ಹೈವೇಯಲ್ಲಿ ವಾಹನ ಓಡಿಸುತ್ತೀರಾ? ಈ ಅಂಶಗಳು ನಿಮ್ಮ ಗಮನದಲ್ಲಿ ಇರಲೇಬೇಕು…

New Project (24)
Published on

ಬೆಂಗಳೂರು: ಪುಣೆ - ಬೆಂಗಳೂರು ಹೆದ್ದಾರಿಯಲ್ಲಿ ಭಾನುವಾರ ಭಯಂಕರ ಅಪಘಾತ ಸಂಭವಿಸಿರೋದು ನಿಮಗೆ ಗೊತ್ತಿರಬಹುದು. ಆ ಅಪಘಾತದಲ್ಲಿ ಸುಮಾರು ಹಲವಾರು ವಾಹನಗಳು ಜಖಂಗೊಂಡಿವೆ. ಅನೇಕ ಜನರು ಗಾಯಗೊಂಡಿದ್ದಾರೆ. ಇಂಥ ಘಟನೆಗಳು ಸಂಭವಿಸಿದಾಗಲೆಲ್ಲ, ಹೆದ್ದಾರಿಯಲ್ಲೇ ಅಪಘಾತಗಳು ಹೆಚ್ಚು ಏಕೆ ಸಂಭವಿಸುತ್ತವೆ ಎಂಬ ಬಗ್ಗೆ ಚರ್ಚೆಗಳು ಆರಂಭವಾಗುತ್ತವೆ ಮತ್ತು ಅದನ್ನು ತಡೆಯುವುದು ಹೇಗೆ ಎಂಬ ಪ್ರಶ್ನೆ ಎದುರಾಗುತ್ತದೆ. ಹೆದ್ದಾರಿಯಲ್ಲಿ ಆಗಬಹುದಾದ ಅಪಘಾತದಿಂದ ಪಾರಾಗಲು ನಾವು ಅನುಸರಿಸಬೇಕಾದ ಕೆಲವು ಉಪಾಯಗಳಿವೆ. ಏನವು? ತಿಳಿಯೋಣ ಬನ್ನಿ.

ಸ್ಪೀಡ್ ನಿಯಂತ್ರಣದಲ್ಲಿರಲಿ
ಹೆದ್ದಾರಿಯಲ್ಲಿ ಡ್ರೈವ್ ಮಾಡುವಾಗ ಸ್ಪೀಡ್​ ನಿಮ್ಮ ನಿಯಂತ್ರಣದಲ್ಲಿದೆ ಎಂಬುದನ್ನು ಆಗಾಗ ಖಚಿತ ಮಾಡಿಕೊಳ್ಳುತ್ತ ಇರಿ. ತುರ್ತು ಸಮಯದಲ್ಲಿ ಚಲಿಸುವ ವೇಗವೇ ಹೆದ್ದಾರಿಯಲ್ಲಿ ಕೂಡ ಇರಲಿ. ಬಹಳ ಸಲ ಪ್ರಮುಖ ರಸ್ತೆ ಅಪಘಾತಗಳು ಅತಿಯಾದ ವೇಗದಿಂದಲ್ಲ, ಅತಿಯಾದ ಆತ್ಮವಿಶ್ವಾಸದಿಂದ ಆಗುತ್ತವೆ. ಸುರಕ್ಷಿತ ಪ್ರಯಾಣಕ್ಕಾಗಿ ಹೆದ್ದಾರಿಯಲ್ಲಿ ಸಂವೇದನಾಶೀಲರಾಗಿ ಗಾಡಿಯನ್ನು ಚಲಾಯಿಸಬೇಕು.

ನಿಮ್ಮ ಲೇನ್​ನಲ್ಲೇ ಚಲಿಸಿ
ಹೆದ್ದಾರಿಯಲ್ಲಿ ಚಲಿಸುವಾಗ ಕಾರ್​ ಅನ್ನು ಒಂದೇ ಲೇನ್​ನಲ್ಲಿ ಚಲಾಯಿಸಿ. ಲೇನ್ ಬದಲಿಸುವಾಗ ಹಿಂದೆ ಬರುತ್ತಿರುವ ಗಾಡಿಗಳಿಗೆ ಆಗಾಗ ಸೂಚನೆಗಳನ್ನು ನೀಡಿ. ರೇರ್ ಮಿರರ್ ಮೇಲೆ ಒಂದು ಕಣ್ಣನ್ನು ನೀವು ಇಟ್ಟಿರಲೇಬೇಕು. ನಿಮ್ಮ ಲೇನ್​ನಲ್ಲಿ ನೀವು ಚಲಿಸುವುದು ಒಳಿತು. ಅದರೊಂದಿಗೆ ಮುಂದೆ ಇರುವ ಗಾಡಿ ಹಾಗೂ ನಿಮ್ಮ ವಾಹನದ ಮಧ್ಯ ಸರಿಯಾದ ಅಂತರವಿರಲಿ. ಇದರಿಂದ ಹಠಾತ್ ಬ್ರೇಕ್ ಹಾಕಿದಾಗ ವಾಹನ ನಿಮ್ಮ ನಿಯಂತ್ರಣದಲ್ಲೇ ಇರುತ್ತದೆ.

ಅತಿಯಾಗಿ ಯೋಚಿಸುವುದನ್ನು ನಿಲ್ಲಿಸಿ
ಹೆದ್ದಾರಿಯಲ್ಲಿ ಬಹಳಷ್ಟು ಜನ ದೀರ್ಘ ಕಾಲ ಪ್ರಯಾಣ ಮಾಡುತ್ತಾರೆ. ಚಲಿಸುವ ವೇಳೆ ಬಹಳ ಸಮಯವಿರುವ ಕಾರಣ ಬೇರೆ ವಿಷಯದ ಬಗ್ಗೆ ಯೋಚನೆ ಮಾಡಲು ಪ್ರಾರಂಭಿಸುತ್ತಾರೆ. ಇದರಿಂದ ಗಾಡಿಯ ನಿಯಂತ್ರಣ ಕಳೆದುಕೊಂಡು ಅಪಘಾತಕ್ಕೆ ಕಾರಣವಾಗುತ್ತದೆ.

ಹೈ ಬೀಮ್ ಲೈಟ್​ ಸರಿಯಾಗಿ ಬಳಸಿಕೊಳ್ಳಿ
ಕಾರಿನಲ್ಲಿ ಹೈ ಬೀಮ್ ಲೈಟ್ ಬಳಸಬೇಕು. ಏಕೆಂದರೆ ಹೆದ್ದಾರಿ ಮತ್ತು ಎಕ್ಸ್​​ಪ್ರೆಸ್​ವೇಯಲ್ಲಿ ಮುಂಭಾಗದಿಂದ ಬರುವ ವಾಹನ, ಡಿವೈಡರ್​ನ ಇನ್ನೊಂದು ಭಾಗದಲ್ಲಿ ಚಲಿಸುತ್ತಿರುತ್ತದೆ. ಅಂತಹ ಪರಿಸ್ಥಿತಿಯಲ್ಲಿ ನಿಮಗೆ ಅಥವಾ ಬೇರೆಯವರಿಗೆ ತೊಂದರೆಯಾಗುವುದಿಲ್ಲ.

ಮೇಲೆ ಹೇಳಿರುವ ಸೂಚನೆಗಳನ್ನು ಪಾಲಿಸುವುದರಿಂದ ತಕ್ಕ ಮಟ್ಟಿಗೆ ಅಪಘಾತಗಳನ್ನು ತಪ್ಪಿಸಬಹುದು. ಸುರಕ್ಷಿತವಾಗಿ ನಾವು ತಲುಪ ಬೇಕಾದ ಜಾಗವನ್ನು ಸೇರಬಹುದು. ಏಜೆನ್ಸೀಸ್

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net