹೀಗೆ ಸಾಕಷ್ಟು ಮಂದಿ ಹಳೆಯ ನೆನಪುಗಳನ್ನು ಹಂಚಿಕೊಂಡಿದ್ದಾರೆ ಅವುಗಳ ಫೋಟೋ ಝಲಕ್ ಇಲ್ಲಿದೆ.