RRR ಸಿನಿಮಾ ನೋಡಿ ತೆಲುಗು ಕಲಿತ ಜಪಾನ್​ ಮಹಿಳೆ! NTR ನೋಡಿ ಆಕೆ ಹೇಳಿದ್ದೇನು ಗೊತ್ತಾ? | NTR

NTR
Published on

NTR| ತೆಲುಗು ನಟ ಜ್ಯೂನಿಯರ್​ ಎನ್.​ಟಿ.ಆರ್​ಗೆ ಅಪಾರ ಅಭಿಮಾನಿ ಬಳಗವಿದೆ. ಇನ್ನೂ ಎನ್​.ಟಿ.ಆರ್​ ಕೊನೆಯ ಬಾರಿ ಜಪಾನ್​ಗೆ ತೆರಳಿ ಅಭಿಮಾನಿಗಳೊಂದಿಗೆ ಸಮಯ ಕಳೆದಿದ್ದರು. ಅದರಂತೆ ಈಗಲೂ ಸಹ NTR ಜಪಾನ್​ಗೆ ಭೇಟಿ ನೀಡಿ ಅಭಿಮಾನಿಗಳನ್ನ ಭೇಟಿ ಮಾಡಿದ್ದಾರೆ. ಆ ಸಂದರ್ಭದಲ್ಲಿ ಜಪಾನಿನ ಮಹಿಳಾ ಅಭಿಮಾನಿಯೊಬ್ಬರು ತೆಲುಗು ಕಲಿಯುತ್ತಿರುವುದಾಗಿ ಕಂಡು ಬಂದಿದೆ. ಈ ಬಗ್ಗೆ NTR ಸಾಮಾಜಿಕ ಮಾಧ್ಯಮದಲ್ಲಿ ವಿಶೇಷ ಪೋಸ್ಟ್ ಹಾಕಿದ್ದಾರೆ.

ಭಾರತದ ಪ್ರತಿಭಾನ್ವಿತ ನಟರಾದ NTR ಅವರ ನೃತ್ಯ, ಸಂಭಾಷಣೆ ಹಾಗೂ ಅಭಿನಯಕ್ಕಾಗಿ ಅಪಾರ ಅಭಿಮಾನಿ ಬಳಗವನ್ನೇ ಹೊಂದಿದ್ದಾರೆ. ವಿಶೇಷವಾಗಿ ಆರ್‌ಆರ್‌ಆರ್ ಚಿತ್ರದ ನಂತರ NTR ಅವರು ವಿಶ್ವದೆಲ್ಲೆಡೆ ಹೆಸರುವಾಸಿಯಾಗಿದ್ದಾರೆ. ಜ್ಯೂನಿಯರ್​ NTR ನೋಡಲು ದೇಶ ವಿದೇಶಗಳಲ್ಲಿರುವ ಅಭಿಮಾನಿಗಳು ಕಾದು ಕುಳಿತಿರುತ್ತಾರೆ. ವಿಶೇಷವಾಗಿ ನಂದಮುರಿ ತಾರಕ್ ಜಪಾನ್‌ಗೆ ಹೋದಾಗಲೆಲ್ಲಾ ಅಲ್ಲಿನ ಅಭಿಮಾನಿಗಳು ಅವರಿಗೆ ಅಪಾರ ಪ್ರೀತಿ ಮತ್ತು ವಾತ್ಸಲ್ಯವನ್ನು ತೋರಿಸುತ್ತಾರೆ. ತಾರಕ್ ಇತ್ತೀಚೆಗೆ ಜಪಾನ್ ಪ್ರವಾಸಕ್ಕೆ ಹೋಗಿದ್ದರು. ಆ ಸಂದರ್ಭದಲ್ಲಿ ಅಭಿಮಾನಿಗಳೊಂದಿಗೆ ಮಾತನಾಡುತ್ತಾ ಅವರಿಗೆ ಆಟೋಗ್ರಾಫ್ ನೀಡುತ್ತಿರುವಾಗ ಅನಿರೀಕ್ಷಿತ ಘಟನೆಯೊಂದು ಬೆಳಕಿಗೆ ಬಂದಿದೆ. ಜಪಾನಿನ ಮಹಿಳೆಯೊಬ್ಬರು ಎನ್‌ಟಿಆರ್ ಅವರೊಂದಿಗೆ ತೆಲುಗಿನಲ್ಲಿ ಮಾತನಾಡಿದ್ದು ಬಾರೀ ಕುತೂಹಲ ಮೂಡಿಸಿದೆ.

NTR ಬಳಿ ಮಹಿಳೆ ಹೇಳಿದ್ದೇನು?

ಅಣ್ಣಾ ನೀವು ನನ್ನ ರೋಲ್​ ಮಾಡೆಲ್​ ಆಗಿದ್ದೀರಿ, ನಾನು ಆರ್‌ಆರ್‌ಆರ್ ನೋಡಿದ ನಂತರ ತೆಲುಗು ಕಲಿತಿದ್ದೇನೆ. ನಾನು ಎರಡು ವರ್ಷಗಳಿಂದ ತೆಲುಗು ಬರೆಯುವುದನ್ನು ಅಭ್ಯಾಸ ಮಾಡುತ್ತಿದ್ದೇನೆ ಎಂದು ತಾರಕ್‌ಗೆ ಪುಸ್ತಕವನ್ನು ನೀಡುವ ಸಂದರ್ಭದಲ್ಲಿ ಆ ಮಹಿಳಾ ಅಭಿಮಾನಿ ಹೇಳಿದ್ದಾರೆ. ಇದನ್ನು ಕೇಳಿ ಎನ್‌ಟಿಆರ್ ಆಶ್ಚರ್ಯಚಕಿತರಾಗಿದ್ದಾರೆ. ನೀವು ನನ್ನ ರೋಲ್ ಮಾಡೆಲ್ ಎಂದು ಅವಳು ಹೇಳಿದಾಗ NTR ಉತ್ತರಿಸಿದ್ದು, ನೀವೇ ನನ್ನ ದೊಡ್ಡ ಸ್ಫೂರ್ತಿ ಎಂದಿದ್ದಾರೆ. ಇನ್ನೂ ಈ ರೀತಿ ಇಬ್ಬರ ಮಧ್ಯೆ ನಡೆದಿರುವ ಸಂಭಾಷಣೆಯ ವಿಡಿಯೋವನ್ನ NTR ತಮ್ಮ ಟ್ವಿಟರ್‌ನಲ್ಲಿ ಪ್ರತ್ಯೇಕವಾಗಿ ಹಂಚಿಕೊಂಡಿದ್ದಾರೆ.

ಟ್ವಿಟ್ಟರ್​ನಲ್ಲಿ NTR ಬರೆದಿರುವುದೇನು?

ನಾನು ಪ್ರತಿ ಬಾರಿ ಹೋದಾಗಲೂ ಜಪಾನ್ ನನಗೆ ಒಳ್ಳೆಯ ನೆನಪುಗಳನ್ನು ನೀಡುತ್ತದೆ. ಆದರೆ ಈ ಬಾರಿ ಅದು ಇನ್ನೂ ವಿಶೇಷವೆನಿಸಿತು. ಏಕೆಂದರೆ RRR ನೋಡಿದ ನಂತರ ಜಪಾನಿನ ಅಭಿಮಾನಿಯೊಬ್ಬರು ತೆಲುಗು ಕಲಿತಿದ್ದೇನೆ ಎಂದು ಹೇಳಿದಾಗ ಹೃದಯವಿದ್ರಾವಕವಾಯಿತು. ಅಭಿಮಾನಿಯಾಗಿ ಸಿನಿಮಾ ಭಾಷೆಗಳನ್ನು ಕಲಿಯುವುದರ ಜೊತೆಗೆ ವಿಭಿನ್ನ ಸಂಸ್ಕೃತಿಗಳನ್ನು ಕಲಿಯಲು ಸೇತುವೆಯಾಗುತ್ತಿರುವುದು ನನಗೆ ಸಂತೋಷ ತಂದಿದೆ. ಭಾರತೀಯ ಸಿನಿಮಾ ವಿಶ್ವಾದ್ಯಂತ ಅಭಿಮಾನಿಗಳನ್ನು ಗಳಿಸುತ್ತಿರುವುದಕ್ಕೆ ಇದು ಮತ್ತೊಂದು ಕಾರಣವಾಗಿದೆ ಎಂದು NTR ಬರೆದುಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net