ಮೂವರಿಗೆ ಪಿಎಚ್.ಡಿ

Phd degree
Published on


ಮೈಸೂರು: ನಗರದ ವಿದ್ಯಾವರ್ಧಕ ಇಂಜಿನಿಯರಿಂಗ್ ಕಾಲೇಜಿನ ಸಹಾಯಕ ಪ್ರಾಧ್ಯಾಪಕರಾದ ಬಿ.ಎಸ್.ಗೌರಿಶಂಕರ್, ಕೆ.ಪಿ.ವಿದ್ಯಾಶ್ರೀ ಹಾಗೂ ಎಸ್‌ಜೆಸಿಇ ಇಂಜಿನಿಯರಿಂಗ್ ಕಾಲೇಜಿನ ಎಲೆಕ್ಟ್ರಾನಿಕ್ ವಿಭಾಗದ ಸಹಾಯಕ ಪ್ರಾಧ್ಯಾಪಕ ಬಿ.ಎಸ್.ರವಿಶಂಕರ್ ಸಾದರಪಡಿಸಿದ ಮಹಾಪ್ರಬಂಧಗಳನ್ನು ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾನಿಲಯ(ವಿಟಿಯು) ಪಿಎಚ್.ಡಿಗೆ ಅಂಗೀಕರಿಸಿದೆ.
ಬಿ.ಎಸ್.ಗೌರಿಶಂಕರ್ ಅವರು ಡಾ.ನಾಗಪ್ಪ ಯು.ಭಜಂತ್ರಿ ಅವರ ಮಾರ್ಗದರ್ಶನದಲ್ಲಿ, ವಿದ್ಯಾಶ್ರೀ ಅವರು ಡಾ.ಎ.ಬಿ.ರಾಜೇಂದ್ರ ಅವರ ಮಾರ್ಗದರ್ಶನದಲ್ಲಿ ಹಾಗೂ ಬಿ.ಎಸ್.ರವಿಶಂಕರ್ ಅವರು ಡಾ. ಕೆ.ಟಿ.ವೀರಮಂಜು ಅವರ ಮಾರ್ಗದರ್ಶನದಲ್ಲಿ ಮಹಾಪ್ರಬಂಧವನ್ನು ಸಾದರಪಡಿಸಿದ್ದರು. ಈ ಮೂವರು ನಗರದ ಜ್ಞಾನಬುತ್ತಿ ಸಂಸ್ಥೆಯಲ್ಲಿ ಐಎಎಸ್ ಸಿದ್ಧತೆ ನಡೆಸುತ್ತಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net