ಈ ಗ್ರಾಮದಲ್ಲಿ ಜಾನವಾರುಗಳಿಗೂ ವಾರಾಂತ್ಯ ರಜೆ ಇದೆ!

Cow
Published on

ಜಾರ್ಖಂಡ್: ವಾರಾಂತ್ಯದಲ್ಲಿ ದುಡಿಯುವ ಮಂದಿ ರಜೆ ತೆಗೆದುಕೊಳ್ಳುವುದರ ಬಗ್ಗ ಎಲ್ಲರಿಗೂ ಗೊತ್ತಿದೆ. ಆದರೆ ಇಲ್ಲೊಂದು ಗ್ರಾಮದಲ್ಲಿ ಜಾನುವಾರುಗಳಿಗೆ ವಾರಕ್ಕೊಮ್ಮೆ ರಜೆ ನೀಡಲಾಗುತ್ತಿದೆ. ಅಚ್ಚರಿಯಾದರೂ, ಈ ಸುದ್ದಿಯನ್ನು ನಂಬಲೇಬೇಕು!

ಜಾರ್ಖಂಡ್‌ನ ಲತೇಹರ್‌ ಜಿಲ್ಲೆಯಲ್ಲಿ ಭಾನುವಾರದಂದು ಜಾನುವಾರುಗಳನ್ನು ಯಾವುದೇ ಕೆಲಸಕ್ಕೆ ಬಳಸಿಕೊಳ್ಳುವುದಿಲ್ಲ. ಅಂದು ರಾಸುಗಳಿಗೆ ವಿಶ್ರಾಂತಿ ನೀಡಲಾಗುತ್ತದೆ. ಇದಿರಿಂದ ವಾರದ ದಣಿವನ್ನು ಹೋಗಲಾಡಿಸಲು ಸಾಧ್ಯವಾಗುತ್ತದೆ ಎಂದು ಇಲ್ಲಿನ ಜನರು ನಂಬಿಕೊಂಡಿದ್ದಾರೆ. ಲತೇಹರ್ ​ಜಿಲ್ಲೆಯ 20ಕ್ಕೂ ಹೆಚ್ಚು ಹಳ್ಳಿಗಳಲ್ಲಿ ಈ ನಿಯಮ ಅನೇಕ ವರ್ಷಗಳಿಂದ ಅಳವಡಿಸಿ, ಅನುಸರಿಸಿಕೊಂಡು ಬರಲಾಗುತ್ತಿದೆ. ಇದನ್ನೂ ಓದಿ: ಮಂಗಳೂರು | ಹೋಳಿ ಸಂಭ್ರಮದ ಡಿಜೆ ಪಾರ್ಟಿಗೆ ಭಜರಂಗದಳ ಕಾರ್ಯಕರ್ತರಿಂದ ದಾಳಿ; ಅಶ್ಲೀಲ ವರ್ತನೆ ಆರೋಪ

ಲತೇಹರ್‌ ಜಿಲ್ಲೆಯ ಜನರು ಪ್ರಾಣಿಗಳು ಮತ್ತು ಮನುಷ್ಯರ ನಡುವಿನ ಸಂಬಂಧ ಹುಟ್ಟಿನಿಂದ ಸಾವಿನವರೆಗೆ ಇರುತ್ತದೆ ಎಂದು ನಂಬಿಕೊಂಡು ಬರುತ್ತಿದ್ದಾರೆ. ಮನುಷ್ಯರು ತಮ್ಮ ಅನುಕೂಲಕ್ಕಾಗಿ ಪ್ರಾಣಿಗಳನ್ನು ಬಳಸುತ್ತಿದ್ದಾರೆ. ಹೀಗಾಗಿ ಅವುಗಳ ಕಾಳಜಿಯೂ ಅಗತ್ಯ. ಪ್ರಾಣಿಗಳನ್ನು ದುಡಿಸಿಕೊಳ್ಳುತ್ತಿರುವುದರಿಂದ ಇಲ್ಲಿನ ಜನರ ಹಸಿವು ನೀಗಿಸಲು ಸಾಧ್ಯವಾಗಿದೆ. ಕಷ್ಟಪಟ್ಟು ದುಡಿಯುವ ಪ್ರಾಣಿಗಳಿಗೆ ವಿಶ್ರಾಂತಿ ಅಗತ್ಯವಿದೆ ಎಂದು ಇಲ್ಲಿನ ಜನರು ವಾರಾಂತ್ಯ ವಿಶ್ರಾಂತಿ ಕಲ್ಪಿಸುತ್ತಿದ್ದಾರೆ. 

ಲತೇಹಾರ್‌ನ ಕೆಲವು ಹಳ್ಳಿಗಳಲ್ಲಿ ಜನರು ನಿಯಮವನ್ನೂ ಮಾಡಿದ್ದಾರೆ. ಒಂದು ದಿನ ಜಾನುವಾರುಗಳಿಗೆ ರಜೆ ನೀಡುವ ಸಂಪ್ರದಾಯವು ಲತೇಹರ್ ಜಿಲ್ಲೆಯ ಹರ್ಖಾ, ಮೊಂಗರ್, ಲಾಲ್ಗಡಿ ಮತ್ತು ಪಕ್ರರ್ ಸೇರಿದಂತೆ ಹಲವಾರು ಗ್ರಾಮಗಳಲ್ಲಿ ಚಾಲ್ತಿಯಲ್ಲಿದೆ. (ಏಜೆನ್ಸೀಸ್) ಇದನ್ನೂ ಓದಿ: ಮನೆಯವರಿಂದ ಪ್ರೀತಿ ನಿರಾಕರಣೆ; 100 ಅಡಿ ಕಂದಕಕ್ಕೆ ಜಿಗಿದೂ ಬದುಕುಳಿದ ಪ್ರೇಮಿಗಳು!

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net