ನಿರ್ಭಯಾ ಅತ್ಯಾಚಾರ ಅಪರಾಧಿಗಳಿಗೆ ಹೊಸ ಡೆತ್​ವಾರೆಂಟ್ ಜಾರಿಗೆ ದೆಹಲಿ ಪಟಿಯಾಲಾ ಕೋರ್ಟ್​ಗೆ ಅರ್ಜಿ ಸಲ್ಲಿಸಲು ತಿಹಾರ ಜೈಲು ಆಡಳಿತದ ನಿರ್ಧಾರ

Delhi 4 Mrch 20
Published on

ನವದೆಹಲಿ: ಅಪರಾಧಿ ಪವನ್​ ಗುಪ್ತಾ ಸಲ್ಲಿಸಿದ್ದ ಕ್ಷಮಾದಾನ ಅರ್ಜಿಯನ್ನು ರಾಷ್ಟ್ರಪತಿ ರಾಮನಾಥ ಕೋವಿಂದ ಅವರು ತಿರಸ್ಕರಿಸಿದ ಬೆನ್ನಲ್ಲೇ ತಿಹಾರ್​ ಜೈಲು ಆಡಳಿತ ದೆಹಲಿ ಪಟಿಯಾಲ ಹೌಸ್​ ಕೋರ್ಟ್​ ಮೆಟ್ಟಿಲೇರಲು ಮುಂದಾಗಿದೆ. ನಿರ್ಭಯಾ ಅತ್ಯಾಚಾರ ಅಪರಾಧಿಗಳಿಗೆ ಹೊಸದಾಗಿ ಡೆತ್​ ವಾರೆಂಟ್​ ಜಾರಿ ಮಾಡಿ ಎಂದು ಅರ್ಜಿ ಸಲ್ಲಿಸುತ್ತೇವೆ ಎಂದು ಜೈಲು ವಕ್ತಾರ ತಿಳಿಸಿದ್ದಾರೆ.

ಪವನ್​ ಗುಪ್ತಾ ಸಲ್ಲಿಸಿದ್ದ ಕ್ಷಮಾದಾನ ಅರ್ಜಿಯನ್ನು ರಾಷ್ಟ್ರಪತಿ ರಾಮನಾಥ ಕೋವಿಂದ ಅವರು ವಜಾ ಮಾಡಿದ್ದಾರೆ. ಶೀಘ್ರವೇ ಹೊಸ ಡೆತ್​ ವಾರೆಂಟ್​ ಜಾರಿ ಮಾಡಬೇಕು. ಗಲ್ಲಿಗೇರಿಸಲು ಹೊಸ ದಿನಾಂಕವನ್ನು ನಿಗದಿಪಡಿಸಬೇಕು ಎಂದು ದೆಹಲಿ ಪಟಿಯಾಲ ಕೋರ್ಟ್​ಗೆ ಮನವಿ ಮಾಡುತ್ತೇವೆ ಎಂದು ಹೇಳಿದ್ದಾರೆ.

ಎಲ್ಲ ಅಪರಾಧಿಗಳೂ ಕಾನೂನು ಪ್ರಕ್ರಿಯೆಯಲ್ಲಿ ತಮ್ಮ ಸಂಪೂರ್ಣ ಹಕ್ಕುಗಳನ್ನು ಬಳಸಿಕೊಂಡಿದ್ದಾರೆ. ಹಾಗಾಗಿ ಅವರ ಗಲ್ಲುಶಿಕ್ಷೆಗೆ ಇನ್ನು ಮುಂದೆ ಕೋರ್ಟ್ ನಿಗದಿ ಪಡಿಸುವ ದಿನವೇ ಅಂತಿಮವಾಗಿರುತ್ತದೆ ಎಂದು ಜೈಲು ಆಡಳಿತಾಧಿಕಾರಿಗಳು ತಿಳಿಸಿದ್ದಾರೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net