

ಹೈದರಾಬಾದ್: 11 ವರ್ಷಗಳ ಲಿವ್ಇನ್ ರಿಲೇಷನ್ಶಿಪ್ನಲ್ಲಿದ್ದು, ಪ್ರೀತಿಸಿ, ಗುಟ್ಟಾಗಿ ಮದುವೆಯಾಗಿ ಇದೀಗ ತನಗೆ ಮೋಸ ಮಾಡಿದ್ದಾನೆ ಎಂದು ಟಾಲಿವುಡ್ನ ಸ್ಟಾರ್ನಟ ರಾಜ್ತರುಣ್ ಮೇಲೆ ಗೆಳತಿ ಲಾವಣ್ಯ ಆರೋಪಿಸಿದ್ದು, ಆತ್ಮಹತ್ಯೆಗೂ ಕೂಡ ಯತ್ನಿಸಿದ್ದಾರೆ. ಘಟನೆ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದು, ಸದ್ಯ ಇವರಿಬ್ಬರ ವಿಚಾರ ಇದೀಗ ಟಾಲಿವುಡ್ ಚಿತ್ರರಂಗದಲ್ಲಿ ವಿವಾದದ ಅಲೆಯನ್ನೇ ಸೃಷ್ಟಿಸಿದ್ದು, ಚಿತ್ರರಂಗದವರಿಗೆ ದೊಡ್ಡ ತಲೆನೋವಾಗಿ ಕಾಡುತ್ತಿದೆ.
ಇತ್ತೀಚೆಗಷ್ಟೇ ನರಸಿಂಗಿ ಪೊಲೀಸ್ ಠಾಣೆಯಲ್ಲಿ ಲಾವಣ್ಯ ದಾಖಲಿಸಿದ್ದ ದೂರಿನ ಮೇರೆಗೆ ಪೊಲೀಸರು ನಟ ರಾಜ್ ತರುಣ್ರನ್ನು ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ಕಳುಹಿಸಿದ್ದರು. ಆದ್ರೆ, ಇದನ್ನು ತಪ್ಪಿಸಿದ ಆರೋಪಿ ರಾಜ್, ತನ್ನ ವಕೀಲರಿಂದ ಪೊಲೀಸರ ನೋಟಿಸ್ಗೆ ಉತ್ತರಿಸಿದ್ದು, ನಾನು ಊರಿನಲ್ಲಿ ಇರಲಿಲ್ಲ. ಆದ ಕಾರಣ ಬರಲು ಸಾಧ್ಯವಾಗಿಲ್ಲ ಎಂದು ಉತ್ತರಿಸಿದ್ದರು. ಇತ್ತ ತನ್ನ ಪ್ರಿಯಕರ ಕೈ ಜಾರಿ ಹೋಗಿದ್ದಕ್ಕೆ ಬೇಸರಗೊಂಡು ಸುದ್ದಿ ವಾಹಿನಿಗಳಿಗೆ ಸಂದರ್ಶನ ನೀಡುತ್ತಿರುವ ಲಾವಣ್ಯ ಇದೀಗ ರಾಜ್ ತರುಣ್ ಗೆಳೆಯನೊಬ್ಬನಿಗೆ ಚಪ್ಪಲಿಯಲ್ಲಿ ಹೊಡೆಯುವ ಮೂಲಕ ಸುದ್ದಿಯಾಗಿದ್ದಾರೆ.
ರಾಜ್ ತರುಣ್ ವಿವಾದ ಕುರಿತು ತೆಲುಗು ನ್ಯೂಸ್ ಚಾನೆಲ್ ಒಂದು ಚರ್ಚೆ ಆಯೋಜಿಸಿತ್ತು. ಚರ್ಚೆಯಲ್ಲಿ ರಾಜ್ ತರುಣ್ ಪರವಾಗಿ ಅವರ ಗೆಳೆಯ ಆರ್ಜೆ ಶೇಖರ್ ಭಾಷಾ ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಶೇಖರ್ ಲಾವಣ್ಯ ಬಗ್ಗೆ ಮಾತನಾಡುತ್ತಿದ್ದರು, ಈ ವೇಳೆ ಶೇಖರ್ ಮಾತಿನಿಂದ ಕುಪಿತಗೊಂಡ ಲಾವಣ್ಯ ಏಕಾಏಕಿ ಲೈವ್ ಕಾರ್ಯಕ್ರಮದಲ್ಲೇ ಏಕಾಏಕಿ ಕಾಲಿನಲ್ಲಿ ಧರಿಸಿದ್ದ ಚಪ್ಪಲಿ ತೆಗೆದು ಶೇಖರ್ ಮೇಲೆ ಎಸೆದಿದ್ದಾರೆ. ಚಪ್ಪಲಿ ತಮಗೆ ತಾಗುತ್ತಿದ್ದಂತೆ ಮೇಲೆದ್ದ ಶೇಖರ್, ಲಾವಣ್ಯ ಮೇಲೆ ಜಗಳಕ್ಕೆ ಹೋದರು, ಜೋರಾಗಿ ಕಿರುಚಾಡಿ ತುಸು ಎಳೆದಾಡಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಲಾವಣ್ಯ, ಆರ್ಜೆ ಶೇಖರ್ ಮೇಲೆ ಚಪ್ಪಲಿ ಎಸೆದ ವಿಡಿಯೋ ಇದೀಗ ವೈರಲ್ ಆಗಿದೆ. ಚಪ್ಪಲಿ ಏಟು ತಿಂದ ಶೇಖರ್ ಸಹ ಅದೇ ಶೋನಲ್ಲಿ ಲಾವಣ್ಯ ವಿರುದ್ಧ ನಿಂದನೆ ಮಾಡಿದ್ದಾರೆ. ಅದಕ್ಕೆ ಲಾವಣ್ಯ, ಶೇಖರ್ ಹೇಳಿದ ಮಾತು ಸರಿಯಿಲ್ಲ ಅದಕ್ಕೆ ಹೊಡೆದೆ ಎಂದಿದ್ದಾರೆ. ಅಲ್ಲದೆ, ನನ್ನ ಮೇಲೆ ಬೇಕಾದರೆ ಪೊಲೀಸ್ ಠಾಣೆಯಲ್ಲಿ ದೂರು ಕೊಟ್ಟುಕೋ ಹೋಗು ಎಂದು ಆವಾಜ್ ಹಾಕಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಪರ-ವಿರೋಧದ ಚರ್ಚೆಗೆ ಆಸ್ಪದ ಮಾಡಿಕೊಟ್ಟಿದೆ.