

ನವದೆಹಲಿ: ಮೀನನ್ನು ತಿಂದ ಮಹಿಳೆಯೊಬ್ಬಳು ಕೈಗಳ ಜತೆಗೆ ಕಾಲುಗಳನ್ನೂ ಕಳೆದುಕೊಂಡ ಅಚ್ಚರಿಯ ಪ್ರಕರಣವೊಂದು ನಡೆದಿದೆ. ಈ ಮಹಿಳೆ ಟಿಲೇಪಿಯಾ ಎಂಬ ಮೀನನ್ನು ತಿಂದ ಬಳಿಕ ಈ ರೀತಿ ಆಗಿದೆ. ಕ್ಯಾಲಿಪೋರ್ನಿಯಾದಲ್ಲಿ ಈ ಘಟನೆ ನಡೆದಿದೆ.
ಇಲ್ಲಿನ 40 ವರ್ಷದ ಲಾರಾ ಬರಾಜಸ್ ಎಂಬ ಮಹಿಳೆ ಇಂಥದ್ದೊಂದು ಸಂಕಷ್ಟಕ್ಕೆ ಒಳಗಾಗಿದ್ದಾಳೆ. ಕೆಲವು ದಿನಗಳ ಹಿಂದೆ ಈ ಮೀನನ್ನು ತಿಂದಿದ್ದ ಈಕೆ ತಿಂಗಳುಗಳ ಕಾಲ ಆಸ್ಪತ್ರೆಯಲ್ಲಿದ್ದು, ಕೊನೆಗೂ ಆಕೆಯ ಕೈ ಹಾಗೂ ಕಾಲುಗಳನ್ನು ಶಸ್ತ್ರಚಿಕಿತ್ಸೆ ಮಾಡಿ ತೆಗೆಯಲಾಗಿದೆ.
ಈಕೆ ತೀವ್ರವಾದ ರೋಗಕ್ಕೆ ಒಳಗಾಗಿದ್ದ ಟಿಲೇಪಿಯಾ ಎಂಬ ಮೀನನ್ನು ಸೇವಿಸಿದ್ದಳು. ಅಲ್ಲದೆ ಅದನ್ನು ಸರಿಯಾಗಿ ಬೇಯಿಸಿರಲಿಲ್ಲ. ಹೀಗಾಗಿ ಅದರಲ್ಲಿನ ಒಂದು ಭಾರಿ ಬ್ಯಾಕ್ಟೀರಿಯಾದಿಂದ ಈಕೆ ಸೋಂಕಿಗೆ ಒಳಗಾಗಿ ತೀವ್ರ ಅಸ್ವಸ್ಥಗೊಂಡಿದ್ದಳು. ಈಕೆ ಇಲ್ಲಿನ ಸ್ಥಳೀಯ ಸ್ಯಾನ್ಜೋಸ್ನ ಮಾರ್ಕೆಟ್ನಲ್ಲಿ ಮೀನು ಖರೀದಿಸಿದ್ದಳು.
ಈ ರೋಗಗ್ರಸ್ಥ ಮೀನನ್ನು ತಿಂದ ಬಳಿಕ ಈಕೆಯ ಕೈ ಬೆರಳುಗಳು ಹಾಗೂ ಕಪ್ಪಿಟ್ಟುಕೊಂಡಿವೆ. ಹಾಗೆಯೇ ದೇಹದ ನಾನಾ ಕಡೆ ಕಪ್ಪು ಕಟ್ಟಿದ್ದು, ಬಳಿಕ ಈಕೆ ಕೋಮಾಗೂ ಒಳಗಾಗಿದ್ದಳು. ಕೊನೆಗೂ ಆಸ್ಪತ್ರೆಯಲ್ಲಿ ತಿಂಗಳ ಕಾಲ ಚಿಕಿತ್ಸೆ ಪಡೆದ ಬಳಿಕ ಈಕೆ ಚೇತರಿಸಿಕೊಂಡಿದ್ದು, ಗುರುವಾರ ಕೈ-ಕಾಲುಗಳನ್ನು ಸರ್ಜರಿ ಮೂಲಕ ತೆಗೆಯಲಾಗಿದೆ. -ಏಜೆನ್ಸೀಸ್