ಹುಲಿ ವಿಜಯ್ ಅನಾರೋಗ್ಯದಿಂದ ಸಾವು

Tiger dies in safari
ಗಂಡು ಹುಲಿ ವಿಜಯ್
Published on

ಶಿವಮೊಗ್ಗ: ತ್ಯಾವರೆಕೊಪ್ಪ ಮೃಗಾಲಯದ ಕೇಂದ್ರಬಿಂದುವಾಗಿದ್ದ ಏಕೈಕ ಗಂಡು ಹುಲಿ ವಿಜಯ್(17) ಅನಾರೋಗ್ಯದಿಂದ ಮಂಗಳವಾರ ಮೃತಪಟ್ಟಿದೆ.

ತ್ಯಾವರೆಕೊಪ್ಪ ಮೃಗಾಲಯದಲ್ಲೇ ಜನಿಸಿದ್ದ ವಿಜಯ್, ವಯೋಸಹಜ ಆರೋಗ್ಯ ಸಮಸ್ಯೆ ಮತ್ತು ಸ್ನಾಯು ನೋವಿನಿಂದಾಗಿ ಆಹಾರ ತ್ಯಜಿಸಿತ್ತು. ಕಳೆದೊಂದು ತಿಂಗಳಿಂದ ಯಾವುದೇ ಚಟುವಟಿಕೆಯಿಲ್ಲದ ವಿಜಯ್‌ನನ್ನು ಸಫಾರಿಯ ಹುಲಿ ಮನೆಯಲ್ಲಿ ಆರೈಕೆ ಮಾಡಲಾಗುತ್ತಿತ್ತು. ಆದರೆ ಚಿಕಿತ್ಸೆ ಫಲಿಸದೆ ವಿಜಯ್ ಮೃತಪಟ್ಟಿದ್ದು, ಮೃಗಾಲಯ ನಿಯಮದಂತೆ ಅಂತ್ಯಸಂಸ್ಕಾರ ಮಾಡಲಾಗಿದೆ.

ವಿಜಯ್ ಸಾವಿನಿಂದ ತ್ಯಾವರೆಕೊಪ್ಪ ಮೃಗಾಲಯದಲ್ಲಿ ಗಂಡು ಹುಲಿಗಳೇ ಇಲ್ಲದಂತಾಗಿದ್ದು ಹುಲಿಗಳ ಸಂಖ್ಯೆ ನಾಲ್ಕಕ್ಕೆ ಇಳಿಕೆಯಾಗಿದೆ. ದಶಮಿ(17), ಸೀತಾ(16), ಪೂರ್ಣಿಮಾ(12) ಮತ್ತು ನಿವೇದಿತಾ(12) ಹೆಣ್ಣು ಹುಲಿಗಳು ಪ್ರವಾಸಿಗರ ವೀಕ್ಷಣೆಗೆ ಲಭ್ಯ ಇವೆ ಎಂದು ತ್ಯಾವರೆಕೊಪ್ಪ ಮೃಗಾಲಯದ ಕಾರ್ಯನಿರ್ವಾಹಕ ನಿರ್ದೇಶಕ ಅಮರಾಕ್ಷರ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net