ಗುಣಮಟ್ಟದ ಮಾನದಂಡದಿಂದಾಗಿ ತಂಬಾಕು ಜಾಗತಿಕವಾಗಿ ಬ್ರಾೃಂಡ್

IMG_20251028_182101
ಹನಗೋಡು ಹೋಬಳಿಯ ಚಿಲ್ಕುಂದ ತಂಬಾಕು ಹರಾಜು ಮಾರುಕಟ್ಟೆಯಲ್ಲಿ ಅಖಿಲ ಭಾರತ ರೈತ ಸಂಘಗಳ ಒಕ್ಕೂಟ ಮತ್ತು ಅಂತಾರಾಷ್ಟ್ರೀಯ ತಂಬಾಕು ಬೆಳೆಗಾರರ ಸಂಘಗಳ ಸಹಯೋಗದಲ್ಲಿ ವಿಶ್ವ ತಂಬಾಕು ಬೆಳೆಗಾರರ ದಿನಾಚರಣೆ ಕಾರ್ಯಕ್ರಮದಲ್ಲಿ ಪ್ರಗತಿಪರ ರೈತ ಮಾಕನಹಳ್ಳಿ ಶಿವಲಿಂಗೇಗೌಡ ಅವರನ್ನು ಸನ್ಮಾನಿಸಲಾಯಿತು. ಯಶವಂತ್‌ಕುಮಾರ್, ಗೋಪಾಲ್, ಶಿವಪ್ಪ ಕರುಣಾಕರ್, ಶಿವಣ್ಣ ಇತರರು ಇದ್ದರು.
Published on

ಹನಗೋಡು: ರಾಜ್ಯದ ತಂಬಾಕು ಬೆಳೆಗಾರರ ಶಿಸ್ತುಬದ್ಧ ಕೃಷಿ ಪದ್ಧತಿ ಮತ್ತು ಗುಣಮಟ್ಟದ ಮಾನದಂಡಗಳ ಅಳವಡಿಕೆಯಿಂದಾಗಿ ತಂಬಾಕನ್ನು ಜಾಗತಿಕವಾಗಿ ವಿಶ್ವಾಸಾರ್ಹ ಬ್ರ್ಯಾಂಡ್ ಆಗಿ ಮಾಡಿದೆ ಎಂದು ತಂಬಾಕು ಮಂಡಳಿಯ ಅಧ್ಯಕ್ಷ ಯಶವಂತ್‌ಕುಮಾರ್ ತಿಳಿಸಿದರು.

ಹನಗೋಡು ಹೋಬಳಿಯ ಚಿಲ್ಕುಂದ ತಂಬಾಕು ಹರಾಜು ಮಾರುಕಟ್ಟೆಯಲ್ಲಿ ಅಖಿಲ ಭಾರತ ರೈತ ಸಂಘಗಳ ಒಕ್ಕೂಟ ಮತ್ತು ಅಂತಾರಾಷ್ಟ್ರೀಯ ತಂಬಾಕು ಬೆಳೆಗಾರರ ಸಂಘಗಳ ಸಹಯೋಗದಲ್ಲಿ ವಿಶ್ವ ತಂಬಾಕು ಬೆಳೆಗಾರರ ದಿನಾಚರಣೆ ಕಾರ್ಯಕ್ರಮವನ್ನು ಮಂಗಳವಾರ ಉದ್ಘಾಟಿಸಿ ಮಾತನಾಡಿ, ರಾಜ್ಯದಲ್ಲಿ ರೈತರ ಕಠಿಣ ಪರಿಶ್ರಮ ಮತ್ತು ಬದ್ಧತೆಯಿಂದಾಗಿ ವಿಶ್ವದ ಅತ್ಯುತ್ತಮ ಫ್ಲೂ-ಕ್ಯೂರ್ಡ್ ವರ್ಜೀನಿಯಾ ತಂಬಾಕು ಉತ್ಪಾದನೆಯಾಗುತ್ತಿದೆ. ತಂಬಾಕು ವಲಯವು ಭಾರತದಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ರಾಷ್ಟ್ರೀಯ ಆದಾಯಕ್ಕೆ ಹೆಚ್ಚು ಕೊಡುಗೆ ನೀಡುತ್ತಿದ್ದು, ಕಾನೂನುಬದ್ಧ ದೇಶಿಯ ಮಾರುಕಟ್ಟೆ ಮತ್ತು ಲಕ್ಷಾಂತರ ರೈತ ಕುಟುಂಬಗಳ ಹಿತಾಸಕ್ತಿಯನ್ನು ರಕ್ಷಿಸಲು ಸರ್ಕಾರ ಹಾಗೂ ತಂಬಾಕು ಮಂಡಳಿ ಬದ್ಧವಾಗಿದೆ ಎಂದು ತಿಳಿಸಿದರು.

ಸಭೆಯಲ್ಲಿ ಹಿರಿಯ ಪ್ರಗತಿಪರ ರೈತ ಮಾಕನಹಳ್ಳಿ ಶಿವಲಿಂಗೇಗೌಡ ಅವರನ್ನು ಸನ್ಮಾನಿಸಲಾಯಿತು. ಪ್ರಾದೇಶಿಕ ವ್ಯವಸ್ಥಾಪಕ ಗೋಪಾಲ್, ಹರಾಜು ಮಾರುಕಟ್ಟೆಯ ಅಧೀಕ್ಷಕ ಸಿದ್ದರಾಮ, ಪ್ರಗತಿಪರ ರೈತ ಮುಖಂಡರಾದ ಕಲ್ಲಹಳ್ಳಿ ಶಿವಬಸಪ್ಪ, ಕರುಣಾಕರ್, ಪ್ರವೀಣ್, ಶಿವಣ್ಣ, ವಿಕ್ರಂರಾಜ್ ಅರಸು, ಆರ್.ಟಿ.ಸತೀಶ್, ವಿಶ್ವನಾಥ್, ಪರಮೇಶ್, ನಂಜುಂಡೇಗೌಡ ಸೇರಿದಂತೆ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net