

Gold Rates: ಕಳೆದ ಎರಡು ವಾರಗಳಿಂದ ಕ್ರಮೇಣವಾಗಿ ಇಳಿಕೆಯತ್ತ ಮುಖಮಾಡಿದ್ದ ಚಿನ್ನ ಇಂದು ದಿಢೀರ್ ಏರಿಕೆ ಕಂಡಿರುವುದು ಸದ್ಯ ಗ್ರಾಹಕರನ್ನು ಅಚ್ಚರಿಗೆ ದೂಡಿದೆ. ಇಂದು ಒಂದೇ ದಿನ ಚಿನ್ನ ಮತ್ತು ಬೆಳ್ಳಿ ಬೆಲೆಗಳು ತೀವ್ರವಾಗಿ ಹೆಚ್ಚಳವಾಗಿವೆ. ಮದುವೆ ಸೀಸನ್ನ ತರಾತುರಿಯಲ್ಲಿದ್ದ 'ಚಿನ್ನ'ದಂತ ಗ್ರಾಹಕರು, ಇದೀಗ ಮತ್ತೇ ತಲೆಮೇಲೆ ಕೈಹೊತ್ತು ಕೂರುವಂತಾಗಿದೆ.
ಶನಿವಾರ (ಆ.23) ಬೆಳಗ್ಗೆ ದಾಖಲಾದ ವಿವರಗಳ ಪ್ರಕಾರ, 24 ಕ್ಯಾರೆಟ್ನ 10 ಗ್ರಾಂ ಚಿನ್ನದ ಬೆಲೆ 1,090 ರೂ. ಏರಿಕೆಯಾಗಿದ್ದರೆ, 22 ಕ್ಯಾರೆಟ್ ಚಿನ್ನದ ಬೆಲೆ 1,000 ರೂ. ಹೆಚ್ಚಾಗಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿಯೂ ಚಿನ್ನದ ದರ ಏರಿದೆ. ಒಂದು ಔನ್ಸ್ ಚಿನ್ನದ ಬೆಲೆ 35 ಡಾಲರ್ ಏರಿಕೆಯಾಗಿದೆ. ಇದರೊಂದಿಗೆ, ಒಂದು ಔನ್ಸ್ ಬೆಲೆ 3,373 ಡಾಲರ್‌ನಲ್ಲಿ ವಹಿವಾಟು ನಡೆಸುತ್ತಿದೆ. ಮತ್ತೊಂದೆಡೆ, ಭಾರತದಲ್ಲಿ ಬೆಳ್ಳಿಯ ಬೆಲೆಯೂ ತೀವ್ರವಾಗಿ ಏರಿಕೆಯಾಗಿದೆ. ಒಂದು ಕೆಜಿ ಬೆಳ್ಳಿ 2,000 ರೂ. ಜಾಸ್ತಿಯಾಗಿದೆ.
ಗಮನಿಸಿ: ಮೇಲೆ ತಿಳಿಸಲಾದ ಬೆಲೆಗಳು ಬೆಳಗಿನ ಮಾರುಕಟ್ಟೆಯ ಆರಂಭದಲ್ಲಿ ಮಾತ್ರ. ಈ ಚಿನ್ನ ಮತ್ತು ಬೆಳ್ಳಿ ದರಗಳು ಬದಲಾವಣೆಗೆ ಒಳಪಟ್ಟಿರುತ್ತವೆ. ದಯವಿಟ್ಟು ಗಮನಿಸಿ.