ತಿರುಪತಿ ಲೋಕಸಭೆ ಉಪಚುನಾವಣೆ ಫಲಿತಾಂಶ: ಕೆ ರತ್ನಪ್ರಭಾಗೆ ಸೋಲು

k ratna prabha
k ratna prabha
Published on

ತಿರುಪತಿ: ತಿರುಪತಿ ಲೋಕಸಭೆ ಉಪಚುನಾವಣೆಯ ಮತ ಎಣಿಕೆ ಪೂರ್ಣಗೊಂಡಿದ್ದು, ವೈಎಸ್​ಆರ್​ ಕಾಂಗ್ರೆಸ್​ ಪಕ್ಷದ ಅಭ್ಯರ್ಥಿ ಎಂ ಗುರುಮೂರ್ತಿ ಅವರು ವಿಜಯಶಾಲಿಯಾಗಿದ್ದಾರೆ. ಇವರ ವಿರುದ್ಧ ಸ್ಪರ್ಧಿಸಿದ್ದ ಕನ್ನಡತಿ, ಕರ್ನಾಟಕ ಸರ್ಕಾರದ ಮಾಜಿ ಮುಖ್ಯ ಕಾರ್ಯದರ್ಶಿ ಕೆ ರತ್ನಪ್ರಭಾ ಅವರು ಪರಾಭವಗೊಂಡಿದ್ದಾರೆ.

ಎಂ ಗುರುಮೂರ್ತಿ ಅವರು ಟಿಡಿಪಿಯ ಪಣಬಾಕ ಲಕ್ಷ್ಮೀ ಅವರನ್ನು ಮಣಿಸಿ 2.70 ಲಕ್ಷ ದಾಖಲೆ ಮತಗಳ ಅಂತರದಿಂದ ಗೆದ್ದಿದ್ದಾರೆ. ತಿರುಪತಿ ಎಸ್​ಸಿ ಮೀಸಲು ಲೋಕಸಭಾ ಕ್ಷೇತ್ರವಾಗಿದೆ.

ಒಟ್ಟು ಚಲಾವಣೆಗೊಂಡ ಮತಗಳಲ್ಲಿ ಕೆ.ರತ್ನ ಪ್ರಭಾ ಅವರು ಶೇ 5.9 ರಷ್ಟು ಮತಗಳನ್ನು ಪಡೆಯುವ ಮೂಲಕ ಮೂರನೇ ಸ್ಥಾನ ಗಳಿಸಿದ್ದಾರೆ.

ಇನ್ನು ಆಂಧ್ರಪ್ರದೇಶದಲ್ಲಿ ಆಡಳಿತಾರೂಡ ವೈಎಸ್​ಆರ್​ ಕಾಂಗ್ರೆಸ್​ ತಿರುಪತಿ ಕ್ಷೇತ್ರವನ್ನು ಮರಳಿ ತನ್ನ ತೆಕ್ಕೆಗೆ ತೆಗೆದುಕೊಂಡಿದೆ.  ಈ ಕ್ಷೇತ್ರದ ಸಂಸದರಾಗಿದ್ದ ಬಲ್ಲಿ ದುರ್ಗಾ ಪ್ರಸಾದ್ ರಾವ್ ಅವರು ಕಳೆದ ವರ್ಷ ಕರೊನಾದಿಂದ ಮೃತಪಟ್ಟಿದ್ದರಿಂದ ತೆರವಾಗಿತ್ತು. ಏಪ್ರಿಲ್ 17 ರಂದು ಮತದಾನ ನಡೆದಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net