ಧರ್ಮಾಸ್ಪತ್ರೆಯಲ್ಲಿ ಸಕಾಲಕ್ಕೆ ದೊರೆಯದ ಸೇವೆ!

snr artho story
ಕೋಲಾರ ಜಿಲ್ಲಾ ಎಸ್​ಎನ್​ಆರ್​ ಆಸ್ಪತ್ರೆ.
Published on

* ಕಿರುವಾರ ಎಸ್​.ಸುದರ್ಶನ್​ ಕೋಲಾರ

ಬಡವರ ಪಾಲಿಗೆ ಧರ್ಮಾಸ್ಪತ್ರೆಯಾಗಿರುವ ಜಿಲ್ಲಾ ಎಸ್​ಎನ್​ಆರ್​ ಆಸ್ಪತ್ರೆ ರೋಗಿಗಳಿಗೆ ಸಕಾಲಕ್ಕೆ ಚಿಕಿತ್ಸೆ ಕಲ್ಪಿಸಲಾಗದ ಆರೋಪಕ್ಕೆ ಗುರಿಯಾಗಿದೆ.

ರಾಜಮಹಾರಾಜರ ಕಾಲದಲ್ಲಿ ಸ್ಥಾಪನೆಯಾಗಿರುವ ಆಸ್ಪತ್ರೆ ಇಂದು ಜನರಿಂದ ದೂರವಾಗುತ್ತಿದ್ದು, ಆಕಾಶದೆತ್ತರಕ್ಕೆ ಕಟ್ಟಡಗಳು, ಆಸ್ಪತ್ರೆ ತುಂಬಾ ವೈದ್ಯರು, ಶುಶ್ರೂಷಾಧಿಕಾರಿಗಳು, ಶುಶ್ರೂಷಕಿಯರು, ವೈದ್ಯಾಧಿಕಾರಿಗಳು, ಆಡಳಿತ ಅಧಿಕಾರಿಗಳಿದ್ದರೂ ತುರ್ತು ಸಂದರ್ಭದಲ್ಲಿ ಚಿಕಿತ್ಸೆ ಸಿಗದ ಸ್ಥಿತಿ ಇದೆ.

ಎಸ್​ಎನ್​ಆರ್​ ಆಸ್ಪತ್ರೆಯಲ್ಲಿನ ಮೂಳೆ ಮತ್ತು ಕೀಲು ವಿಭಾಗಕ್ಕೆ ನಿತ್ಯ 150ರಿಂದ 200 ಮಂದಿ ರೋಗಿಗಳು ಚಿಕಿತ್ಸೆಗಾಗಿ ಆಗಮಿಸುತ್ತಾರೆ. ಅದರಲ್ಲೂ ಅಪಘಾತ ಸಂದರ್ಭದಲ್ಲೋ, ಇನ್ಯಾವುದೋ ಸಂದರ್ಭದಲ್ಲಿ ಕೈ ಕಾಲು ಮುರಿದುಕೊಂಡು ಆಸ್ಪತ್ರೆಗೆ ಬರುತ್ತಾರೆ. ಅವರಿಗೆ ಶಸ್ತ್ರ ಚಿಕಿತ್ಸೆ ಲಭ್ಯವಿದ್ದಲ್ಲಿ ಸೇವೆ ಕಲ್ಪಿಸಲು ವೈದ್ಯರಿಂದ ಸಾಧ್ಯವಾಗುತ್ತಿಲ್ಲ.

ಇದಕ್ಕೆಲ್ಲ ಶಸ್ತ್ರ ಚಿಕಿತ್ಸೆ ಟಕದಲ್ಲಿನ (ಒಟಿ) ಯಂತ್ರ ಕೆಟ್ಟು 15 ದಿನಗಳೇ ಕಳೆದಿರುವುದೇ ಕಾರಣವಾಗಿದೆ. ಇದರಿಂದಾಗಿ ಆಸ್ಪತ್ರೆಗೆ ಬರುವವರನ್ನು ಜಿಲ್ಲಾಮಟ್ಟದ ಆಸ್ಪತ್ರೆಯಿಂದ ತಾಲೂಕುಮಟ್ಟದ ಆಸ್ಪತ್ರೆಗೆ ಮತ್ತು ಖಾಸಗಿ ಆಸ್ಪತ್ರೆಗೆ ಕಳುಹಿಸಿಲಾಗುತ್ತಿದೆ.

ಮೂಳೆ ಮುರಿತ, ಸೀಲು ಬಂದಿರುವ ಸಮಯದಲ್ಲಿ ತುರ್ತಾಗಿ ಶಸ್ತ್ರ ಚಿಕಿತ್ಸೆ ಕಲ್ಪಿಸಲೇಬೇಕು, ಆಸ್ಪತ್ರೆಯಲ್ಲಿನ ಪಿಎಆರ್​ಎಂ ಯಂತ್ರವು ಕೆಟ್ಟಿದ್ದು, ದುರಸ್ತಿ ಪಡಿಸಬೇಕು ಎಂದು ಮೂಳೆ ಮತ್ತು ಕೀಲು ತಜ್ಞ ವೈದ್ಯರು, ಆಸ್ಪತ್ರೆಯ ಶಸ್ತ್ರ ಚಿಕಿತ್ಸಕರಿಗೆ ಪತ್ರ ಬರೆದಿದ್ದಾರೆ. ಅದು ಕೇವಲ ಪತ್ರ ವ್ಯವಹಾರಕ್ಕೆ ಸಿಮೀತವಾಗಿದೆಯೇ ಹೊರತು ಯಾವುದೇ ರೀತಿಯ ಪ್ರಯೋಜನವಾಗಿಲ್ಲ. ಶಸ್ತ್ರ ಚಿಕಿತ್ಸೆ ಅಗತ್ಯವಿದ್ದು, ದಾಖಲಾಗಿರುವವರು ಹಲವು ದಿನಗಳು ಕಳೆದರೂ ಹಾಸಿಗೆಯ ಮೇಲೆ ಕಾಲ ಕಳೆಯುವಂತಾಗಿದೆ.

ಇತ್ತೀಚೆಗೆ ಇಬ್ಬರು ರೋಗಿಗಳಿಗೆ ತುರ್ತಾಗಿ ಮೂಳೆ ಶಸ್ತ್ರ ಚಿಕಿತ್ಸೆ ಮಾಡಬೇಕಾಗಿದ್ದರಿಂದ ಬಂಗಾರಪೇಟೆ ಮತ್ತು ಇತರ ಖಾಸಗಿ ಆಸ್ಪತ್ರೆಗೆ ರವಾನಿಸಲಾಗಿದೆ. ಶಸ್ತ್ರ ಚಿಕಿತ್ಸೆಗಾಗಿ ದಾಖಲಾಗಿರುವ ರೋಗಿಗಳು ಪರದಾಡುವಂತಾಗಿದೆ.

* ಬಿಲ್​ ಪಾವತಿಗೆ ವಿಳಂಬ

ಯಂತ್ರ ದುರಸ್ತಿಗೆ ಬೇಕಾದ ಸಲಕರಣೆಗೆ ತಗಲುವ ವೆಚ್ಚ ಕುರಿತು ದರಪಟ್ಟಿಯನ್ನು ಆಡಳಿತ ಮಂಡಳಿ ವೈದ್ಯರಿಗೆ ಸಲ್ಲಿಸಿದ್ದು, ಬಿಲ್​ ಪಾವತಿ ಮಾಡಿದರೆ ದುರಸ್ತಿಪಡಿಸಲು ಗುತ್ತಿಗೆ ಸಂಸ್ಥೆಯವರು ಸಿದ್ಧರಿದ್ದಾರೆ. ಆದರೆ ಅಧಿಕಾರಿಗಳು ವಿಳಂಬ ಮಾಡುತ್ತಿದ್ದಾರೆ ಎನ್ನಲಾಗಿದೆ.

* ಅಧಿಕಾರಿಗಳ ನಿರ್ಲಕ್ಷಕ್ಕೆ ರೋಗಿಗಳು ಹೈರಾಣ

ವೈದ್ಯಾಧಿಕಾರಿಗಳ ನಿರ್ಲಕ್ಷದಿಂದ ಹಿಂದೆ ಒಮ್ಮೆ ಅಗತ್ಯ ಸಲಕರಣೆ ಸರಬರಾಜು ಆಗಿರಲಿಲ್ಲ. ಆಗಲೂ ರೋಗಿಗಳು ಹಲವು ದಿನಗಳ ಕಾಲ ಆಸ್ಪತ್ರೆಯಲ್ಲೇ ಕಾಲಕಳೆದಿದ್ದರು. ಸರ್ಕಾರವು ವಿವಿಧ ಯೋಜನೆಗಳಡಿ ಗುಣಮಟ್ಟದ ಆರೋಗ್ಯ ಸೇವೆ ಕಲ್ಪಿಸಲು ಅನುದಾನದ ಕಲ್ಪಿಸಿದರೂ ಅಧಿಕಾರಿಗಳ ನಿರ್ಲಕ್ಷದಿಂದಕ್ಕೆ ರೋಗಿಗಳು ಹೈರಾಣಾಗುವಂತಾಗಿದೆ.

* ರಾಜಕೀಯ ಇಚ್ಛಾಶಕ್ತಿ ಕೊರತೆ

ಸ್ಥಳಿಯ ಜನಪ್ರತಿನಿಧಿಗಳು ಸಹ ಆಸ್ಪತ್ರೆಯ ಪರಿಸ್ಥಿತಿ ಗಂಭೀರವಾಗಿ ಪರಿಗಣಿಸಿ ವ್ಯವಸ್ಥೆ ಸರಿಪಡಿಸುವಲ್ಲಿ ವಿಲರಾಗಿದ್ದಾರೆ. ರಾಜಕೀಯ ಇಚ್ಛಾಶಕ್ತಿ ಕೊರತೆಯಿಂದ ಆಸ್ಪತ್ರೆಗೆ ಬರುವ ವೈದ್ಯರು ಸಮಸ್ಯೆ ಎದುರಿಸುವಂತಾಗಿದೆ ಎಂದು ಸಾರ್ವಜನಿಕರು ಕಿಡಿಕಾರಿದ್ದಾರೆ.

* ಕಾಯಂ ಡಿಎಸ್​ ನೇಮಕಕ್ಕೆ ಒತ್ತಾಯ

ಹಿಂದಿನ ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ.ವಿಜಯ್​ಕುಮಾರ್​ ಅವರು ನಿವೃತ್ತರಾಗಿ 2 ವರ್ಷ ಕಳೆದಿದೆ. ಇಲ್ಲಿಯವರೆಗೂ ಇಬ್ಬರು ವೈದ್ಯರು ಪ್ರಭಾರವಹಿಸಿಕೊಂಡು ಹುದ್ದೆ ನಿಭಾಯಿಸಿದರು. ಈಗ ಸರ್ವಲೆನ್ಸ್​ ಅಧಿಕಾರಿಯಾಗಿರುವ ಡಾ.ಜಗದೀಶ್​ ಅವರಿಗೆ ಸರ್ಕಾರ ಪ್ರಭಾರ ಹೊಣೆವಹಿಸಿದ್ದು, ಆಸ್ಪತ್ರೆಯ ಪರಿಸ್ಥಿತಿ ಸುಧಾರಣೆ ಕಾಣುತ್ತಿಲ್ಲ.

ಈ ಮಧ್ಯೆ ಆರೋಗ್ಯ ಇಲಾಖೆ ಸಚಿವ ದಿನೇಶ್​ ಗುಂಡೂರಾವ್​ ಆಸ್ಪತ್ರೆಗೆ ಬಂದು ಹೋದರೂ ಕಾಯಂ ಶಸ್ತ್ರ ಚಿಕಿತ್ಸಕರ ನೇಮಕ ಆಗಿಲ್ಲ. ಸಮಸ್ಯೆಗೆ ಸ್ಪಂದಿಸುವಂತ ಕಾಯಂ ಅಧಿಕಾರಿಗಳನ್ನು ನಿಯೋಜನೆ ಮಾಡಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

* ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ

ಸಂಬಂಧಿಕರೊಬ್ಬರಿಗೆ ಅಪಘಾತವಾಗಿ ಚಿಕಿತ್ಸೆಗಾಗಿ ಎಸ್​ಎನ್​ಆರ್​ ಆಸ್ಪತ್ರೆಗೆ ಕರೆದುಕೊಂಡು ಬರಲಾಯಿತು. ಎಕ್ಸ್​ರೇ ಮಾಡಿಸಿದಾಗ ಕೈ ಬೆರಳು ಕಟ್ಟಾಗಿರುವುದು ಗೊತ್ತಾಯಿತು. ಇದಕ್ಕೆ ಶಸ್ತ್ರ ಚಿಕಿತ್ಸೆಯು ಅಗತ್ಯವಿದ್ದು, ಇಲ್ಲಿ ಸೌಕರ್ಯವಿಲ್ಲ, ಬಂಗಾರಪೇಟೆಗೆ ಕರೆದುಕೊಂಡು ಹೋಗಿ ಅಲ್ಲಿನ ವೈದ್ಯರಿಗೆ ದೂರವಾಣಿ ಕರೆ ಮಾಡಿ ಹೇಳುತ್ತೇವೆ ಎಂದು ವೈದ್ಯರು ತಿಳಿಸಿದರು. ಅನಿವಾರ್ಯವಾಗಿ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಲಾಯಿತು ಎಂದು ರೋಗಿಯ ಸಂಬಂಧಿಕರೊಬ್ಬರು ತಿಳಿಸಿದರು.

ಕೋಟ್​...

ಎಸ್​ಎನ್​ಆರ್​ ಆಸ್ಪತ್ರೆಯು ಬಡವರ ಪಾಲಿಗೆ ಆರೋಗ್ಯ ನೀಡುವ ದೇಗುಲ ಆಗಬೇಕಿತ್ತು, ಆದರೆ ಈಗ ನಕರವಾಗಿ ಮಾರ್ಪಟ್ಟಿದೆ. ತುರ್ತು ಸಂದರ್ಭದಲ್ಲಿ ಬಂದರೆ ಬಲವಂತವಾಗಿ ಖಾಸಗಿ ಆಸ್ಪತ್ರೆಗೆ ಕಳುಹಿಸುತ್ತಾರೆ. ಜಿಲ್ಲಾ ಸ್ಪತ್ರೆಯಿಂದ ತಾಲೂಕು ಆಸ್ಪತ್ರೆಗೆ ರೋಗಿಗಳನ್ನು ರವಾನಿಸುತ್ತಾರೆ ಎಂದರೆ ಜಿಲ್ಲಾಸ್ಪತ್ರೆಯ ವೈದ್ಯಾಧಿಕಾರಿಗಳ ವಿಲತೆ ಕಾರಣವಾಗಿದೆ.

- ಕೆ.ನಾರಾಯಣಗೌಡ, ಉಪಾಧ್ಯಕ್ಷ, ರೈತ ಸಂಘ, ಕೋಲಾರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net