

ಕೋಲಾರ: ವಾಲಿಬಾಲ್ ಆಟವಾಡಲು ಹೋದ ಎರಡು ಗುಂಪುಗಳ ನಡುವೆ ಕ್ಷುಲ್ಲಕ ಕಾರಣಕ್ಕೆ ನಡೆದ ಘರ್ಷಣೆಯಲ್ಲಿ ಖಾರದ ಪುಡಿ ಎರಚಿದ ದುಷ್ಕರ್ಮಿಗಳು ಮೂವರಿಗೆ ಚಾಕುವಿನಿಂದ ಇರಿದಿದ್ದಾರೆ.
ಕೆ.ಬಿ.ಹೊಸಹಳ್ಳಿ ಗ್ರಾಮದಲ್ಲಿ ಗುರುವಾರ ಬೆಳಗ್ಗೆ ಈ ದುರ್ಘಟನೆ ನಡೆದಿದ್ದು, ಇರಿತಕ್ಕೊಳಗಾದ ಮಂಜುನಾಥ್ (38), ಅಮರೇಶ್ (28) ಮತ್ತು ಮಣಿ (24) ಅವರ ಸ್ಥಿತಿ ಗಂಭೀರವಾಗಿದೆ.
ಎಂದಿನಂತೆ ವಾಲಿಬಾಲ್ ಆಟವಾಡಲು ಬಂದ ಎರಡು ಗುಂಪುಗಳ ನಡುವೆ ಆಟದ ಅಂಗಣ ವಿಚಾರವಾಗಿ ಮಾತಿಗೆ ಮಾತು ಬೆಳೆದಿದ್ದು, ಪರಿಸ್ಥಿತಿ ವಿಕೋಪಕ್ಕೆ ತಿರುಗಿದೆ. ವಿನೋದ್, ಮಂಜುನಾಥ್, ಮುತ್ತು, ಮುನಿಯಪ್ಪ ಮತ್ತು ರಾಜಣ್ಣ ಎಂಬುವವರು ಕಾರದ ಪುಡಿ ಎರಚಿ ಚಾಕುವಿನಿಂದ ಮನಸೋಇಚ್ಛೆ ಇರಿದಿದ್ದಾರೆ.
ಇರಿತಕ್ಕೊಳಗಾದವರಿಗೆ ಬೆನ್ನು, ಹೊಟ್ಟೆ ಹಾಗೂ ಕಿಡ್ನಿ ಬಳಿ ಗಂಭೀರ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ವೇಮಗಲ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿರಿ ಹಣಕ್ಕಾಗಿ ಯುವತಿಯರನ್ನು ಕೂಡಿ ಹಾಕಿದ ಪಿಜಿ ಮಾಲೀಕ!