Threatened SalmanKhan: ಸಲ್ಮಾನ್ ಖಾನ್​​ಗೆ ಜೀವ ಬೆದರಿಕೆ; ರಾಯಚೂರಿನಲ್ಲಿ ಸೋಹೆಲ್ ಪಾಶಾ ಅರೆಸ್ಟ್

salman khan
Published on

ಮುಂಬೈ: ಬಾಲಿವುಡ್​ ನಟ  ಸಲ್ಮಾನ್​​ ಖಾನ್​​ಗೆ ( Threatened SalmanKhan ) ಬಂದಿರುವ ಜೀವ ಬೇದರಿಕೆ ಕರೆಯನ್ನು ಬೆನ್ನಟ್ಟಿ ಹೋಗಿರುವ ಮುಂಬೈ ಪೊಲೀಸರ ಕೈಗೆ ಆರೋಪಿ ಸಿಕ್ಕಿ ಬಿದಿದ್ದಾನೆ.

ಕಳೆದ ಕೆಲ ದಿನಗಳ ಹಿಂದೆ ಸಲ್ಮಾನ್ ಖಾನ್ ಅವರನ್ನು ಕೊಲ್ಲೋದಾಗಿ ಮುಂಬೈ ಸಂಚಾರ ಪೊಲೀಸರಿಗೆ ಸಂದೇಶ ಬರುತ್ತಲೇ ಇದೆ.  ಐದು ಕೋಟಿ ರೂಪಾಯಿ ಕೊಡದೇ ಇದ್ದರೆ ಸಲ್ಮಾನ್ ಹಾಗೂ ಸೋಹೆಲ್​ನ (ಸಲ್ಲು ಸಹೋದರ) ಕೊಲೆ ಮಾಡುತ್ತೇವೆ ಎಂದು ಸೋಹೆಲ್ ಪಾಶಾ ವಾಟ್ಸಾಪ್ ಮೂಲಕ ಬೆದರಿಕೆ ಹಾಕಿದ್ದ. ಇದಕ್ಕೆ ಸಂಬಂಧಿಸಿದಂತೆ ವೊರ್ಲಿ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿತ್ತು.

ಮುಂಬೈ ಪೊಲೀಸರುಮೊಬೈಲ್ ಸಂಖ್ಯೆಯನ್ನು ಪತ್ತೆ ಹಚ್ಚಿದಾಗ ಅದು ಕರ್ನಾಟಕದ ರಾಯಚೂರಿನ ವೆಂಕಟೇಶ್ ನಾರಾಯಣ ಎಂಬುವವರದು ಅನ್ನೋದು ಗೊತ್ತಾಗಿದೆ. ಅಲ್ಲಿ ಹೋಗಿ ನೋಡಿದಾಗ ಅವರ ಬಳಿ ಕೇವಲ ಬೇಸಿಕ್ ಸೆಟ್ ಇದ್ದು, ವಾಟ್ಸಾಪ್ ಇಲ್ಲ ಅನ್ನೋದು ಗೊತ್ತಾಗಿದೆ. ಬೇಸಿಕ್ ಸೆಟ್​ಗೆ ಮೂರನೇ ತಾರೀಕಿಗೆ ವಾಟ್ಸಾಪ್​ ಲಾಗಿನ್​ ಒಟಿಪಿ ಬಂದಿತ್ತು.

ವೆಂಕಟೇಶ್ ನಾರಾಯಣ ಮಾತನಾಡಿ, ‘ನಾನು ಮಾರುಕಟ್ಟೆಗೆ ಹೋದಾಗ ಓರ್ವ ವ್ಯಕ್ತಿ ಬಂದು ಮೊಬೈಲ್ ಸರಿ ಇಲ್ಲ ನಿಮ್ಮ ಮೊಬೈಲ್ ನೀಡಿ, ಕರೆ ಮಾಡಿ ಕೊಡುತ್ತೇನೆ ಎಂದು ಕೋರಿದ್ದ’ ಎಂಬುದಾಗಿ ವೆಂಕಟೇಶ್ ನಾರಾಯಣ ಹೇಳಿದ್ದಾರೆ. ನಂತರ ಪೊಲೀಸರು ಆರೋಪಿಯನ್ನು ತನಿಖೆ ಮಾಡಲು ಪ್ರಾರಂಭಿಸಿದರು.

ಈ ರೀತಿ ಕರೆ ಮಾಡಿದವನೇ ಸೋಹೆಲ್ ಪಾಶಾ. ನಂತರ ಮನೆಗೆ ಹೋಗಿ ಈತನ ಬಂಧಿಸಲಾಗಿದೆ. ಸದ್ಯ ಪೊಲೀಸರು ಪ್ರಶ್ನೆ ಮಾಡುತ್ತಿದ್ದಾರೆ. ಪಾಶಾ ಪಬ್ಲಿಸಿಟಿಗೆ ಹಾಗೂ ತಮಾಷೆಯಾಗಿ ಈ ರೀತಿ ಮಾಡಿದ್ದಾಗಿ ಒಪ್ಪಿಕೊಂಡಿದ್ದಾನೆ. ಪೊಲೀಸರು ಭಾರತೀಯ ನ್ಯಾಯಾಂಗ ಸಂಹಿತೆಯ ಹಲವು ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ಆರೋಪಿಗಳನ್ನು ಬಂಧಿಸಿದ್ದಾರೆ.

ಪಾಷಾ ಅವರನ್ನು ಮುಂಬೈಗೆ ಕರೆದೊಯ್ದು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಎರಡು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಕಳುಹಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net