ಕೈಕೈ ಮಿಲಾಯಿಸಿದವರು ಕೈ ಕುಲುಕಿ ಒಂದಾದರು

klr naga
ನಾಗಾನಂದ ಕೆಂಪರಾಜ್‌ ಹಾಗೂ ಜೆ.ಜಿ.ನಾಗರಾಜ್
Published on

ಕೋಲಾರ: ನಗರದ ಜೂನಿಯರ್ ಬಾಲಕಿಯರ ಕಾಲೇಜು ಆವರಣದಲ್ಲಿ ಕೈ ಕೈ ಮಿಲಾಯಿಸಿಕೊಂಡು ಕಿತ್ತಾಡಿಕೊಂಡಿದ್ದ ಜಿಲ್ಲಾ ಕಸಾಪ ಮಾಜಿ ಅಧ್ಯಕ್ಷರಾದ ನಾಗಾನಂದ್ ಕೆಂಪರಾಜ್ ಹಾಗೂ ಜೆ.ಜಿ.ನಾಗರಾಜ್ ಅವರು ಬುಧವಾರ ರಾಜಿಯಾಗಿದ್ದಾರೆ.

ಕಳೆದ ಕೆಲ ವರ್ಷಗಳ ಹಿಂದೆ ಆತ್ಮೀಯ ಸ್ನೇಹಿತರಾಗಿದ್ದ ಇಬ್ಬರು ಕಸಾಪ ಚುನಾವಣೆ ಸಮಯದಲ್ಲಿ ವೈರಿಗಳಾಗಿದ್ದರು. ಜು.೨೩ರಂದು ಕಾಲೇಜಿನಲ್ಲಿ ನಡೆದ ಜಗಳ ಹಿನ್ನೆಲೆಯಲ್ಲಿ ಸರ್ಕಾರಿ ನೌಕರರ ಸಂಘದ ಪದಾಽಕಾರಿಗಳು ಹಾಗೂ ಸಂಘಟನೆಗಳ ಮುಖಂಡರ ಸಮ್ಮುಖದಲ್ಲಿ ಮಾಡಿದ ಸಂಧಾನ ಯಶಸ್ವಿಯಾಗಿದೆ.
ಈ ಹಿಂದೆ ನಾವಿಬ್ಬರು ಉತ್ತಮ ಸ್ನೇಹಿತರಗಿದ್ದು ಕಸಾಪ ಚುನಾವಣೆ ಸಂದರ್ಭದಲ್ಲಿ ನಮ್ಮಿಬ್ಬರ ಮಧ್ಯೆ ಬಿನ್ನಾಭಿಪ್ರಾಯ ಏರ್ಪಟ್ಟು, ವ್ಯಮನಸ್ಸು ಉಂಟಾಗಿ ಈ ಹಂತಕ್ಕೆ ಬಂದಿದ್ದು.ಈ ಘಟನೆಯಿಂದ ನಮ್ಮಿಬ್ಬರಿಗೂ ನೋವಾಗಿದೆ. ಇನ್ನು ಮುಂದೆ ಈ ರೀತಿ ಆಗದ ಹಾಗೆ ನಾವಿಬ್ಬರು ವೈಮನಸ್ಸು ಮರೆತು ಒಟ್ಟಿಗೆ ಇರುತ್ತೇವೆ ಎಂದು ನಾಗಾನಂದ ಕೆಂಪರಾಜï ಹಾಗೂ ಜೆ. ಜಿ.ನಾಗರಾಜï ಒಬ್ಬರಿಗೊಬ್ಬರು ಪರಸ್ಪರ ಹಸ್ತಲಾಘವ ನೀಡಿ ಕೇಕ್ ತಿನ್ನಸಿಕೊಳ್ಳುವ ಮೂಲಕ ರಾಜಿಯಾದರು. ನಂತರ ದೂರನ್ನು ಹಿಂಪಡೆಯಲು ಇಬ್ಬರೂ ಒಂದೇ ಬೈಕಿನಲ್ಲಿ ಪೊಲೀಸ್ ಠಾಣೆಗೆ ತೆರಳಿ, ದೂರು ವಾಪಸ್ ಪಡೆದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net