

ನವದೆಹಲಿ: ಲಾಕ್ಡೌನ್ ಸಮಯದ ನಡುವೆ ಮೇ ತಿಂಗಳಲ್ಲಿ ಹೆಚ್ಚು ಡೌನ್ಲೋಡ್ ಮಾಡಲ್ಪಟ್ಟ ನಾನ್ ಗೇಮ್ ಆ್ಯಪ್ಗಳಲ್ಲಿ ಟಿಕ್ಟಾಕ್ ಮೊದಲನೇ ಸ್ಥಾನದಲ್ಲಿರುವುದಾಗಿ ಅನಾಲಿಟಿಕ್ಸ್ ಫ್ಲಾಟ್ಫಾರ್ಮ್ ಸೆನ್ಸಾರ್ ಟವರ್ ವರದಿಯಲ್ಲಿ ಬಹಿರಂಗವಾಗಿದೆ.
ಚೀನಾ ಮೂಲದ ವಿಡಿಯೋ ಶೇರಿಂಗ್ ಆ್ಯಪ್ ಟಿಕ್ಟಾಕ್ ಮೇ ತಿಂಗಳಲ್ಲಿ ಬರೋಬ್ಬರಿ 112 ಮಿಲಿಯನ್ ಬಾರಿ ಡೌನ್ಲೋಡ್ ಆಗಿದೆ. ಇದರಲ್ಲಿ ಐದನೇ ಒಂದು ಭಾಗ ಭಾರತದಲ್ಲೇ ಡೌನ್ಲೋಡ್ ಆಗಿದೆ. ಈ ಮೂಲಕ ಟಿಕ್ಟಾಕ್ ಆ್ಯಪ್ಗೆ ಭಾರತ ಬಹುದೊಡ್ಡ ಮಾರುಕಟ್ಟೆ ಎಂಬುದು ಮತ್ತೊಮ್ಮೆ ಸಾಬೀತಾಗಿದೆ. ಎರಡನೇ ಸ್ಥಾನದಲ್ಲಿ ಅಮೆರಿಕ ಇದೆ. ಇಲ್ಲಿ ಶೇ 9 ರಷ್ಟು ಡೌನ್ಲೋಡ್ ಆಗಿವೆ. ಮೇ 2019ಕ್ಕಿಂತ 2020ರ ಮೇನಲ್ಲಿ ಅತ್ಯಧಿಕ ಡೌನ್ಲೋಡ್ ಆಗಿವೆ. ಇದನ್ನೂ ಓದಿ: ಸಾಯಿ ಪಲ್ಲವಿಯವರ ಫಸ್ಟ್ ಸಿನಿಮಾ ಪ್ರೇಮಂ ಅಲ್ಲ: ಮೊದಲ ಚಿತ್ರದಲ್ಲೇ ಆಗಿತ್ತಂತೆ ಕೆಟ್ಟ ಅನುಭವ
ಇನ್ನು ಗೂಗಲ್ ಪ್ಲೇ ಸ್ಟೋರ್ನಲ್ಲಿ ಫೇಸ್ಬುಕ್, ವಾಟ್ಸ್ಆ್ಯಪ್ ಹಾಗೂ ನೂತನ ವಿಡಿಯೋ ಕಾನ್ಫರೆನ್ಸ್ ಆ್ಯಪ್ ಜೂಮ್ ಹಿಂದಿಕ್ಕಿ ಟಿಕ್ಟಾಕ್ ಟಾಪ್ನಲ್ಲಿದೆ. ಆ್ಯಪಲ್ ಆ್ಯಪ್ ಸ್ಟೋರ್ನಲ್ಲಿ ಟಿಕ್ಟಾಕ್ಗಿಂತ ಜೂಮ್ ಮೊದಲ ಸ್ಥಾನದಲ್ಲಿದ್ದು, ಯೂಟ್ಯೂಬ್ ಎರಡನೇ ಸ್ಥಾನದಲ್ಲಿದೆ.
ಏಪ್ರಿಲ್ಗೆ ಹೋಲಿಸಿದರೆ ಮೇ ತಿಂಗಳಲ್ಲಿ ಟಿಕ್ಟಾಕ್ ಹೆಚ್ಚು ಡೌನ್ಲೋಡ್ ಆಗಿದೆ. ಏಪ್ರಿಲ್ನಲ್ಲಿ ಜಾಗತಿಕವಾಗಿ 107 ಮಿಲಿಯನ್ ಆಗಿತ್ತು. ಮೇನಲ್ಲಿ 112 ಮಿಲಿಯನ್ ಡೌನ್ಲೋಡ್ ಆಗಿದೆ. ಇಲ್ಲೂ ಸಹ ಭಾರತವೇ ಮುಂದಿದೆ.
ಅಂದಹಾಗೆ ಟಿಕ್ಟಾಕ್ ಅನ್ನು ಚೀನಾ ಅಂತರ್ಜಾಲ ತಂತ್ರಜ್ಞಾನ ಕಂಪನಿ ಬೈಟೆಡ್ಯಾನ್ಸ್ ಅಭಿವೃದ್ಧಿಪಡಿಸಿದೆ. ಟಿಕ್ಟಾಕ್ಗೆ ಪ್ಲೇ ಸ್ಟೋರ್ನಲ್ಲಿ 4.4 ರೇಟಿಂಗ್ ನೀಡಲಾಗಿದೆ. ಆ್ಯಪ್ ಸ್ಟೋರ್ನಲ್ಲಿ 3.4 ರೇಟಿಂಗ್ ಕೊಡಲಾಗಿದ್ದು, ಜೂನ್ 8ರವರೆಗೆ 21 ಮಿಲಿಯನ್ಸ್ ವಿಮರ್ಶೆಗಳು ಹರಿದುಬಂದಿವೆ. ಇದನ್ನೂ ಓದಿ: ನಟ ಸುಶಾಂತ್ ಸಿಂಗ್ ಮಾಜಿ ಮ್ಯಾನೇಜರ್ 14ನೇ ಮಹಡಿಯಿಂದ ಜಿಗಿದು ಆತ್ಮಹತ್ಯೆಗೆ ಶರಣು
ಜಾಗತಿಕವಾಗಿ ಬಿಕ್ಕಟ್ಟು ಸೃಷ್ಟಿಸಿರುವ ಕರೊನಾ ವೈರಸ್ ಹುಟ್ಟು ಚೀನಾದಲ್ಲಿ ಆಗಿರುವುದರಿಂದ ಚೀನಾ ವಿರುದ್ಧ ಅನೇಕ ರಾಷ್ಟ್ರಗಳು ಆಕ್ರೋಶ ಹೊರಹಾಕಿವೆ. ಭಾರತವು ಸಹ ಚೀನಾ ನರಿಬುದ್ಧಿಯ ಬಗ್ಗೆ ಆಗಾಗಾ ಟೀಕಾ ಪ್ರಹಾರ ನಡೆಸುತ್ತಿದ್ದು, ಚೀನಾ ನಿರ್ಮಿತ ಟಿಕ್ಟಾಕ್ ಆ್ಯಪ್ ಬಳಸದಂತೆ ಹಲವು ಅಭಿಯಾನಗಳು ಸಾಮಾಜಿಕ ಜಾಲತಾಣದಲ್ಲಿ ನಡೆಯುತ್ತಿದೆ. (ಏಜೆನ್ಸೀಸ್)