ಪಂಕ್ಚರ್​ ಹಾಕುವಾಗ ಟೈರ್​ Blast​; ಗಾಳಿಯಲ್ಲಿ ಪಲ್ಟಿ ಹೊಡೆದ ಯುವಕ: ವಿಡಿಯೋ ವೈರಲ್​

dk (13) (1)
Published on

ಬೆಂಗಳೂರು: ಮೆಕಾನಿಕ್​ ಅಂಗಡಿ ಬಳಿ ಟೈರ್​ ಒಡೆದ ಪರಿಣಾಮ 19ರ ಯುವಕ ಗಾಳಿಯಲ್ಲಿ ಪಲ್ಟಿ ಹೊಡೆದಿದ್ದಾನೆ. ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

ಗಾಳಿಯಲ್ಲಿ ಪಲ್ಟಿ ಹೊಡೆದ ಪರಿಣಾಮ ಅಬ್ದುಲ್​ ರಾಜೀದ್​(19) ಎಂಬ ಯುವಕ ತೀವ್ರವಾಗಿ ಗಾಯಗೊಂಡಿದ್ದಾನೆ. ಈ ಘಟನೆ ಡಿ.21ರಂದು ಉಡುಪಿ ಜಿಲ್ಲೆಯ ಕೋಟೆಶ್ವರ ಪ್ರದೇಶದ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ನಡೆದಿದೆ ಎಂದು ವರದಿಯಾಗಿದೆ.

ವಿಡಿಯೋದಲ್ಲಿ ಏನಿದೆ?

ಯುವಕ ಅಬ್ದುಲ್​ ದೊಡ್ಡ ಟೈರ್​ಗಾಳಿಯನ್ನು ತುಂಬುತ್ತಿದ್ದಾನೆ. ಏಕಾಏಕಿ ಟೈರ್​ ಬ್ಲಾಸ್ಟ್​ ಆಗಿದ್ದು, ಅವರ ಬಲ ಭಾಗದಿಂದ ಹಲವಾರು ಅಡಿ ಮೇಲೆಕ್ಕೆ ಹೋಗಿ ಪಲ್ಟಿ ಹೊಡೆದು ಕೆಳಕ್ಕೆ ಬಿದ್ದಿದ್ದಾರೆ. ಖಾಸಗಿ ಶಾಲಾ ಬಸ್​​ನ ಟೈರ್​ಗೆ ಪಂಕ್ಚರ್ ಹಾಕುತ್ತಿದ್ದರು ಎಂದು ಹೇಳಲಾಗಿದ್ದು,​ ಇದೀಗ ಈ ವಿಡಿಯೋ ಭಾರೀ ವೈರಲ್​ ಆಗಿದೆ.

ಸ್ಫೋಟದಲ್ಲಿ ಅಬ್ದುಲ್ ಗಂಭೀರವಾಗಿ ಗಾಯಗೊಂಡಿದ್ದು, ಆತನನ್ನು ಸಮೀಪದ ಆಸ್ಪತ್ರೆಗೆ ಸಾಗಿಸಲಾಗಿದೆ. ಅವರ ತೋಳಿನಲ್ಲಿ ಫ್ರಾಕ್ಚರ್ ಆಗಿರುವುದಾಗಿ ವರದಿಯಾಗಿದೆ,(ಏಜೆನ್ಸೀಸ್​).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net