VIDEO| ಮರಿ ಚಿರತೆಗಳ ಸ್ವಚ್ಛಂದ ಆಟ ನೋಡಿದರೆ ನಿಮ್ಮ ಮುಖದಲ್ಲಿ ನಗು ಮೂಡುವುದು ಗ್ಯಾರಂಟಿ

cubes cheeta
Published on

ಕೆಲವು ಬಾರಿ ಇಡೀ ಕಾಡು ಅಲೆದರೂ ಒಂದು ಪ್ರಾಣಿ ಕಾಣಿಸುವುದಿಲ್ಲ. ಕಾಡುಗಳಲ್ಲಿ ಪ್ರಾಣಿಗಳನ್ನು ಕಣ್ತುಂಬಿಕೊಳ್ಳಲು ಕೆಲವರು ಆಗಾಗ್ಗೆ ಸಫಾರಿ ಹೋಗುತ್ತಾರೆ. ಈ ವೇಳೆ ಕೆಲವರಿಗೆ ಪ್ರಾಣಿಗಳು ಗೋಚರಿಸಿದರೆ ಮತ್ತೆ ಕೆಲವರಿಗೆ ನೋಡಲು ಸಿಗುವುದಿಲ್ಲ.

ಕೆಲವು ಐಎಫ್​ಎಸ್​ ಅಧಿಕಾರಿಗಳು ತಾವು ಕರ್ತವ್ಯ ನಿರ್ವಹಿಸುತ್ತಿರುವ ಕಾಡುಗಳಲ್ಲಿ ವನ್ಯಜೀವಿಗಳ ಅಪರೂಪದ ದೃಶ್ಯಗಳನ್ನು ವಿಡಿಯೋ ಮಾಡಿ ಅವುಗಳನ್ನು ಸಾಮಾಜಿಕ ಜಾಲ ತಾಣಗಳಿಗೆ ಅಪ್​ಲೋಡ್​ ಮಾಡಿ ಗಮನ ಸೆಳೆಯುತ್ತಿದ್ದಾರೆ.

ಸುಸಂತಾ ನಂದಾ ಎಂಬ ಐಎಫ್​ಎಸ್​ ಅಧಿಕಾರಿ, ಚಿರತೆ ತನ್ನ ಮರಿ ಚಿರತೆಗಳ ಜತೆಗೆ ಆಟವಾಡುತ್ತಿರುವ 20 ಸೆಕೆಂಡುಗಳ ವಿಡಿಯೋ ತುಣುಕನ್ನು ಟ್ವಿಟರ್​ಗೆ ಅಪ್​ಲೋಡ್​ ಮಾಡಿ ನೆಟ್ಟಿಗರ ಗಮನ ಸೆಳೆದಿದ್ದಾರೆ.

ವಿಡಿಯೋ ತುಣುಕು ಅಪ್​ಲೋಡ್ ಆದ ಒಂದು ತಾಸಿನಲ್ಲಿ ಸಾವಿರ ಮಂದಿ ವೀಕ್ಷಣೆ ಮಾಡಿದ್ದಾರೆ. ಕೆಲವರು ಪ್ರತಿಕ್ರಿಯೆ ಕೂಡ ನೀಡಿದ್ದಾರೆ.

ವಿಡಿಯೋ ತುಣುಕಿನಲ್ಲಿ ಏನಿದೆ? : ಕಾಡಿನಲ್ಲಿರುವ ಹುಲ್ಲು ಪೊದೆ ಬಳಿ ತಾಯಿ ಚಿರತೆ ತನ್ನ ಎರಡು ಮರಿ ಚಿರತೆಗಳ ಜತೆ ಆಟವಾಡುತ್ತಿದೆ. ಪ್ರಾಣಿಗಳ ಈ ರೀತಿಯ ಆಟವನ್ನು ನೀವು ಸುಲಭವಾಗಿ ನೋಡಲು ಸಾಧ್ಯವಿಲ್ಲ. ಮನುಷ್ಯರಂತೆ ಪ್ರಾಣಿಗಳಲ್ಲೂ ಪ್ರೀತಿ ಇದೆ. ತಾಯಿ ಚಿರತೆ ಪ್ರೀತಿಯನ್ನು ಹಂಚುತ್ತಿದೆ ಎಂದು ಶೀರ್ಷಿಕೆ ಬರೆದಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net