VIDEO| ನಾನು ಮೃತಪಟ್ಟಿದ್ದೇನೆ ಎಂಬುದು ಸುಳ್ಳು ಸುದ್ದಿ, ನಾನಿನ್ನು ಬದುಕಿದ್ದೇನೆ; ಸಿಂಗಾಪುರದಿಂದ ಟ್ವೀಟ್​ ಮಾಡಿದ ಮಾಜಿ ಸಂಸದ ಅಮರ್​ ಸಿಂಗ್​!

AMAR SINGH
Published on

ನವದೆಹಲಿ: ಸಮಾಜವಾದಿ ಪಕ್ಷದ ಮಾಜಿ ಮುಖಂಡ ಅಮರ್ ಸಿಂಗ್ ಮೃತಪಟ್ಟಿದ್ದಾರೆ ಎಂದು ಸುಳ್ಳು ಸುದ್ದಿ ಹಬ್ಬಿತ್ತು. ಆದರೆ ಸ್ವತಃ ಅಮರ್​ಸಿಂಗ್​ ಅವರೇ "ನಾನಿನ್ನು ಬುದುಕಿದ್ದೇನೆ" ಎಂದು ಟ್ವೀಟ್​ ಮಾಡಿದ್ದಾರೆ.

"ನಾನು ಸಿಂಗಾಪುರದಲ್ಲಿದ್ದು, ಕಿಡ್ನಿ ಸಮಸ್ಯೆಗೆ ಚಿಕಿತ್ಸೆ ಪಡೆಯಲು ಬಂದಿದ್ದೇನೆ. ಚಿಕಿತ್ಸೆಯ ರಿವಾಜುಗಳನ್ನೆಲ್ಲ ಮುಗಿಸಿ ಭಾರತಕ್ಕೆ ವಾಪಸ್​ ಆಗುತ್ತೇನೆ" ಎಂದು ವಿಡಿಯೋ ಮಾಡಿ ಟ್ವೀಟರ್​ನಲ್ಲಿ ಹಂಚಿಕೊಂಡಿದ್ದಾರೆ.

ಇದಕ್ಕೆ "ಟೈಗರ್​ ಜಿಂದಾ ಹೈ" ಎಂಬ ಶೀರ್ಷಿಕೆ ನೀಡಲಾಗಿದ್ದು ನನ್ನ ಹಿತೈಷಿಗಳಿಗೆ ಮತ್ತು ನಾನು ಸಾಯ ಬಯಸುವವರಿಗೆ ತಿಳಿಸುವುದೇನೆಂದರೆ ನಾನು ಚಿಕಿತ್ಸೆ ಪಡೆಯುತ್ತಿದ್ದೇನೆ. ನಾನು ಹಿಂದಿರುಗುತ್ತೇನೆ ಎಂದಿದ್ದಾರೆ.

64 ವರ್ಷದ ಅಮರ್​ ಸಿಂಗ್​ ಅವರು ಮೃತಪಟ್ಟಿದ್ದಾರೆ ಎಂಬ ವದಂತಿ ಹಬ್ಬಿದ ಮರು ದಿನ ಈ ವಿಡಿಯೋವನ್ನು ಅವರು ಹಂಚಿಕೊಂಡಿದ್ದಾರೆ.

"ನನ್ನ ಕೆಲ ಸ್ನೇಹಿತರು ನಾನು ಯಮರಾಜನ ಬಳಿ ಹೋಗಿದ್ದೇನೆಂದು ಸುದ್ದಿ ಹಬ್ಬಿಸುತ್ತಿದ್ದಾರೆ. ಅದು ಸುಳ್ಳು. ನನ್ನಲ್ಲಿ ಇನ್ನೂ ಧೈರ್ಯ, ಉತ್ಸಾಹಗಳಿವೆ. ನನ್ನ ಚಿಕಿತ್ಸೆ ಮುಗಿದ ನಂತರ ಭವಾನಿದೇವಿಯ ಆಶೀರ್ವಾದದಿಂದ ಡಬಲ್​ ಉತ್ಸಾಹದಲ್ಲಿ ವಾಪಸ್​ ಬರುತ್ತೇನೆ" ಎಂದು ವಿಡಿಯೋದಲ್ಲಿ ಹೇಳಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net