

ನವದೆಹಲಿ: ಅರಣ್ಯಾಧಿಕಾರಿ (ಐಎಫ್ಎಸ್) ಪರ್ವೀನ್ ಕಸ್ವಾನ್ ಅವರು ಟ್ವೀಟರ್ನಲ್ಲಿ ಹಂಚಿಕೊಳ್ಳುವ ಅದ್ಭುತ ಚಿತ್ರಗಳು ಸಾವಿರ ಮಾತುಗಳನ್ನು ಹೇಳುತ್ತವೆ.
ಈಗ ಅಂತಹುದ್ದೇ ಒಂದು ಚಿತ್ರ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು ಗಮನ ಸೆಳೆಯುತ್ತಿದೆ. ಇದಕ್ಕೆ 2.2 ಸಾವಿರ ಮಂದಿಕ್ಕೂ ಹೆಚ್ಚು ಲೈಕ್ ಮಾಡಿದ್ದು ನೂರಾರು ಮಂದಿ ರೀಟ್ವೀಟ್ ಮಾಡಿದ್ದಾರೆ. ಇದಕ್ಕೆ ನಟಿ ಪೂಜಾ ಭಟ್ ನೀಡಿದ ಪ್ರತಿಕ್ರಿಯೆ ಎಲ್ಲರ ಗಮನ ಸೆಳೆಯುತ್ತಿದೆ.
ಇತ್ತೀಚೆಗೆ ಪರ್ವೀನ್ ಕಸ್ವಾನ್ ಅವರು ಹಂಚಿಕೊಂಡ ಚಿತ್ರದಲ್ಲಿ ದಟ್ಟ ಕಾಡಿನ ನಡುವೆ ಒಂದು ದಾರಿ. ಅಲ್ಲಿ ಎಡ ಮತ್ತು ಬಲಕ್ಕೆ ಒಂದು ಲಾರಿ ಮತ್ತೊಂದು ಬುಲ್ಡೋಜರ್ ನಿಂತಿದೆ. ನಡುವೆ ಹುಲಿಯೊಂದು ಮಲಗಿದೆ!
ಅದಕ್ಕೆ ಪರ್ವೀನ್ ಕಸ್ವಾನ್ "ಈ ಸ್ಥಳ ಯಾರಿಗೆ ಸಂಬಂಧ ಪಟ್ಟಿದ್ದು. ಒಂದು ಫೋಟೋ ಮಾತಿಗಳಿಗಿಂತ ಹೆಚ್ಚಿನದ್ದೇನೋ ಹೇಳುತ್ತದೆ. ಯಾರೋ ಗೊತ್ತಿಲ್ಲದವರಿಂದ ಇದೊಂದು ಪ್ರಬಲವಾದ ಚಿತ್ರ" ಎಂದು ಬರೆದುಕೊಂಡಿದ್ದಾರೆ. #TigerLand ಎಂದು ಹ್ಯಾಷ್ಟ್ಯಾಗ್ ಹಾಕಿದ್ದಾರೆ.
ನಟಿ ಮತ್ತು ನಿರ್ಮಾಪಕಿ ಪೂಜಾ ಭಟ್ ಇದನ್ನು ರೀಟ್ವೀಟ್ ಮಾಡಿ "ಪ್ರಾಣಿಯ ಕಣ್ಣುಗಳ ಮೂಲಕ ನೋಡಿದಾಗ ಬುಲ್ಡೋಜರ್ ಎಷ್ಟು ಭಯಾನಕ ಎಂಬ ಬಗ್ಗೆ ಯೋಚಿಸಿದ್ದೀರಾ? ಈ ಚಿತ್ರವು ಅಂತಿಮವಾಗಿ ಮನುಷ್ಯನು ಪ್ರಗತಿಯ ಹೆಸರಿನಲ್ಲಿ ವಿನಾಶದ ಹಾದಿ ತುಳಿಯುವದನ್ನು ಸೂಚಿಸುತ್ತದೆ" ಎಂದಿದ್ದಾರೆ.
ಪರ್ವೀನ್ ಕಸ್ವಾನ್ ಅವರ ಈ ಪೋಟೋಗೆ ಪ್ರತಿಕ್ರಿಯಿಸಿರುವ ಅದೆಷ್ಟೋ ಮಂದಿ ಇಂತಹದ್ದೇ ಚಿತ್ರಗಳನ್ನು ಹಂಚಿಕೊಂಡಿದ್ದಾರೆ. ಅದರಲ್ಲಿನ ಕೆಲ ಚಿತ್ರಗಳು ಇಲ್ಲಿವೆ. (ಏಜೆನ್ಸೀಸ್)