ಇಂದು 8,642 ಹೊಸ ಕರೊನಾ ಪ್ರಕರಣಗಳು ಪತ್ತೆ; ಸೋಂಕಿತರ ಸಂಖ್ಯೆ 2,49,590ಕ್ಕೆ ಏರಿಕೆ

Suspected Coronavirus 15 march 20
Published on

ರಾಜ್ಯದಲ್ಲಿ ಇಂದು ಕರೊನಾ ಸೋಂಕಿತರ ಸಂಖ್ಯೆ 2,49,590ಕ್ಕೆ ಏರಿಕೆಯಾಗಿದ್ದು, ಅದರಲ್ಲಿ ಸಕ್ರಿಯ ಪ್ರಕರಣಗಳು 81,097 ಹಾಗೂ ಮೃತಪಟ್ಟವರ ಸಂಖ್ಯೆ 4,327. ಸೋಂಕಿನಿಂದ ಗುಣಮುಖರಾಗಿ ಡಿಸ್​ಚಾರ್ಜ್​ ಆದವರ ಸಂಖ್ಯೆ 1,64,150.

ಕಳೆದ 24ಗಂಟೆಯಲ್ಲಿ 8,642 ಹೊಸ ಪ್ರಕರಣಗಳು ಪತ್ತೆಯಾಗಿದ್ದು, 7,201 ಮಂದಿ ಡಿಸ್​ಚಾರ್ಜ್​ ಆಗಿದ್ದಾರೆ. 126 ಮಂದಿ ಸಾವನ್ನಪ್ಪಿದ್ದಾರೆಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net