

ಬೆಂಗಳೂರು: ರಾಜ್ಯದಲ್ಲಿ ಶನಿವಾರ ಹೊಸದಾಗಿ 8,811 ಕೋವಿಡ್-19 ಸೋಂಕಿತರು ಪತ್ತೆಯಾಗಿದ್ದು, ಇದರೊಂದಿಗೆ ಒಟ್ಟು ಸೋಂಕಿತರ ಸಂಖ್ಯೆ 5,66,023 ತಲುಪಿದೆ.
ಇನ್ನೊಂದೆಡೆ ಶನಿವಾರವೊಂದೇ ದಿನ 5,417 ಮಂದಿ ಗುಣವಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ. ಈ ಮೂಲಕ ಗುಣವಾದವರ ಒಟ್ಟು ಸಂಖ್ಯೆ 4,55,719 ತಲುಪಿದೆ.
ರಾಜ್ಯದಲ್ಲಿ ಶನಿವಾರ 67,857 ಸ್ವಾಬ್ ಸ್ಯಾಂಪಲ್ಗಳನ್ನು ಕೋವಿಡ್-19 ಪರೀಕ್ಷೆಗೆ ಒಳಪಡಿಸಲಾಗಿದ್ದು, ಸಕ್ರಿಯ ಪ್ರಕರಣಗಳ ಸಂಖ್ಯೆ 1,01,782 ಆಗಿದೆ. ರಾಜ್ಯದಲ್ಲಿ ಇಂದು 86 ಮಂದಿ ಕರೊನಾಗೆ ಬಲಿಯಾಗಿದ್ದು, ಕೋವಿಡ್ ಸೋಂಕಿನಿಂದ ಮೃತಪಟ್ಟವರ ಒಟ್ಟು ಸಂಖ್ಯೆ 8,503ಕ್ಕೆ ಏರಿದೆ.