ಗಾಂಜಾ ಮಾರುತ್ತಿದ್ದ ಮೂವರ ಬಂಧನ

Published on

ವಿಜಯವಾಣಿ ಸುದ್ದಿಜಾಲ ಧಾರವಾಡ

ಗಾಂಜಾ ಮಾರಾಟ ಮಾಡುತ್ತಿದ್ದ ಮೂವರನ್ನು ಇಲ್ಲಿನ ಉಪನಗರ ಠಾಣೆ ಪೊಲೀಸರು ಶನಿವಾರ ಬಂಽಸಿದ್ದಾರೆ. ಖಚಿತ ಮಾಹಿತಿ ಮೇರೆಗೆ ನಗರದ ಎತ್ತಿನಗುಡ್ಡ ರಸ್ತೆಯಲ್ಲಿ ದಾಳಿ ನಡೆಸಿ ಹಾಶ್ಮಿನಗರದ ಲುಕಮನ್ ಬಾಗಲಕೋಟೆ (20), ಮಾಳಾಪುರದ ತಬರೇಜ್ ಅತ್ತಾರ್ (21) ಹಾಗೂ ಮಾಳಾಪುರದ ಮೊಹಮ್ಮದ್ ಜುನೇದ್ ಅಂಗಡಿ (21) ಎಂಬುವರನ್ನು ಬಂಧಿಸಿದ್ದಾರೆ. ಆರೋಪಿಗಳಿಂದ 515 ಗ್ರಾಂ ಗಾಂಜಾ ವಶಪಡಿಸಿಕೊಳ್ಳಲಾಗಿದೆ. ಎಸಿಪಿ ಪ್ರಶಾಂತ ಸಿದ್ದನಗೌಡರ ಮಾರ್ಗದರ್ಶನದಲ್ಲಿ ಇನ್‌ಸ್ಪೆಕ್ಟರ್ ದಯಾನಂದ ಶೇಗುಣಸಿ, ಪಿಎಸ್‌ಐ ರುದ್ರಪ್ಪ ಗುಡದರಿ, ಎಎಸ್‌ಐ ಕೆ.ಎಚ್. ನೆಲ್ಲೂರ. ಸಿಬ್ಬಂದಿಗಳಾದ ದಯಾನಂದ ಗುಂಡಗೈ, ಮುಸ್ತಫ ಬೀಳಗಿ, ಅಶೋಕ ಮುಡಶಿ, ರವಿ ದೊಡ್ಡಮನಿ, ರುದ್ರಪ್ಪ ಭಿಸೆ, ನಾಗರಾಜ ವಡ್ಡಪ್ಪಗೋಳ, ಶಿವು ಚಿಕ್ಕಮಠ, ನಾಸೀರ ಹಂಗರಕಿ, ಸುಭಾಸ ಹೆಡ್ಲದ ಕಾಯÁðಚರಣೆಯಲ್ಲಿ ಪಾಲ್ಗೊಂಡಿದ್ದರು. ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net