ಟಿಪ್ಪರ್ ಹರಿದು ಬೈಕ್​ ಸವಾರನ ತಲೆ ಛಿದ್ರ-ಛಿದ್ರ, ಭೀಕರ ಅಪಘಾತ ಕಂಡು ಪೊಲೀಸರೇ ಬೆಚ್ಚಿಬಿದ್ರು!

accident
Published on

ಚಾಮರಾಜನಗರ: ಸತ್ಯಮಂಗಲಂ ರಸ್ತೆಯಲ್ಲಿ ಶುಕ್ರವಾರ ಮಧ್ಯಾಹ್ನ ಭೀಕರ ಅಪಘಾತ ಸಂಭವಿಸಿದ್ದು, ಸ್ಥಳದಲ್ಲೇ ಬೈಕ್​ ಸವಾರರಿಬ್ಬರು ದುರ್ಮರಣ ಹೊಂದಿದ್ದಾರೆ.

ಬೈಕ್​ ಸವಾರನ ತಲೆ ಮೇಲೆ ಟಿಪ್ಪರ್​ ಹರಿದ ಪರಿಣಾಮ ಆತನ ತಲೆ ಛಿದ್ರಛಿದ್ರವಾಗಿ ರಸ್ತೆಯಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದಿತ್ತು. ಅಪಘಾತದ ಭೀಕರತೆ ಕಂಡ ಸ್ಥಳೀಯರು ಮಾತ್ರವಲ್ಲ ಪೊಲೀಸರೂ ಬೆಚ್ಚಿಬಿದ್ದರು. ಇದನ್ನೂ ಓದಿರಿ 3 ಸಾವಿರ ಹಣ ಕೊಟ್ಟು ನನ್ನ ಕಾರಿಗೆ ಡೀಸೆಲ್ ಹಾಕಿಸದಷ್ಟು ದುರ್ಗತಿ ಬಂದಿಲ್ಲ… ಎನ್ನುತ್ತಲೇ ಸಿಡಿಮಿಡಿಗೊಂಡ ಸವದಿ

ಅಪಘಾತದಲ್ಲಿ ಚಾಮರಾಜನಗರ ತಾಲೂಕು ಬ್ಯಾಡಮೂಡ್ಲು ಗ್ರಾಮದ ಮಣಿ (25) ಹಾಗೂ ಮತ್ತೊಬ್ಬ ಮೃಪಟ್ಟಿದ್ದಾರೆ. ಟಿಪ್ಪರ್ ಹಾಗೂ ಚಾಲಕನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಚಾಮರಾಜನಗರ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೃತರು ಹೆಲ್ಮೆಟ್ ಧರಿಸದೆ ಬೈಕ್​ನಲ್ಲಿ ಹೋಗುತ್ತಿದ್ದರು ಎನ್ನಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net