

ಬೆಂಗಳೂರು: ಥಿಯೇಟರ್ನಲ್ಲಿ ಸಿನಿಮಾ ನೋಡುವವರಿಗೆ 'ಎಲ್ಲವೂ ಚೆನ್ನಾಗಿಯೇ ಇತ್ತು ಬದುಕು ಈ ರೀತಿ ಆಗುತ್ತೆ ಅಂತ ಯೋಚನೆ ಮಾಡಿಯೇ ಇರಲಿಲ್ಲ' ಎಂದು ಹೇಳುತ್ತಾ ಬರುವ ಮಹಿಳೆ ಕ್ಯಾನ್ಸರ್ ಬಗ್ಗೆ ಜಾಗೃತಿ ಮೂಡಿಸುತ್ತಿದ್ದಳು. ಆದರೆ ಮಹಿಳೆ ಜಾಹೀರಾತು ನಿಮಗೆ ಇನ್ಮುಂದೆ ನೋಡಲು ಸಿಗುವುದಿಲ್ಲ. ಹೊಸ ಜಾಹೀರಾತು ಪ್ರಸಾರವಾಗಲಿದೆ. ಈ ಜಾಹೀರಾತು ಶುಕ್ರವವಾರದಿಂದ (ಆಗಸ್ಟ್ 23) ಪ್ರದರ್ಶನ ಕಾಣುತ್ತಿದೆ.
ನನ್ನ ಬದುಕು ಈ ರೀತಿ ಆಗುತ್ತೆ ಅಂತ ಯೋಚನೆ ಮಾಡಿಯೇ ಇರಲಿಲ್ಲ. ಎಲ್ಲವೂ ಚೆನ್ನಾಗಿಯೇ ಇತ್ತು. ಒಳ್ಳೆಯ ಗಂಡ, ಎರಡು ಮುದ್ದಿನ ಮಕ್ಕಳು. ಆದರೆ, ತಂಬಾಕು ಎಲ್ಲವನ್ನೂ ಕೆಡಿಸಿಬಿಡ್ತು. ಈಗ ಹರಡುತ್ತಿರುವ ಈ ಕ್ಯಾನ್ಸರ್ನ ನನ್ನ ಮುಖದಿಂದ ಕತ್ತರಿಸಿ ತೆಗಿಯಬೇಕಾಗಿದೆ. ಇನ್ನು ಯಾವುದೂ ಮೊದಲಿನ ಥರ ಇರಕ್ಕಾಗಲ್ಲ. ತಂಬಾಕು ನನ್ನ ಬದುಕನ್ನೇ ಸರ್ವನಾಶ ಮಾಡಿಬಿಡ್ತು’ ಎಂಬ ಲೈನ್ಗಳನ್ನು ನಿಮಗೆ ತುಂಬಾ ಚಿರಪರಿಚಿತವೇ ಆಗಿರುತ್ತದೆ.
ಥಿಯೇಟರ್ಗೆ ಹೋದಾಗ ಈ ಜಾಹೀರಾತು ಕಾಣಿಸುತ್ತದೆ. ಆದರೆ, ಈಗ ಜಾಹೀರಾತು ಬದಲಾಗಿದೆ. ಈ ಅಡ್ವಟೈಸ್ಮೆಂಟ್ನ ಇನ್ಮುಂದೆ ಥಿಯೇಟರ್ನಲ್ಲಿ ಕಾಣ ಸಿಗುವುದಿಲ್ಲ.
ಥಿಯೇಟರ್ನಲ್ಲಿ ಈಗ ತಂಬಾಕಿನ ಹೊಸ ಜಾಹೀರಾತು ಬಂದಿದೆ. ತಂಬಾಕು ತಿಂದರೆ ಏನೆಲ್ಲ ಸಮಸ್ಯೆ ಆಗುತ್ತದೆ ಎಂಬುದನ್ನು ಸುನಿತಾ ಹೇಳಿಕೊಂಡಿದ್ದಳು. ಈಗ ಇವಳ ಬದಲು ಓಂ ಪ್ರಕಾಶ್ ಹೆಸರಿನ ವ್ಯಕ್ತಿ ಬಂದಿದ್ದಾನೆ. ಸಣ್ಣ ವಯಸ್ಸಿನಿಂದ ತಂಬಾಕು ತಿಂದು ಈತನಿಗೆ ಕ್ಯಾನ್ಸರ್ ಕಾಣಿಸಿಕೊಂಡಿದೆ. ಆ ಬಗ್ಗೆ ಅವರ ಪತ್ನಿ ಸುನಿತಾ ಮಾತನಾಡುತ್ತಾಳೆ.
ಧೂಮಪಾನದ ಜಾಹೀರಾತಲ್ಲೂ ಬದಲಾವಣೆ ಆಗಿದೆ. ಸಿಗರೇಟ್ ಸೇದುವುದನ್ನು ಬಿಡುವುದರಿಂದ ಆರೋಗ್ಯದಲ್ಲಿ ಏನೆಲ್ಲಾ ಚೇತರಿಕೆಯಾಗುತ್ತದೆ ಎಂಬ ಹೊಸ ಜಾಹೀರಾತೊಂದನ್ನು ಬಿಡುಗಡೆ ಮಾಡಲಾಗಿದೆ.