ಕರೊನಾ ಬುಲೆಟಿನ್​: ಒಂದೇ ದಿನ 7.5 ಸಾವಿರ, ಈವರೆಗೆ ಒಟ್ಟು 7.5 ಲಕ್ಷಕ್ಕೂ ಅಧಿಕ ಸೋಂಕಿತರು..

Corona
Published on

ಬೆಂಗಳೂರು: ರಾಜ್ಯದಲ್ಲಿ ಶುಕ್ರವಾರ ಒಂದೇ ದಿನ 7,542 ಕೋವಿಡ್​-19 ಪಾಸಿಟಿವ್​ ಪ್ರಕರಣಗಳು ಹೊಸದಾಗಿ ಪತ್ತೆಯಾಗಿದ್ದು, ಇದುವರೆಗೆ ಪತ್ತೆ ಆಗಿರುವ ಸೋಂಕಿತರ ಪ್ರಮಾಣ 7,51,390ಕ್ಕೆ ತಲುಪಿದೆ.

ಮತ್ತೊಂದೆಡೆ ಗುಣಮುಖರಾಗಿರುವವರ ಪೈಕಿ 8,580 ಮಂದಿ ಒಂದೇ ದಿನ ಆಸ್ಪತ್ರೆ, ಕೋವಿಡ್​ ಕೇರ್​ ಸೆಂಟರ್​ಗಳಿಂದ ಬಿಡುಗಡೆ ಆಗಿದ್ದು, ಇದುವರೆಗೆ ಗುಣವಾಗಿರುವವರ ಪ್ರಮಾಣ 6,28,588ಕ್ಕೆ ಏರಿಕೆಯಾಗಿದೆ.

ಅದಾಗ್ಯೂ ರಾಜ್ಯದಲ್ಲಿ 1,12,427 ಪ್ರಕರಣಗಳು ಸಕ್ರಿಯವಾಗಿದ್ದು, ಆ ಪೈಕಿ ಗಂಭೀರ ರೋಗಲಕ್ಷಣಗಳಿರುವ 946 ಮಂದಿ ತೀವ್ರ ನಿಗಾ ವಿಭಾಗದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆದರೆ ಒಂದೇ ದಿನ 73 ಮಂದಿ ಕರೊನಾಗೆ ಬಲಿಯಾಗಿದ್ದು, ಇದುವರೆಗೆ ಕರೊನಾದಿಂದಾಗಿ ಮೃತಪಟ್ಟವರ ಸಂಖ್ಯೆ 10,356ಕ್ಕೆ ತಲುಪಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net