ಯುವ ಮೋರ್ಚಾದಿಂದ ‘ತಿರಂಗಾ ಯಾತ್ರೆ’

31
Published on


ಮೈಸೂರು: ಚಾಮರಾಜ ವಿಧಾನಸಭಾ ಕ್ಷೇತ್ರದ ಬಿಜೆಪಿ ಯುವ ಮೋರ್ಚಾ ವತಿಯಿಂದ ಬುಧವಾರ 77 ನೇ ವರ್ಷದ ಸ್ವಾತಂತ್ರ್ಯ ದಿನದ ಅಂಗವಾಗಿ ‘ತಿರಂಗಾ ಯಾತ್ರೆ’ ಮಾಡಲಾಯಿತು.
ಯಾತ್ರೆಗೆ ಮಾಜಿ ಶಾಸಕ ಹಾಗೂ ಬಿಜೆಪಿ ನಗರಾಧ್ಯಕ್ಷ ಎಲ್.ನಾಗೇಂದ್ರ ಚಾಲನೆ ನೀಡಿದರು. ನಂಜರಾಜ ಬಹದ್ದೂರ್ ಛತ್ರ, ವಿನೋಬಾ ರಸ್ತೆ , ಚಿಕ್ಕ ಗಡಿಯಾರ, ಡಿ.ದೇವರಾಜ ಅರಸು ರಸ್ತೆ, ದಿವಾನ್ ರಸ್ತೆ ಮಾರ್ಗವಾಗಿ ‘ತಿರಂಗಾ ಯಾತ್ರೆ’ ಸಂಚರಿಸಿತು. ಚಾಮರಾಜ ಕ್ಷೇತ್ರದ ಅಧ್ಯಕ್ಷ ಆರ್.ವಿ.ದಿನೇಶ್ ಗೌಡ, ನಗರ ಯುವ ಮೋರ್ಚಾ ಅಧ್ಯಕ್ಷ ರಾಕೇಶ್ ಗೌಡ, ಮುಖಂಡರಾದ ಸಚಿನ್, ರಾಮೇಗೌಡ, ಅರ್ಜುನ್ ಕುಮಾರ್, ನಿಖಿಲ್, ಯೋಗೇಶ್, ಉಮೇಶ್, ದರ್ಶನ್, ಪ್ರವೀಣ್, ಪಂಕಜ್ ಪಾರಿಕ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net