ಟಿಕ್​ಟಾಕ್​ ಸ್ಟಾರ್​ ಆತ್ಮಹತ್ಯೆ! ನಾನು ನೀವೆಂದುಕೊಂಡಷ್ಟು ಚೆನ್ನಾಗಿಲ್ಲ ಎಂದು ಕೊನೆಯ ಪೋಸ್ಟ್​!

tiktok
Published on

ಬ್ಯಾಟನ್ ರೂಜ್: ಟಿಕ್​ಟಾಕ್​ನಲ್ಲಿ ಸಕತ್​ ಫೇಮಸ್​ ಆಗಿದ್ದ ಯುವತಿಯೊಬ್ಬಳು ಇದೀಗ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಈಗಿನ್ನೂ 18ನೇ ವಯಸ್ಸಿಗೆ ಕಾಲಿಟ್ಟಿದ್ದ ಆಕೆ, ನಾನು ನೀವೆಂದುಕೊಂಡಷ್ಟು ಚೆನ್ನಾಗಿಲ್ಲ ಎಂದು ಕೊನೆಯ ಪೋಸ್ಟ್​ ಮಾಡಿ ಆತ್ಮಹತ್ಯೆಗೆ ಶರಣಾಗಿದ್ದಾಳೆ.

ಈ ರೀತಿ ಏಕಾಏಕಿ ಆತ್ಮಹತ್ಯೆ ಮಾಡಿಕೊಂಡಿರುವುದು ಲೂಸಿಯಾನಾದ ಟಿಕ್​ಟಾಕ್​ ಸ್ಟಾರ್​ ಡಜಾರಿಯಾ ಕ್ವಿಂಟ್ ನಾಯ್ಸ್. ಈಕೆ ಡೀ ಹೆಸರಿನಿಂದಲೇ ಖ್ಯಾತಿ ಪಡೆದಿದ್ದಳು. ಟಿಕ್​ಟಾಕ್​ನಲ್ಲಿ 10 ಲಕ್ಷಕ್ಕೂ ಹೆಚ್ಚು ಫಾಲೋವರ್ಸ್​ನ್ನು ಹೊಂದಿದ್ದಳು. ಇನ್​ಸ್ಟಾಗ್ರಾಂನಲ್ಲಿಯೂ ಈಕೆಯ ಅಭಿಮಾನಿಗಳ ಸಂಖ್ಯೆ 15 ಲಕ್ಷಕ್ಕೂ ಹೆಚ್ಚಿದೆ.

ನೋಡಲು ಮುದ್ದಾಗಿ ಕಾಣಿಸುವ ಈ ಡೀ ಸಾಯುವುದಕ್ಕೂ ಮುನ್ನ ಕೆಲ ಪೋಸ್ಟ್​ಗಳನ್ನು ಇನ್​ಸ್ಟಾಗ್ರಾಂನಲ್ಲಿ ಹಾಕಿದ್ದಾಳೆ. ತಾನು ಹಾಡು ಹೇಳುವ ವಿಡಿಯೋಗಳನ್ನು ಹಾಕಿಕೊಂಡು ನಂತರ ಕೊನೆಯಲ್ಲಿ, ಮೇಕಪ್​ ತೆಗೆದ ನಂತರ ತಾನು ಹೇಗೆ ಕಾಣುತ್ತೇನೆನ್ನುವ ಫೋಟೋ ಹಾಕಿಕೊಂಡಿದ್ದಾಳೆ. ನಾನು ನೀವೆಂದುಕೊಂಡಷ್ಟು ಚೆನ್ನಾಗಿಲ್ಲ, ಮೇಕಪ್​ ನನ್ನನ್ನು ಚೆಂದಗಾಣಿಸುತ್ತದೆ ಎಂದು ಬರೆದುಕೊಂಡಿದ್ದಾಳೆ. ಈ ಎಲ್ಲ ಪೋಸ್ಟ್​ಗಳಿಗೆ ಲಾಸ್ಟ್​ ಪೋಸ್ಟ್​ ಎನ್ನುವ ಕ್ಯಾಪ್ಶನ್​ ಕೊಟ್ಟುಕೊಂಡಿದ್ದಾಳೆ.

ಡೀ ನೇಣು ಬಿಗಿದುಕೊಂಡು ಸಾವನ್ನಪ್ಪಿರುವುದಾಗಿ ಆಕೆಯ ಕುಟುಂಬಸ್ಥರು ತಿಳಿಸಿದ್ದಾರೆ. ಆಕೆಯ ತಂದೆ ಭಾವನಾತ್ಮಕವಾಗಿ ಮಗಳ ಬಗ್ಗೆ ಹೇಳಿಕೊಂಡಿದ್ದಳು. ನನ್ನ ಪುಟಾಣಿ ಬೆಸ್ಟ್​ ಫ್ರೆಂಡ್​ ಅವಳಾಗಿದ್ದಳು. ನಾನು ಇಷ್ಟು ಬೇಗ ನಿನ್ನನ್ನು ಹೂತು ಹಾಕಲು ಸಿದ್ಧನಿರಲಿಲ್ಲ ಮಗಳೇ. ನೀನು ಖಿನ್ನತೆಯಲ್ಲಿರುವುದನ್ನು ನನ್ನ ಬಳಿ ಹೇಳಿಕೊಳ್ಳಬಹುದಿತ್ತು. ನಿನ್ನನ್ನು ಹಕ್ಕಿಯಂತೆ ಹಾರಲು ಬಿಡಬೇಕು ಎಂದುಕೊಂಡಿದ್ದೆ. ನಾನು ಮನೆಗೆ ಬಂದಾಗ ನೀನು ನನಗೋಸ್ಕರ ಕಾಯುತ್ತಿದ್ದುದ್ದನ್ನು ಕಂಡು ಅದೆಷ್ಟು ಖುಷಿ ಪಡುತ್ತಿದೆ.. ಈ ಡ್ಯಾಡಿ ನಿನ್ನ ಯಾವಾಗಲೂ ಪ್ರೀತಿಸುತ್ತಾನೆ ಎಂದು ಅವರು ಬರೆದುಕೊಂಡಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net