"ಇದು ನನ್ನ ಸ್ವಂತ ನಿರ್ಧಾರ": ಗಂಭೀರ ಆರೋಪ ಬೆನ್ನಲ್ಲೇ ಬಿಬಿಸಿ ಮುಖ್ಯಸ್ಥ ಟಿಮ್​ ಡೇವಿ ರಾಜೀನಾಮೆ! | Tim Davie

"ಇದು ನನ್ನ ಸ್ವಂತ ನಿರ್ಧಾರ": ಗಂಭೀರ ಆರೋಪ ಬೆನ್ನಲ್ಲೇ ಬಿಬಿಸಿ ಮುಖ್ಯಸ್ಥ ಟಿಮ್​ ಡೇವಿ ರಾಜೀನಾಮೆ! | Tim Davie
Published on

ಯುಎಸ್​: ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ ಅವರ ಭಾಷಣವನ್ನು ತಿರುಚಿ ಪ್ರಸಾರ ಮಾಡಿದ ರೀತಿಗೆ ಬಿಬಿಸಿ ಸುದ್ದಿ ಸಂಸ್ಥೆ ಭಾರೀ ಟೀಕೆ, ವ್ಯಂಗ್ಯಗಳಿಗೆ ಗುರಿಯಾಗಿತ್ತು. ಈ ಗಂಭೀರ ಆರೋಪಗಳಿಂದ ಇದೀಗ ಬಿಬಿಸಿ ಮಹಾನಿರ್ದೇಶಕ ಹುದ್ದೆಗೆ ಟಿಮ್ ಡೇವಿ (Tim Davie) ರಾಜೀನಾಮೆ ಘೋಷಿಸಿರುವುದು ಸದ್ಯ ಹಲವರ ಅಚ್ಚರಿಗೆ ಕಾರಣವಾಗಿದೆ.

ಟಿಮ್ ಅವರ ಹಾದಿಯನ್ನೇ ಅನುಸರಿಸಿದ ಬಿಬಿಸಿ ಸುದ್ದಿ ಮುಖ್ಯಸ್ಥೆ ಡೆಬೊರಾ ಟರ್ನೆಸ್ ಕೂಡ ರಾಜೀನಾಮೆ ಸಲ್ಲಿಸಿದ್ದಾರೆ. "ಈ ವಿವಾದವು ನಾವು ಪ್ರೀತಿಸುವ ಸಂಸ್ಥೆಯ ಮೇಲೆ ದೊಡ್ಡ ಹಾಗೂ ಕೆಟ್ಟ ಪರಿಣಾಮ ಬೀರುತ್ತಿದೆ. ಹೀಗಾಗಿ, ಉನ್ನತ ಸ್ಥಾನಕ್ಕೆ ಗುಡ್​ಬೈ ಹೇಳುತ್ತಿರುವೆ. ಇದು ಸಂಪೂರ್ಣವಾಗಿ ನನ್ನದೇ ನಿರ್ಧಾರ" ಎಂದು ಟಿಮ್ ತಿಳಿಸಿದ್ದಾರೆ.

ಏನಿದು ಆರೋಪ, ಅಷ್ಟಕ್ಕೂ ಆಗಿದ್ದೇನು?

2021ರ ಜನವರಿ 6ರಂದು ವಾಷಿಂಗ್ಟನ್ ಕ್ಯಾಪಿಟಲ್​ ಮೇಲೆ ದುಷ್ಕರ್ಮಿಗಳ ಗುಂಪೊಂದು ನಡೆಸಿದ ದಾಳಿ ನಂತರದಲ್ಲಿ ಅಮೆರಿಕ ಅಧ್ಯಕ್ಷರು ಮಾಡಿದ್ದ ಭಾಷಣದ ತುಣುಕನ್ನು ತಮ್ಮ ಸಾಕ್ಷ್ಯಚಿತ್ರಕ್ಕೆ ಬಳಸಿಕೊಂಡಿದ್ದ ಬಿಬಿಸಿ, ಅದನ್ನು ತಿರುಚಿ ಪ್ರಸಾರ ಮಾಡಿತು ಎಂಬ ಆರೋಪಕ್ಕೆ ತುತ್ತಾಯಿತು. ಈ ಗಂಭೀರ ಟೀಕೆಗಳ ಬೆನ್ನಲ್ಲೇ ಟಿಮ್ ಮತ್ತು ಡೆಬೊರಾ ತಮ್ಮ ಹುದ್ದೆಗಳಿಗೆ ರಾಜೀನಾಮೆ ಕೊಟ್ಟು ಸಂಸ್ಥೆಯಿಂದ ಹೊರನಡೆದಿರುವುದು ಸದ್ಯ ಅಚ್ಚರಿಯ ಬೆಳವಣಿಗೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net