Donald Trump | ಇದು ಕೇವಲ ಯುದ್ಧದ ಅಂತ್ಯವಲ್ಲ, ಹೊಸ ಮಧ್ಯಪ್ರಾಚ್ಯದ ಉದಯ: ಡೊನಾಲ್ದ್​ ಟ್ರಂಪ್

Donald Trump
Published on

ಇಸ್ರೇಲ್: ಮಧ್ಯಪ್ರಾಚ್ಯಕ್ಕೆ ಶಾಂತಿ ಕ್ಷಣವೆಂದು ಘೋಷಿಸುತ್ತಾ, ನಾನು ಎಂಟು ತಿಂಗಳಲ್ಲಿ ಎಂಟು ಯುದ್ಧಗಳನ್ನು ಕೊನೆಗೊಳಿಸಿದ್ದೇನೆ ಎಂದು ಇಸ್ರೇಲ್ ಸಂಸತ್ತಿನಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ದ್​ ಟ್ರಂಪ್(Donald Trump) ಸೋಮವಾರ ಹೇಳಿದ್ದಾರೆ.

ಈ ಬಗ್ಗೆ ಇಸ್ರೇಲ್​ ಸಂಸತ್ತಿನಲ್ಲಿ ಮಾತನನಾಡಿದ ಟ್ರಂಪ್​, ಗಾಜಾ ಯುದ್ಧದಲ್ಲಿ ಮಧ್ಯವರ್ತಿಯಾಗಿ ಸಹಾಯ ಮಾಡಿದ ಕದನ ವಿರಾಮವು ಹೊಸ ಮಧ್ಯಪ್ರಾಚ್ಯದ ಐತಿಹಾಸಿಕ ಉದಯವನ್ನು ಗುರುತಿಸಿದೆ ಎಂದು ಟ್ರಂಪ್ ತಿಳಿಸಿದ್ದಾರೆ.

ಇಸ್ರೇಲ್​- ಹಮಾಸ್​ ಹಲವು ವರ್ಷಗಳಿಂದ ನಡೆಯುತ್ತಿರುವ ನಿರಂತರ ಯುದ್ಧ ಮತ್ತು ಅಂತ್ಯವಿಲ್ಲದ ಹತ್ಯಕಾಂಡವು ಇಂದು ಶಾಂತವಾಗಿದೆ. ಅಲ್ಲದೆ, ಬಂದೂಕುಗಳು ಮೌನವಾಗಿವೆ, ಸೈರನ್‌ಗಳು ಮೋಳಗುವುದು ನಿಂತಿದೆ ಮತ್ತು ಸೂರ್ಯ ಅಂತಿಮವಾಗಿ ಶಾಂತಿಯುತವಾಗಿರುವ ಪವಿತ್ರ ಭೂಮಿಯಲ್ಲಿ ಉದಯಿಸುತ್ತಾನೆ ಎಂದು ಟ್ರಂಪ್​ ಶ್ಲಾಘಿಸಿದ್ದಾರೆ.

ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇಸ್ರೇಲ್‌ಗೆ ಭೇಟಿ ನೀಡಿ ಸೋಮವಾರ ನೆಸ್ಸೆಟ್ ಅನ್ನು ಉದ್ದೇಶಿಸಿ ಮಾತನಾಡಿದರು, ಅಲ್ಲಿ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು, ನೆಸ್ಸೆಟ್ ಸ್ಪೀಕರ್ ಅಮೀರ್ ಒಹಾನಾ ಮತ್ತು ವಿರೋಧ ಪಕ್ಷದ ನಾಯಕ ಯೈರ್ ಲ್ಯಾಪಿಡ್ ಕೂಡ ಹೇಳಿಕೆಗಳನ್ನು ನೀಡಿದರು.

ಅರಬ್ ಮತ್ತು ಮುಸ್ಲಿಂ ರಾಷ್ಟ್ರಗಳ ಪಾತ್ರಕ್ಕೆ ಟ್ರಂಪ್ ಧನ್ಯವಾದ

ಗಾಜಾದಲ್ಲಿ ಹೋರಾಟವನ್ನು ಕೊನೆಗೊಳಿಸಿದ ಮತ್ತು ಹಮಾಸ್ ಹಿಡಿದಿದ್ದ ಒತ್ತೆಯಾಳುಗಳ ಬಿಡುಗಡೆಯನ್ನು ಖಚಿತಪಡಿಸಿದ ಒಪ್ಪಂದವನ್ನು ಸೋಮವಾರ ಡೊನಾಲ್ಡ್ ಟ್ರಂಪ್ ಶ್ಲಾಘಿಸಿದ್ದಾರೆ. ಅರಬ್ ಮತ್ತು ಮುಸ್ಲಿಂ ಪ್ರಪಂಚದ ಮಧ್ಯವರ್ತಿಗಳಿಗೆ ಕೃತಜ್ಞತೆಗಳನ್ನು ವ್ಯಕ್ತಪಡಿಸಿದ್ದಾರೆ.

ಹಮಾಸ್ ಒತ್ತೆಯಾಳುಗಳನ್ನು ಮುಕ್ತಗೊಳಿಸಿ ಮನೆಗೆ ಕಳುಹಿಸುವಂತೆ ಒತ್ತಡ ಹೇರಲು ಒಗ್ಗೂಡಿದ ಅರಬ್ ಮತ್ತು ಮುಸ್ಲಿಂ ಜಗತ್ತಿನ ಎಲ್ಲಾ ರಾಷ್ಟ್ರಗಳಿಗೂ ನನ್ನ ಅಪಾರ ಕೃತಜ್ಞತೆಯನ್ನು ತಿಳಿಸುತ್ತೇನೆ ಎಂದು ಟ್ರಂಪ್ ಇಸ್ರೇಲ್ ಸಂಸತ್ತಿನಲ್ಲಿ ಹೇಳಿದ್ದಾರೆ.

ಗಾಜಾ ಒಪ್ಪಂದ ಇಸ್ರೇಲ್ ಮತ್ತು ಜಗತ್ತಿಗೆ ಅದ್ಭುತ ಜಯ: ಟ್ರಂಪ್

ಗಾಜಾದಲ್ಲಿ ಕದನ ವಿರಾಮವನ್ನು ಖಚಿತಪಡಿಸಿಕೊಳ್ಳಲು ಮತ್ತು ಹಮಾಸ್ ಹಿಡಿದಿದ್ದ ಒತ್ತೆಯಾಳುಗಳ ಬಿಡುಗಡೆಯನ್ನು ಖಚಿತಪಡಿಸಿಕೊಳ್ಳಲು ಸಾಧ್ಯವಾದ ಒಪ್ಪಂದವನ್ನು ಟ್ರಂಪ್ ಶ್ಲಾಘಿಸಿದರು.

ಹಮಾಸ್ ಒತ್ತೆಯಾಳುಗಳನ್ನು ಮುಕ್ತಗೊಳಿಸಿ ಅವರನ್ನು ಮನೆಗೆ ಕಳುಹಿಸುವಂತೆ ಒತ್ತಡ ಹೇರಲು ಒಗ್ಗೂಡಿದ ಅರಬ್ ಮತ್ತು ಮುಸ್ಲಿಂ ಜಗತ್ತಿನ ಎಲ್ಲಾ ರಾಷ್ಟ್ರಗಳಿಗೂ ನನ್ನ ಅಪಾರ ಕೃತಜ್ಞತೆಯನ್ನು ತಿಳಿಸುತ್ತೇನೆ ಎಂದು ಟ್ರಂಪ್ ಇಸ್ರೇಲ್ ಸಂಸತ್ತಿನಲ್ಲಿ ತಿಳಿಸಿದ್ದಾರೆ.

ನಮಗೆ ಸಾಕಷ್ಟು ಸಹಾಯ ಸಿಕ್ಕಿತು. ನೀವು ಅನುಮಾನಿಸದಷ್ಟು ಜನರಿಂದ ನಮಗೆ ಸಾಕಷ್ಟು ಸಹಾಯ ಸಿಕ್ಕಿದೆ ಮತ್ತು ಇದಕ್ಕಾಗಿ ನಾನು ತುಂಬಾ ಧನ್ಯವಾದ ಹೇಳಲು ಬಯಸುತ್ತೇನೆ. ಈ ಎಲ್ಲಾ ರಾಷ್ಟ್ರಗಳು ಶಾಂತಿಯುತವಾಗಿ ಪಾಲುದಾರರಾಗಿ ಒಟ್ಟಾಗಿ ಕೆಲಸ ಮಾಡುತ್ತಿರುವುದು ಇಸ್ರೇಲ್ ಮತ್ತು ಜಗತ್ತಿಗೆ ಒಂದು ಅದ್ಭುತ ವಿಜಯವಾಗಿದೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net