ಹೊರಬಿತ್ತು​ 'ಟಾಕ್ಸಿಕ್'; ಯಶ್​ ಚಿತ್ರಕ್ಕೆ ಈ ಮೂವರೇ ನಾಯಕಿಯರು?

ವಿಜಯವಾಣಿ-10
Published on

ಬೆಂಗಳೂರು: ಸ್ಯಾಂಡಲ್​ವುಡ್​ನ ರಾಕಿಂಗ್ ಸ್ಟಾರ್ ಯಶ್​ ಅಭಿನಯಿಸುತ್ತಿರುವ ಬಹುನಿರೀಕ್ಷಿತ ‘ಯಶ್​ 19’ ಚಿತ್ರದ ಅಸಲಿ ಟೈಟಲ್​ ಇಂದು ಅಧಿಕೃತವಾಗಿ ಅನಾವರಣಗೊಂಡಿದ್ದು, ಚಿತ್ರಕ್ಕೆ ‘ಟಾಕ್ಸಿಕ್’​ ಎಂಬ ಖಡಕ್​ ಶೀರ್ಷಿಕೆ ಇಡಲಾಗಿದೆ. ಸದ್ಯ ಈ ಸುದ್ದಿ ಯಶ್ ಅವರ ಸಹ್ರಸಾರು ಸಂಖ್ಯೆಯ ಅಭಿಮಾನಿಗಳಲ್ಲಿ ಭಾರೀ ಸಂತಸ ಮೂಡಿಸಿದೆ.

'ಕೆಜಿಎಫ್ 2' ಸೂಪರ್ ಹಿಟ್​ ಸಕ್ಸಸ್​ ಆದ ಬಳಿಕ ಕೊಂಚ ಬ್ರೇಕ್ ತೆಗೆದುಕೊಂಡಿದ್ದ ಯಶ್​, ಇದೀಗ 'ಟಾಕ್ಸಿಕ್​' ಚಿತ್ರದ ಕೆಲಸಗಳಲ್ಲಿ ಸಂಪೂರ್ಣವಾಗಿ ಬ್ಯುಸಿಯಾಗಿದ್ದಾರೆ. ಎಂದಿನಂತೆ ತಮ್ಮ ಮೇಲೆ ದುಪ್ಪಟ್ಟು ನಿರೀಕ್ಷೆ ಹಾಗೂ ಭರವಸೆ ಇರುವುದರಿಂದ ಸಿನಿಮಾದ ಕಥೆಗೆ ಹೆಚ್ಚು ಒತ್ತು ನೀಡಿರುವ ಯಶ್, ಮತ್ತೊಂದು ಮೆಗಾ ಹಿಟ್​ ನೀಡಲು ಇದೀಗ ಭರ್ಜರಿ ತಯಾರಿಗಳೊಂದಿಗೆ ಸಿನಿಪ್ರೇಕ್ಷಕರ ಮುಂದೆ ಬರಲು ಸಜ್ಜಾಗಿದ್ದಾರೆ.

ಹೆಸರಾಂತ ಪ್ರೊಡಕ್ಷನ್​ ಹೌಸ್​ ಆದ ಕೆವಿಎನ್​ ನಿರ್ಮಾಣ ಸಂಸ್ಥೆ ಯಶ್​ ಅವರ ಮುಂದಿನ ಸಿನಿಮಾ ನಿರ್ಮಿಸುತ್ತಿದ್ದು, ವಿಭಿನ್ನ ಹಾಗೂ ವಿಶೇಷ ರೀತಿಯಲ್ಲಿ ಇಂದು ಟೈಟಲ್​ ರಿವೀಲ್ ವಿಡಿಯೋವನ್ನು ಬಿಡುಗಡೆಗೊಳಿಸಿದೆ. ಮಾಸ್ಟರ್​ಪೀಸ್​ ಲುಕ್​ನಲ್ಲಿ ಕಾಣಿಸಿಕೊಂಡ ಯಶ್,​ ‘ಟಾಕ್ಸಿಕ್’ ಶೀರ್ಷಿಕೆಯಲ್ಲಿ ಮಿಂಚಿದ್ದಾರೆ. ಸದ್ಯ ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದ್ದು, ನೆಟ್ಟಿಗರಿಂದ ವ್ಯಾಪಕ ಮೆಚ್ಚುಗೆ ಗಳಿಸುತ್ತಿದೆ.

ಸದ್ಯ ಯಶ್​ ಅವರ 'ಟಾಕ್ಸಿಕ್'​ ಸಿನಿಮಾದ ಬಗ್ಗೆ ಅಭಿಮಾನಿಗಳು ಮತ್ತು ಸಿನಿಪ್ರೇಕ್ಷಕರು ತೀವ್ರ ಕುತೂಹಲ ವ್ಯಕ್ತಪಡಿಸಿದ್ದು, ಈ ಚಿತ್ರವನ್ನು ದೊಡ್ಡ ಮಟ್ಟದಲ್ಲಿ ಮಾಡಲಿದ್ದಾರೆ ಎಂಬುದನ್ನು ಈಗಾಗಲೇ ಊಹಿಸಿದ್ದಾರೆ. ಇದರೊಂದಿಗೆ ಸಿಕ್ಕಾಪಟ್ಟೆ ಚರ್ಚೆಯಲ್ಲಿರುವ ಸುದ್ದಿ ಅಂದ್ರೆ, ಅದು ಚಿತ್ರದ ಹೀರೋಯಿನ್ ಯಾರು ಎಂಬುದು? ಅಷ್ಟಕ್ಕೂ ವದಂತಿಗಳ ಪ್ರಕಾರ, ಟಾಕ್ಸಿಕ್​ನಲ್ಲಿ ಒಬ್ಬರಲ್ಲ ಬರೋಬ್ಬರಿ ಮೂವರು ನಟಿಯರು ಇರಲಿದ್ದಾರೆ ಎಂದು ಹೇಳಲಾಗಿದೆ. ಸದ್ಯ ಯಾರು ಈ ನಟಿಮಣಿಯರು? ಇಲ್ಲಿದೆ ಮಾಹಿತಿ.

ಸೋಷಿಯಲ್ ಮೀಡಿಯಾ ಸೇರಿದಂತೆ ಇತರೆ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವದಂತಿಗಳ ಪ್ರಕಾರ, ಬಹುಭಾಷಾ ತಾರೆ ಸಾಯಿ ಪಲ್ಲವಿ, ಸಂಯುಕ್ತ ಮೆನನ್ ಹಾಗೂ ರಾಶಿ ಖನ್ನಾ ಟಾಕ್ಸಿಕ್​ ಚಿತ್ರದಲ್ಲಿ ಯಶ್​ಗೆ ನಾಯಕಿಯರಾಗಿ ಕಾಣಿಸಿಕೊಳ್ಳಲಿದ್ದಾರೆ ಎಂದು ಹೇಳಲಾಗಿದೆ. ಆದ್ರೆ, ಈ ಬಗ್ಗೆ ಇಲ್ಲಿಯವರೆಗೂ ಯಾವುದೇ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ. ಸದ್ಯ ಚಿತ್ರದ ಟೈಟಲ್​ ಕೇಳಿ ಭಾರೀ ಸಂತಸ ಪಟ್ಟಿರುವ ಯಶ್​ ಫ್ಯಾನ್ಸ್​, ದೇವಸ್ಥಾನಕ್ಕೆ ತೆರಳಿ 101 ತೆಂಗಿನಕಾಯಿ ಹೊಡೆದು ಸಂಭ್ರಮಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net