ಬೋಳು ತಲೆಯಲ್ಲಿಯೇ ಹಸೆಮಣೆ ಏರಿದ ವಧು! ಸೌಂದರ್ಯದ ಬಗ್ಗೆ ಮಾತನಾಡಿದವರಿಗೆ ಕೊಟ್ಟಳು ಉತ್ತರ.. ditches wig at her wedding

Neehar Chooses Confidence Over a Wig
Published on

ಬೋಳುತಲೆಯಲ್ಲಿಯೇ ವಧುವಿನ ಸಿಂಗಾರ ಮಾಡಿಕೊಂಡು ಪತಿಯ ಕೈ ಹಿಡಿದಿದ್ದಾಳೆ

ನವದೆಹಲಿ: ( ditches wig at her wedding )  ಹೆಣ್ಣು ಮಕ್ಕಳಿಗೆ ಕೇಶರಾಶಿಯೇ ಸೌಂದರ್ಯಕ್ಕೆ ಇನ್ನೊಂದು ಮೆರಗು ಕೊಡುವ ಅಂಶ. ವಿವಿಧ ರೀತಿಯಲ್ಲಿ ಕೇಶ ವಿನ್ಯಾಸ ಮಾಡಿಸಿಕೊಳ್ಳುವುದರಲ್ಲಿ ಮಹಿಳೆಯರು ಸದಾ ಮುಂದು. ಆದರೆ ಇಲ್ಲೊಬ್ಬಳು ಯುವತಿ ಬೋಳು ತಲೆಯಲ್ಲಿಯೇ ಮದುವೆಯಾಗಿದ್ದಾರೆ. ಈ ವಿಡಿಯೋ ಸೋಶಿಯಲ್​​ ಮೀಡಿಯಾದಲ್ಲಿ ಸಖತ್​ ವೈರಲ್​ ಆಗಿದೆ.

ಡಿಜಿಟಲ್ ಕ್ರಿಯೇಟರ್ ನಿಹಾರಾ ಸಚ್​​ದೇವ  ಅಲೋಪೆಸಿಯಾ ಏರಿಯಾಟಾ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಇದು ಕೂದಲು ಉದುರುವ ಒಂದು ಕಾಯಿಲೆಯಾಗಿದೆ. ಈ ಕಾಯಿಲೆಯಿಂದ ದೇಹದ ಎಲ್ಲಾ ಭಾಗದಲ್ಲಿರುವ ಕೂದಲುಗಳು ಉದುರಿ ಹೋಗುತ್ತವೆ.  ಈ ಒಂದು ವಿಚಿತ್ರ ಸಮಸ್ಯೆಯಿಂದ ಬಳಲುತ್ತಿದ್ದ ನಿಹಾರಾ ಸಚ್​ದೇವ, ತುಂಬಾ ಚಿಕ್ಕ ವಯಸ್ಸಿನಲ್ಲಿಯೇ ತಮ್ಮ ತಲೆಗೂದಲನ್ನು ಕಳೆದುಕೊಂಡರು. ಆರಂಭದಲ್ಲಿ ಅವರು ವಿಗ್​ನ ಮೊರೆ ಹೋದರು. ಆಮೇಲೆ ಈ ಎಲ್ಲಾ ಕೀಳರಿಮೆಯಿಂದ ಆಚೆ ಬಂದು ತನ್ನ ನೈಸರ್ಗಿಕ ಸೌಂದರ್ಯವೇ ನನ್ನ ಅಸಲಿ ಗುರುತು ಎಂದು ನಿರ್ಧರಿಸಿ ತಮ್ಮ ಇಡೀ ತಲೆಯನ್ನೇ ಬೋಳಿಸಿಕೊಂಡರು. ಅವರ ಮದುವೆಯ ದಿನದಂದೂ ಕೂಡ ಅವರು ವಿಗ್ ಧರಿಸದೇ ಬೋಳು ತಲೆಯಲ್ಲಿಯೇ ಮದುವೆಯ ಎಲ್ಲ ವಿಧಿ ವಿಧಾನಗಳಲ್ಲೂ ಭಾಗಿಯಾದರು.

ಬೋಳು ತಲೆಯ ಬಗ್ಗೆ ಮಾತನಾಡಿದವರೆಲ್ಲರನ್ನೂ ಮದುವೆಗೆ ಕರೆದಿದ್ದರು. ಈ ಮೂಲಕ ಸೌಂದರ್ಯವೆನ್ನುವುದು ಕೇವಲ ಆತ್ಮವಿಶ್ವಾಸದಲ್ಲಿ ಅಡಗಿದೆ ಎಂದು ಪರೋಕ್ಷವಾಗಿ ಅವರಿಗೆ ಸಂದೇಶ ಮುಟ್ಟಿಸಿದರು.

ವಧುವಿನ ಅಲಂಕಾರದಲ್ಲಿ ನೀಹಾರಾ ಕಲ್ಯಾಣ ಮಂಟಪಕ್ಕೆ ಎಂಟ್ರಿ ಕೊಟ್ರೊ ಅದು ಎಂದೆಂದೂ ನೆನಪಿನಲ್ಲಿಡಬೇಕಾದ ದಿನವಾಗಿ ಉಳಿಯಿತು. ಅವರನ್ನು ಕೈ ಹಿಡಿಯಲಿದ್ದ ವರ ಅರುಣ್ ವಿ ಗಣಪತಿ ಆಕೆಯನ್ನು ಪ್ರೀತಿಯಿಂದ ಸ್ವಾಗತಿಸಿದ್ದಾರೆ. ಈ ವಿಡಿಯೋ  ವೈರಲ್​ ಆಗುವುದರ ಜತೆಗೆ ಉತ್ತಮ ಸಂದೇಶವನ್ನು ಜಗತ್ತಿಗೆ ಸಾರಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net