ಇಲ್ಲಿ ಸಿಗರೇಟ್​ ಸೇದುವವರು 33 ಅಡಿ ಅಂತರ ಕಾಯ್ದುಕೊಳ್ಳಬೇಕು: ಕಟ್ಟುನಿಟ್ಟಿನ ಕಾನೂನು ಜಾರಿ ಮಾಡಿದ ಸರ್ಕಾರ! Smoke Cigarettes

dk (98)
Published on

Smoke Cigarettes:ಇಟಲಿಯ ಮಿಲನ್​ ನಗರ ವಿಶ್ವದ ಫ್ಯಾಷನ್​ ನಗರ ಎಂದೇ ಕರೆಯಲಾಗುತ್ತದೆ. ಇಲ್ಲಿ ಸಿಗರೇಟ್​ ಸೇದುವುದೆ ಒಂದು ಫ್ಯಾಷನ್​.ಇದೀಗ ಈ ನಗರದಲ್ಲಿ ಧೂಮಪಾನ ನಿಯಂತ್ರಣ ಮಾಡುವ ಉದ್ದೇಶದಿಂದ ಇಲ್ಲಿ ಸಿಗರೇಟ್​ ಸೇದುವವರು ಜನಸಾಮಾನ್ಯನರಿಂದ 33 ಅಡಿ ಅಂತರ ಕಾಯ್ದುಕೊಳ್ಳಬೇಕು ಎಂಬ ಹೊಸ ಕಾನೂನು ಜಾರಿ ಮಾಡಿದೆ.

ಹೌದು, 1960ರಲ್ಲಿ ಫೆಲಿನಿಯ 'ಲಾ ಡೋಲ್ಸ್ ವೀಟಾ' ಎಂಬ ಚಲನಚಿತ್ರ ಇಟಲಿಯನ್ನು ಧೂಮಪಾನಿಗಳಿಗೆ ಸ್ವರ್ಗವೆಂದು ಚಿತ್ರದಲ್ಲಿ ತೋರಿಸಲಾಗಿತ್ತು. ಈ ಸಿನಿಮಾದಲ್ಲಿ ಸಿಗರೇಟುಗಳನ್ನು ಹೆಚ್ಚಾಗಿ ಗ್ಲಾಮರ್‌ನೊಂದಿಗೆ ಸಂಯೋಜಿಸಲಾಗಿದೆ. ಅಂದರೆ ಇಟಲಿ ಮತ್ತು ಮಿಲನ್​ನಲ್ಲಿ ಸಿಗರೇಟ್​ ಎಂದರೆ ಅಷ್ಟು ಹುಚ್ಚಿದೆ ಎಂದು ತೋರಿಸುತ್ತದೆ. ಈಗ ಧೂಮಪಾನ ನಿಯಂತ್ರಣಕ್ಕೆ ಕಟ್ಟುನಿಟ್ಟಿನ ಕಾನೂನು ಕ್ರಮ ಜಾರಿ ಮಾಡಿದ್ದು, ಇದೀಗ ಏಕಾಏಕಿ ಅಲ್ಲಿನ ಸರ್ಕಾರದ ವಿರುದ್ಧ ಪ್ರಶ್ನೆಗಳನ್ನೆತ್ತಿದ್ದಾರೆ.

ನಿಯಮಗಳೇನು?

ಸಾರ್ವಜನಿಕ ಪ್ರದೇಶಗಳಲ್ಲಿ ಸಿಗರೇಟ್​ ಸೇದುವಂತಿಲ್ಲ. ಒಂದು ವೇಳೆ ಸೇದಬೇಕು ಎಂದಿನಿಸಿದರೆ ಜನಸಾಮಾನ್ಯರಿಂದ ಅಂದ್ರೆ ಒಬ್ಬ ವ್ಯಕ್ತಿಯಿಂದ 33 ಅಡಿ ದೂರದಲ್ಲಿ ಧೂಮಪಾನ ಮಾಡಬೇಕು. ತನ್ನ ಸುತ್ತಮುತ್ತಲು ಯಾರು ಇಲ್ಲದಂತೆ ಎಚ್ಚರವಹಿಸಬೇಕು. ಇಲ್ಲವಾದರೆ ಕಾನೂನಿನ ಕ್ರಮಕೈಗೊಳ್ಳಬೇಕಾಗುತ್ತದೆ ಎಂದು ಸರ್ಕಾರ ತನ್ನ ಆದೇಶದಲ್ಲಿ ಹೊರಡಿಸಿದೆ. ಈ ಮೂಲಕ ಧೂಮಪಾನ ಮಾಡದವರು ಸಹ ಧೂಮಪಾನ ತಪ್ಪಿಸಿದಂತಾಗುತ್ತದೆ ಎಂದು ಮಿಲನ್​ ನಗರದ ಉಪ ಮೇಯರ್ ಅನ್ನಾ ಸ್ಕ್ಯಾವುಝೋ ಹೇಳಿದ್ದಾರೆ.

ಮಿಲನ್ ಫ್ಯಾಷನ್ ಮತ್ತು ಡಿಸೈನರ್ ವೇಷಭೂಷಣಗಳಿಗೆ ಪ್ರಪಂಚದಾದ್ಯಂತ ಪ್ರಸಿದ್ಧವಾಗಿದೆ. ಹೀಗಾಗಿ, ಸರ್ಕಾರದ ಈ ನಿರ್ಧಾರವನ್ನು ಸಾಮಾಜಿಕ ಜಾಲತಾಣದಲ್ಲಿ ನೆಟ್ಟಿಗರು ಮತ್ತು ಮಿಲನ್​ ನಗರದ ಜನರು ಟೀಕಿಸಿದ್ದಾರೆ.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net