ವಿಜಯ್ ಕೊನೆಯ ಸಿನಿಮಾ ನಿರ್ದೇಶಿಸಲು ನಾ ಮುಂದು ತಾ ಮುಂದು ಅಂತಿದ್ದಾರೆ ಈ ಇಬ್ಬರು ನಿರ್ದೇಶಕರು​​?

Untitled design - 2024-03-01T143413.023
Published on

ತಮಿಳುನಾಡು: ಪ್ಯಾನ್ ಇಂಡಿಯಾ ಲಿಯೋ ಸಿನಿಮಾ ಬಾಕ್ಸ್​ ಆಫೀಸ್​ನಲ್ಲಿ ಸೂಪರ್​ಡೂಪರ್​ ಹಿಟ್ ಆದ ಬೆನ್ನಲ್ಲೇ ತಮಿಳು ನಟ ದಳಪತಿ ವಿಜಯ್​ ತಮ್ಮದೇ ಹೊಸ ಪಕ್ಷವೊಂದನ್ನು ಘೋಷಿಸುವ ಮೂಲಕ ಅಭಿಮಾನಿಗಳ ಗೊಂದಲಕ್ಕೆ ತೆರೆ ಎಳೆದರು. ಇದಾದ ಬಳಿಕ ಸಾಮಾಜಿಕ ಜಾಲತಾಣದಲ್ಲಿ ದೊಡ್ಡ ಪ್ರಶ್ನೆಯೊಂದು ತೀವ್ರ ಚರ್ಚೆಗೆ ಗ್ರಾಸವಾಗಿದ್ದು, ಇನ್ಮುಂದೆ ನಟ ಸಿನಿಮಾ ಮಾಡುವುದಿಲ್ಲ. ಕಾರಣ, ಅವರು ರಾಜಕೀಯದತ್ತ ಹೆಚ್ಚು ಗಮನಹರಿಸಲಿದ್ದಾರೆ. ಪಕ್ಷ ಘೋಷಿಸುವ ಮುನ್ನ ಸಹಿ ಹಾಕಿದ ಪ್ರಾಜೆಕ್ಟ್​ ಹೊರತುಪಡಿಸಿ ಇನ್ಯಾವುದೇ ಚಿತ್ರವನ್ನು ದಳಪತಿ ಒಪ್ಪುವುದಿಲ್ಲ ಎಂದು ಹೇಳಲಾಗಿದೆ.

ಪ್ರಸ್ತುತ ವೆಂಕಟ್ ಪ್ರಭು ನಿರ್ದೇಶನದ 'ದಿ ಗ್ರೇಟೆಸ್ಟ್ ಆಫ್ ಆಲ್ ಟೈಮ್' ಚಿತ್ರೀಕರಣದಲ್ಲಿ ತೊಡಗಿರುವ ದಳಪತಿ ವಿಜಯ್, ತಮ್ಮ 69ನೇ ಚಿತ್ರದ ನಿರ್ದೇಶಕರ ಬಗ್ಗೆ ಇನ್ನೂ ನಿರ್ಧಾರ ಕೈಗೊಂಡಿಲ್ಲ. ಇತ್ತೀಚೆಗಷ್ಟೇ 'ದಳಪತಿ 69' ಸಿನಿಮಾದ ನಂತರ ಪೂರ್ಣಾವಧಿ ರಾಜಕೀಯಕ್ಕೆ ಸೇರಲು ಸಿನಿಮಾ ತ್ಯಜಿಸುವುದಾಗಿ ನಟ ತಿಳಿಸಿದ್ದು, ಇದೀಗ ಈ ಚಿತ್ರಗಳ ಮೇಲಿನ ನಿರೀಕ್ಷೆ ದುಪಟ್ಟಾಗಿದೆ.

ತಮಿಳು ಮತ್ತು ತೆಲುಗು ಚಿತ್ರರಂಗದಿಂದಲೇ ಬರೋಬ್ಬರಿ 8 ನಿರ್ದೇಶಕರು 'ದಳಪತಿ 69' ಚಿತ್ರವನ್ನು ನಿರ್ದೇಶಿಸಲು ರೇಸ್‌ನಲ್ಲಿದ್ದಾರೆ ಎಂದು ಈ ಹಿಂದೆಯೇ ವರದಿಯೊಂದು ಮಾಹಿತಿ ನೀಡಿತ್ತು. ಈ ಪಟ್ಟಿಯಲ್ಲಿ ಕಾರ್ತಿಕ್ ಸುಬ್ಬರಾಜ್, ಎಚ್. ವಿನೋತ್, ವೆಟ್ರಿಮಾರನ್, ತ್ರಿವಿಕ್ರಮ್ ಶ್ರೀನಿವಾಸ್ ಮತ್ತು ಇತರರು ಇದ್ದಾರೆ. ಈಗ ಈ ಪಟ್ಟಿಗೆ ಇತ್ತೀಚಿನ ಸೇರ್ಪಡೆ ಆರ್. ಜೆ. ಬಾಲಾಜಿ ಕೂಡ ಸೇರ್ಪಡೆಗೊಂಡಿದ್ದಾರೆ.

ವರದಿಯ ಪ್ರಕಾರ, ಆರ್‌.ಜೆ. ಬಾಲಾಜಿ ಮತ್ತು ಕಾರ್ತಿಕ್ ಸುಬ್ಬರಾಜ್ 'ದಳಪತಿ 69' ನಿರ್ದೇಶಿಸಲು ಮುಂಚೂಣಿಯಲ್ಲಿದ್ದಾರೆ ಎನ್ನಲಾಗಿದೆ. ಈ ಇಬ್ಬರೂ ನಿರ್ದೇಶಕರು ವಿಶ್ಲೇಷಿಸಿದ ರೀತಿ ಕಂಡು ಮಾತುಕತೆ ನಡೆಸಿದ ವಿಜಯ್, ಇಬ್ಬರಿಗೂ ಕಥೆಯ ಅಂತಿಮ ಡ್ರಾಫ್ಟ್‌ನ ಕೊಡಲು ತಿಳಿಸಿದ್ದಾರೆ. ಪೂರ್ಣ ಸ್ಕ್ರಿಪ್ಟ್‌ನ ಮುಂದಿನ ಮಾತುಕತೆಯಲ್ಲಿ ಅಸಲಿಗೆ ಯಾರು ಈ ಬಹುನಿರೀಕ್ಷಿತ ಚಿತ್ರವನ್ನು ಕೈಗೊಳ್ಳಲಿದ್ದಾರೆ ಎಂಬುದು ಅಂತಿಮವಾಗಲಿದೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net