ರಷ್ಯಾದ ತೈಲದ ಮೇಲೆ 500% ಸುಂಕದ ಬೆದರಿಕೆ; ಎಸ್ ಜೈಶಂಕರ್ ಹೇಳಿದ್ದೇನು? jaishankar

Jaishankar
Published on

ವಾಷಿಂಗ್ಟನ್‌: ಭಾರತದ ಮೇಲೆ ಶೇ 500ರಷ್ಟು ಸುಂಕ ವಿಧಿಸಬಹುದಾದ ಅಮೆರಿಕದ ಸೆನೆಟ್ ಮುಂದೆ ಇರುವ ರಷ್ಯಾ ವಿರುದ್ಧದ ಕಠಿಣ ನಿರ್ಬಂಧ ಮಸೂದೆಗೆ ಭಾರತೀಯ ರಾಯಭಾರಿ, ಅಮೆರಿಕದ ಸೆನೆಟರ್ ಲಿಂಡ್ರೆ ಗ್ರಹಾಂ ಅವರೊಂದಿಗೆ ಮಾತುಕತೆ ನಡೆಸುತ್ತಿದ್ದಾರೆ ಎಂದು ವಿದೇಶಾಂಗ ಸಚಿವರಾದ ಎಸ್ ಜೈ ಶಂಕರ್ ಹೇಳಿದ್ದಾರೆ.

ರಷ್ಯಾದ ತೈಲ ಆಮದಿನ ಮೇಲೆ ಶೇಕಡಾ 500 ರಷ್ಟು ಸುಂಕ ವಿಧಿಸುವ ಅಮೆರಿಕದ ಯೋಜನೆಯ ಬಗ್ಗೆ ಮಾತನಾಡಿದ ಜೈಶಂಕರ್, ಸೆನೆಟರ್ ಲಿಂಡ್ಸೆ ಗ್ರಹಾಂ ಅವರ ಮಸೂದೆಗೆ ಸಂಬಂಧಿಸಿದಂತೆ, ಯುಎಸ್ ಕಾಂಗ್ರೆಸ್‌ನಲ್ಲಿ ನಡೆಯುತ್ತಿರುವ ಯಾವುದೇ ಬೆಳವಣಿಗೆಯು ನಮ್ಮ ಹಿತಾಸಕ್ತಿಯ ಮೇಲೆ ಪರಿಣಾಮ ಬೀರಬಹುದೇ ಎಂಬ ಆಸಕ್ತಿಯಿದೆ. ಹಾಗಾಗಿ ನಾವು ಸೆನೆಟರ್ ಗ್ರಹಾಂ ಅವರೊಂದಿಗೆ ಸಂಪರ್ಕದಲ್ಲಿದ್ದೇವೆ. ಇಂಧನ ಭದ್ರತೆಯ ಕುರಿತು ನಮ್ಮ ಕಾಳಜಿಗಳು ಮತ್ತು ನಮ್ಮ ಹಿತಾಸಕ್ತಿಗಳನ್ನು ಅವರಿಗೆ ತಿಳಿಸಲಾಗಿದೆ. ಆದ್ದರಿಂದ ನಾವು ಆ ಸೇತುವೆಯನ್ನು ದಾಟಬೇಕಾಗುತ್ತದೆ ಎಂದಿದ್ದಾರೆ.

ರಷ್ಯಾ ಮತ್ತು ಉಕ್ರೇನ್ ನಡುವೆ ಯುದ್ಧ ಭುಗಿಲೆದ್ದ ಬಳಿಕ, ಅಮೆರಿಕ ಮತ್ತು ಪಾಶ್ಚಿಮಾತ್ಯ ರಾಷ್ಟ್ರಗಳು ಮಾಸ್ಕೋ ಮೇಲೆ ನಿರ್ಬಂಧಗಳನ್ನು ವಿಧಿಸಿದವು. ಆದಾಗ್ಯೂ ಭಾರತವು ರಷ್ಯಾದ ತೈಲವನ್ನು ಖರೀದಿಸುವುದನ್ನು ಮುಂದುವರೆಸಿದೆ. ಮೇ ತಿಂಗಳ ಆರಂಭದಲ್ಲಿ, ಲಿಂಡ್ಸೆ ಗ್ರಹಾಂ ಅವರು ಮಸೂದೆಗೆ ಸಂಬಂಧಿಸಿದಂತೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರೊಂದಿಗೆ ಸಂಪರ್ಕದಲ್ಲಿದ್ದಾರೆ ಎಂದು ಹೇಳಿದ್ದಾರೆ

(ಏಜೆನ್ಸೀಸ್)

ರಷ್ಯಾ ಮೇಲಿನ ಅಮೆರಿಕದ ನಿರ್ಬಂಧ ಮಸೂದೆ ಪ್ರಕಾರ, ರಷ್ಯಾದ ತೈಲ, ಅನಿಲ, ಯುರೇನಿಯಂ ಮತ್ತು ಇತರ ಉತ್ಪನ್ನಗಳನ್ನು ಖರೀದಿಸುವ ಯಾವುದೇ ರಾಷ್ಟ್ರದಿಂದ ಮಾಡಿಕೊಳ್ಳುವ ಆಮದಿನ ಮೇಲೆ ಶೇ 500ರಷ್ಟು ಸುಂಕವನ್ನು ವಿಧಿಸಲಾಗುತ್ತದೆ ಎಂದು ಹೇಳಲಾಗಿದೆ. ಈ ಮಸೂದೆಯು ಸೆನೆಟ್‌ನಲ್ಲಿ 80ಕ್ಕೂ ಸಂಸದರ ಬೆಂಬಲವನ್ನು ಹೊಂದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net