ಪನ್ನಾದಲ್ಲಿರುವ ಗಣಿ ಪ್ರದೇಶದಲ್ಲಿ ಮಹಿಳೆ ಕೈ ಸೇರಿದ ಮೂರು 'ಅಮೂಲ್ಯ ವಜ್ರಗಳು'| diamond

diamond
Published on

ಪನ್ನಾ: ಮಧ್ಯಪ್ರದೇಶದ ಪನ್ನಾ ಜಿಲ್ಲೆಯ ಗಣಿಯೊಂದರಲ್ಲಿ ಬುಡಕಟ್ಟು ಮಹಿಳೆಯೊಬ್ಬರಿಗೆ ಲಕ್ಷಾಂತರ ರೂ ಬೆಲೆ ಬಾಳುವ ಮೂರು ವಜ್ರಗಳು ಸಿಕ್ಕಿವೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಇನ್ನೂ ಈ ಬಗ್ಗೆ ವಜ್ರ ಕಚೇರಿಯ ಅಧಿಕಾರಿಯೊಬ್ಬರು ಮಾತನಾಡಿದ್ದು, ಬದ್ವಾರ ಗ್ರಾಮದ ನಿವಾಸಿ ಶಂಬು ಅವರ ಪತ್ನಿ ವಿನಿತಾ ಗೊಂಡ್ ಅವರು ವಜ್ರದ ಸ್ಥಳವನ್ನು ಗುತ್ತಿಗೆಗೆ ತೆಗೆದುಕೊಂಡಿದ್ದಾರೆ. ಅಗೆಯುವಾಗ, ಕ್ರಮವಾಗಿ 0.7 ಕ್ಯಾರೆಟ್, 0.20 ಕ್ಯಾರೆಟ್ ಮತ್ತು 1.48 ಕ್ಯಾರೆಟ್ ತೂಕದ ಮೂರು ಬಣ್ಣವಿಲ್ಲದ ವಜ್ರದ ತುಣುಕುಗಳು ಕಂಡುಬಂದಿವೆ. ಆಕೆಯ ಪತಿ ಮೂರು ವಜ್ರಗಳನ್ನು ಠೇವಣಿ ಇಡಲು ಕಚೇರಿಗೆ ಬಂದರು. ಅವುಗಳನ್ನು ಮುಂಬರುವ ವಜ್ರ ಹರಾಜಿನಲ್ಲಿ ಇಡಲಾಗುವುದು ಎಂದಿದ್ದಾರೆ.

ಈ ವಜ್ರಗಳು 1.48 ಕ್ಯಾರೆಟ್ ಮತ್ತು 20 ಹಾಗೂ 7 ಸೆಂಟ್ಸ್ ತೂಕವನ್ನು ಹೊಂದಿದ್ದು, ಅವುಗಳನ್ನು ಹರಾಜಿಗೆ ಇಡಲಾಗುವುದು. ನಂತರ ಅಲ್ಲಿ ಅವುಗಳ ನಿಖರವಾದ ಬೆಲೆ ಸಿಗಲಿದೆ ಎಂದು ಅಧಿಕಾರಿ ಅನುಪಮ್ ಸಿಂಗ್ ತಿಳಿಸಿದ್ದಾರೆ.

(ಏಜೆನ್ಸೀಸ್)

ಈ ಮೂರು ವಜ್ರಗಳಲ್ಲಿ ಒಂದು ರತ್ನದ ಗುಣವನ್ನು ಹೊಂದಿದ್ದು, ಅದು ಅತ್ಯಂತ ಉತ್ತಮ ಗುಣಮಟ್ಟದ್ದಾಗಿದೆ ಎಂದು ಪರಿಗಣಿಸಲಾಗಿದೆ. ಉಳಿದ ಇನ್ನೆರಡು ಕಲ್ಲುಗಳು ಕಡಿಮೆ ಗುಣಮಟ್ಟದ್ದಾಗಿವೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ. ಜಿಲ್ಲೆಯ ರಾಜ್‌ಪುರದ ನಿವಾಸಿಯಾದ ವಿನಿತಾ ಗೊಂಡ್ ಎಂಬುವವರು, ಕಚೇರಿಯಿಂದ ಗುತ್ತಿಗೆ ಪಡೆದ ನಂತರ ತನ್ನ ಸಹಚರರೊಂದಿಗೆ ಪಾಟಿ ಪ್ರದೇಶದಲ್ಲಿ ಗಣಿ ಸ್ಥಾಪಿಸಿದ್ದರು ಎಂದು ಸಿಂಗ್ ಹೇಳಿದ್ದಾರೆ ಎನ್ನಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net