ಚಾಕಳ್ಳಿ ಗ್ರಾಮದ ಜಮೀನುಗಳಲ್ಲಿ ಹುಲಿ ಹೆಜ್ಜೆ ಗುರುತು ಪತ್ತೆ

IMG-20231105-WA0049
Published on

ಮೈಸೂರು : ಎಚ್.ಡಿ.ಕೋಟೆ ತಾಲೂಕಿನ ಚಾಕಳ್ಳಿ ಗ್ರಾಮದ ಜಮೀನುಗಳಲ್ಲಿ ಹುಲಿಯ ಹೆಜ್ಜೆ ಗುರುತುಗಳು ಕಂಡುಬಂದಿದ್ದು, ಗ್ರಾಮಸ್ಥರು ಆತಂಕಗೊಂಡಿದ್ದಾರೆ. ಗ್ರಾಮದ ಜಮೀನುಗಳಲ್ಲೇ ಹುಲಿ ಬೀಡು ಬಿಟ್ಟಿರುವ ಬಗ್ಗೆ ಶಂಕೆ ವ್ಯಕ್ತವಾಗುತ್ತಿದ್ದು, ಹುಲಿಯನ್ನು ಸೆರೆ ಹಿಡಿಯುವಂತೆ ಅರಣ್ಯ ಇಲಾಖೆಯನ್ನು ಒತ್ತಾಯಿಸಿದ್ದಾರೆ.


ಗ್ರಾಮದ ದನಗಾಹಿ ಹುಲಿಯ ಹೆಜ್ಜೆ ಗುರುತು ನೋಡಿದ್ದಾರೆ. ಊರಿನವರು ತಮ್ಮ ಜಮೀನಿಗೆ ಹೋಗುವಾಗ ಎಚ್ಚರಿಕೆ ವಹಿಸುವಂತೆ ಗ್ರಾಮಸ್ಥರೇ ಎಲ್ಲರಿಗೂ ಹೇಳುತ್ತಿದ್ದಾರೆ. ಇದಲ್ಲದೆ, ಇದೇ ಗ್ರಾಮದ ಮಾರ್ಗದಲ್ಲಿ ಚಕ್ಕೋಡನಹಳ್ಳಿ, ಬೂದನೂರು ಸೇರಿದಂತೆ ವಿವಿಧ ಗ್ರಾಮಗಳಿಗೆ ತೆರಳಬೇಕಾಗಿದ್ದು, ದಾರಿಹೋಕರು ಹಾಗೂ ಗ್ರಾಮಸ್ಥರು ಈ ಮಾರ್ಗವಾಗಿ ತೆರಳಬೇಕಾದರೆ ಎಚ್ಚರಿಕೆ ವಹಿಸಿ ತೆರಳುವಂತೆ ಜನರು ಮಾಹಿತಿ ನೀಡುತ್ತಿದ್ದಾರೆ.
ಅರಣ್ಯ ಇಲಾಖೆಗೆ ಕರೆ ಮಾಡಿ, ವಿಷಯ ತಿಳಿಸಿದರೂ ಅಧಿಕಾರಿಗಳು ಸ್ಪಂದಿಸುತ್ತಿಲ್ಲ. ಸ್ಥಳಕ್ಕೂ ಬಂದಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಕಳೆದ ಒಂದು ತಿಂಗಳಿನಿಂದ ಹುಲಿ ಮತ್ತು ಆನೆ ದಾಳಿಗೆ ತಾಲೂಕಿನಲ್ಲಿ ಸಾವು-ನೋವುಗಳಾಗುತ್ತಿವೆ. ಆದ್ದರಿಂದ ಅರಣ್ಯ ಇಲಾಖೆ ಕ್ರಮ ವಹಿಸಿ ಹುಲಿ ಸೆರೆಗೆ ಮುಂದಾಬೇಕೆಂದು ಒತ್ತಾಯಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net