

ನಾಗ್ಪುರ: ಆಟವಾಡಲು ಹೋಗಿ ನಾಪತ್ತೆಯಾಗಿದ್ದ ಮೂರು ಮಕ್ಕಳು ಶವವಾಗಿ ಪತ್ತೆಯಾಗಿರುವ ದುರದೃಷ್ಟಕರ ಘಟನೆ ಮಹಾರಾಷ್ಟ್ರದ ನಾಗ್ಪುರದಲ್ಲಿನ ನಡೆದಿದೆ.
ತೌಫಿಕ್ ಫಿರೋಜ್ ಖಾನ್(4), ಅಲಿಯಾ ಫಿರೋಜ್ ಖಾನ್(6) ಮತ್ತು ಅಫ್ರೀನ್ ಇರ್ಷಾದ್ ಖಾನ್(6) ಎಂಬ ಮಕ್ಕಳು ಮನೆಯ ಶನಿವಾರದಂದು ಆಟವಾಡಲು ಹೋಗಿದ್ದರು. ತಡರಾತ್ರಿಯಾದರೂ ಮಕ್ಕಳು ವಾಪಸ್ ಬಾರದ ಹಿನ್ನೆಲೆಯಲ್ಲಿ ಸಂಬಂಧಿಕರು ಹುಡುಕಾಟ ಆರಂಭಿಸಿದ್ದರು. ಕೊನೆಗೆ ಮಕ್ಕಳನ್ನು ಪತ್ತೆ ಹಚ್ಚಲು ಸಾಧ್ಯವಾಗದಿದ್ದಾಗ ಪಂಚಪಾವಲಿ ಪೊಲೀಸರಿಗೆ ನಾಪತ್ತೆ ದೂರು ನೀಡಿದ್ದರು.
ಇದನ್ನೂ ಓದಿ: VIDEO| ಯುವಕನ ಕತ್ತಿಗೆ ನಾಯಿಬೆಲ್ಟ್ ಕಟ್ಟಿ ಕ್ಷಮೆಯಾಚಿಸುವಂತೆ ಹಿಂಸೆ
ವಿಷಯದ ಗಂಭೀರತೆಯನ್ನು ಕಂಡ ಪೊಲೀಸರು ಮಕ್ಕಳಿಗಾಗಿ ಶೋಧ ಕಾರ್ಯವನ್ನು ಆರಂಭಿಸಿದ್ದರು. ಆದರೆ ಎರಡು ದಿನ ಹುಡುಕಿದರೂ ಮಕ್ಕಳು ದೊರೆತಿರಲಿಲ್ಲ. ಆದರೆ ಇಂದು ಮನೆ ಸಮೀಪದ ಗುಜರಿ ಅಂಗಡಿಯಲ್ಲಿ ನಿಲ್ಲಿಸಿದ್ದ ಹಳೆಯ ಕಾರಿನೊಳಗೆ ಈ ಮೂವರ ಮೃತದೇಹಗಳು ಪತ್ತೆಯಾಗಿವೆ.
ಸುದ್ದಿ ತಿಳಿದು ಸ್ಥಳಕ್ಕಾಗಮಿಸಿದ ಪೊಲೀಸರು ಮೃತದೇಹಗಳನ್ನು ವಶಕ್ಕೆ ಪಡೆದಿದ್ದಾರೆ.
ಘಟನೆ ಕುರಿತು ಮಾತನಾಡಿದ ಪೊಲೀಸರು, ಮೂವರು ಮಕ್ಕಳು ಆಟವಾಡುತ್ತಾ ಕಾರಿನಲ್ಲಿ ಕುಳಿತು ಒಳಗಿನಿಂದ ಬಾಗಿಲು ಹಾಕಿಕೊಂಡಿದ್ದಾರೆ. ಆದರೆ, ಮೂರು ಮಕ್ಕಳು ಕಾರಿನ ಒಳಗಿನ ತಾಪಮಾನ ಮತ್ತು ಉಸಿರುಗಟ್ಟುವಿಕೆಯಿಂದ ಮೃತಪಟ್ಟಿದ್ದಾರೆ. ಎಂದು ತಿಳಿಸಿದ್ದಾರೆ.(ಏಜೆನ್ಸೀಸ್)