‘ಟೈಟಾನಿಕ್​​’ ಕ್ಲೈಮ್ಯಾಕ್ಸ್​​​ ಸಿಕ್ರೇಟ್​​ ಬಿಚ್ಚಿಟ್ಟ ನಟಿ ಕೇಟ್ ವಿನ್ಸ್ಲೆಟ್; ಸತ್ಯ ತಿಳಿದ್ರೆ ನೀವು ಶಾಕ್​ ಆಗೋದು ಗ್ಯಾರಂಟಿ | Titanic

Untitled design - 2024-10-27T191252.562
Published on

ನವದೆಹಲಿ: ಹಾಲಿವುಡ್​ ಸಿನಿಮಾ ಟೈಟಾನಿಕ್(Titanic)​ ಯಾರಿಗೆ ಗೊತ್ತಿಲ್ಲ ಹೇಳಿ. ಆ ಸಿನಿಮಾ ಕ್ರೇಜ್​ ಇಂದಿಗೂ ಕಡಿಮೆಯಾಗಿಲ್ಲ, ಯುವಪೀಳಿಗೆಯನ್ನು ಕೇಳಿದರು ಚಿತ್ರದ ಕಥೆ ಬಗ್ಗೆ ಮಾತನಾಡುತ್ತಾರೆ. ಸಿನಿಮಾ ಕ್ಲೈಮ್ಯಾಕ್ಸ್​ ಎಲ್ಲರ ಗಮನವನ್ನು ಹಿಡಿದಿಟ್ಟುಕೊಳ್ಳುತ್ತದೆ. ಚಿತ್ರದಲ್ಲಿನ 'ಜಾಕ್' ಮತ್ತು 'ರೋಸ್' ಪಾತ್ರಧಾರಿಗಳು ನೀರಿನಲ್ಲಿ ಮುಳುಗುತ್ತಾರೆ. ಜ್ಯಾಕ್ ರೋಸ್ ಅನ್ನು ತೇಲುವ ಬಾಗಿಲಿನ ಮೇಲೆ ಇರಿಸುವ ಮೂಲಕ (ಆಪಾದಿತವಾಗಿ) ತನ್ನ ಪ್ರಾಣವನ್ನು ಕಳೆದುಕೊಳ್ಳುತ್ತಾನೆ.

ಇಬ್ಬರು ಪ್ರೇಮಿಗಳು ಪರಸ್ಪರ ತ್ಯಾಗಕ್ಕೆ ಸಿದ್ಧರಾಗಿರುವಾಗ, ಜಾಕ್​​​, ರೋಸ್​​ ಪ್ರಾಣವನ್ನು ಉಳಿಸಲು ತನ್ನ ಪ್ರಾಣ ಕಳೆದುಕೊಳ್ಳುವ ದೃಶ್ಯ ನಿಸ್ಸಂದೇಹವಾಗಿ ಚಿತ್ರದ ಅತ್ಯಂತ ಭಾವನಾತ್ಮಕ ದೃಶ್ಯ ಎಂದು ಕರೆಯಬಹುದು. ಕ್ಲೈಮ್ಯಾಕ್ಸ್​​​​ನಲ್ಲಿ ಬಾಗಿಲಿನ ಮೇಲೆ ರೋಜ್​​ ಅವರು ಇದ್ದರೆ ಜ್ಯಾಕ್​ ನೀರಿನಲ್ಲಿರುವುದನ್ನು ನೋಡಿದ್ದೇವೆ. ಈ ರೋಚಕ ದೃಶ್ಯದ ಕುರಿತು ನಟಿ ಕೇಟ್ ವಿನ್ಸ್ಲೆಟ್ ಅಘಾತಕಾರಿ ವಿಷಯವನ್ನು ಬಹಿರಂಗಪಡಿಸಿದ್ದಾರೆ.

ಕ್ಲೈಮ್ಯಾಕ್ಸ್​ನಲ್ಲಿ ನಟಿ ಹಡಗಿನ ಬಾಗಿಲ ಮೇಲೆ ಇದಿದ್ದು ಎಂಬ ಅಭಿಮಾನಿಗಳ ಹಳೆಯ ಚರ್ಚೆ ನಿಲ್ಲಿಸುವಂತೆ ನಟಿ ಕೇಟ್ ವಿನ್ಸ್ಲೆಟ್ ಕೊಟ್ಟಿರುವ ಉತ್ತರ ನೀಡಿದ್ದಾರೆ. ಅದು ಹಡಗಿನ ಬಾಗಿಲಲ್ಲ, ಹಡಗಿನ ಬ್ಯಾನಿಸ್ಟರ್ (ಗ್ರಿಲ್) ತುಂಡು ಎಂದು ಬಹಿರಂಗಪಡಿಸಿದರು.

ಸಂದರ್ಶವೊಂದರಲ್ಲಿ ಜ್ಯಾಕ್ ಡಾಸನ್ ಪಾತ್ರದಲ್ಲಿ ನಟಿಸಿದ ಅವರ ಸಹ-ನಟ ಲಿಯೊನಾರ್ಡೊ ಡಿಕಾಪ್ರಿಯೊಗೆ ಬಾಗಿಲಿನ ಮೇಲೆ ರೂಮ್​​ ಇದೆಯೇ ಎಂದು ಕೇಳಿದಾಗ? ಆ ತೇಲುವ ತುಂಡು ಬಾಗಿಲು ಕೂಡ ಅಲ್ಲ ಎಂದು ಬಹಿರಂಗಪಡಿಸುವ ಮೊದಲು ನಟಿ ಕೇಟ್ ವಿನ್ಸ್ಲೆಟ್ ಪ್ರತಿಕ್ರಿಯಿಸಿ ಅದು ಮೆಟ್ಟಿಲು ಅಥವಾ ಯಾವುದೋ ರೀತಿಯ ಬ್ಯಾನಿಸ್ಟರ್ ತುಂಡು, ಮುರಿದುಹೋಗಿತ್ತು ಎಂದು ಹೇಳಿದ್ದಾರೆ.

1997ರಲ್ಲಿ ಸಿನಿಮಾ ಬಿಡುಗಡೆಯಾದಾಗಿನಿಂದ ಈ ದೃಶ್ಯದ ಸುತ್ತ ಲೆಕ್ಕವಿಲ್ಲದಷ್ಟು ಚರ್ಚೆಗಳು ನಡೆದಿವೆ. ವಿನ್ಸ್ಲೆಟ್ ವಿಷಯ ಬಹಿರಂಗಪಡಿಸಿದ ನಂತರ ಅಭಿಮಾನಿಗಳು ಈ ಚಿತ್ರದ ಕ್ಲೈಮ್ಯಾಕ್ಸ್​​​ ಸನ್ನಿವೇಶವನ್ನು ಹೊಸ ದೃಷ್ಟಿಕೋನದಿಂದ ನೋಡುವುದಂತೂ ಸುಳ್ಳಲ್ಲ. (ಏಜೆನ್ಸೀಸ್​​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net