ರೈತರಿಗೆ ಮೂರು ದಿನಗಳ ತರಬೇತಿ ಕಾರ್ಯಕ್ರಮ

baffelo
ದಾಳಿ ಮಾಡಿದ ಗದ್ದೆಯ ನಡುವೆ ಕಂಗೆಟ್ಟ ರೈತ
Published on

ಮೈಸೂರು: ನಾಗನಹಳ್ಳಿಯ ಜಿಲ್ಲಾ ಕೃಷಿ ತರಬೇತಿ ಕೇಂದ್ರದಲ್ಲಿ ಆಗಸ್ಟ್ 07 ರಿಂದ 09 ರವರೆಗೆ “ಅರಿಶಿಣ ಬೆಳೆಯಲ್ಲಿ ಸೂಕ್ಷ್ಮನೀರಾವರಿ, ರಸಾವರಿ ತಾಂತ್ರಿಕತೆಗಳು ಮತ್ತು ಆಧುನಿಕ ಬೇಸಾಯ ಪದ್ದತಿಗಳ ಅಳವಡಿಕೆ ಮೂಲಕ ಅಧಿಕ ಲಾಭ” ಎಂಬ ವಿಷಯದ ಬಗ್ಗೆ ರೈತ/ ರೈತಮಹಿಳೆಯರಿಗೆ ಮೂರು ದಿನಗಳ ತರಬೇತಿ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.

ತರಬೇತಿಯಲ್ಲಿ ಭಾಗವಹಿಸುವ ರೈತ/ರೈತಮಹಿಳೆಯರಿಗೆ ಊಟ ಮತ್ತು ವಸತಿ ವ್ಯವಸ್ಥೆಯನ್ನು ಒದಗಿಸಲಾಗುವುದು. ಆಸಕ್ತ ರೈತ/ರೈತಮಹಿಳೆಯರು ತಮ್ಮ ಹೆಸರನ್ನು ತರಬೇತಿ ಕೇಂದ್ರದ ಕೃಷಿ ಅಧಿಕಾರಿ ದೂ.ಸಂ: 8277933154 ಗೆ ಕರೆಮಾಡಿ ತಮ್ಮ ಹೆಸರುಗಳನ್ನು ನೋಂದಾಯಿಸಕೊಳ್ಳಬಹುದಾಗಿದೆ. ಮೈಸೂರು ಜಿಲ್ಲೆಯ 40 ರೈತ/ ರೈತಮಹಿಳೆಯರಿಗೆ ಮಾತ್ರ ಅವಕಾಶವಿದ್ದು, ಮೊದಲು ನೋಂದಣಿ ಮಾಡಿದವರಿಗೆ ಆದ್ಯತೆ ನೀಡಲಾಗುವುದು ಎಂದು ನಾಗನಹಳ್ಳಿಯ ಜಿಲ್ಲಾ ಕೃಷಿ ತರಬೇತಿ ಕೇಂದ್ರದ ಉಪ ಕೃಷಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net