ವಿಷಕಾರಿ ಸಸ್ಯ ತಿಂದು 11 ಕುರಿಗಳು ಸಾವು

Untitled design
Published on

ಕುರುಗೋಡು: ಸಮೀಪದ ತಿಮ್ಮಲಾಪುರ ಗ್ರಾಮದಲ್ಲಿ ವಿಷಕಾರಿ ಸಸ್ಯವನ್ನು ತಿಂದು 11 ಕುರಿಗಳು ಸಾವನ್ನಪ್ಪಿರುವ ಘಟನೆ ಬುಧವಾರ ರಾತ್ರಿ ನಡೆದಿದೆ.
ಗ್ರಾಮದ ಪ್ರಕಾಶ್, ಲಿಂಗಪ್ಪ, ಮಲ್ಲಿಕಾರ್ಜುನ ಅವರ ಕುರಿಗಳಾಗಿವೆ. ಕುರಿಗಳು ದಿನ ನಿತ್ಯದಂತೆ ಹೊರಗಡೆ ಮೇಯಿಸಲು ಹೋದಾಗ ವಿಷಕಾರಿ ಅಂಶವಿರುವ ಸಸ್ಯವನ್ನು ತಿಂದು ಮೃತಪಟ್ಟಿವೆ. ಅಂದಾಜು 1.30 ಲಕ್ಷ ರೂ. ನಷ್ಟವಾಗಿದೆ ಎಂದು ಕುರಿ ಮಾಲೀಕರು ಅಳಲು ತೋಡಿಕೊಂಡರು.
ಗುರುವಾರ ಬೆಳಗ್ಗೆ ಕುರಿಗಳು ಮೃತಪಟ್ಟ ಸ್ಥಳಕ್ಕೆ ಮೆಟ್ರಿ ಪಶು ವೈದ್ಯಾಧಿಕಾರಿ ಪ್ರದೀಪ್ ಕುಮಾರ್, ಸಿದ್ದಮ್ಮನಹಳ್ಳಿ ಪಶು ವೈದ್ಯಾಧಿಕಾರಿ ವೀರೇಶ್ ಭೇಟಿ ನೀಡಿ ಮಾಹಿತಿ ಪಡೆದುಕೊಂಡರು.

ಅಂದಾಜು 1.30 ಲಕ್ಷ ರೂ. ನಷ್ಟ

ಇನ್ವೆಚರ್ ಜೋಳ (ವಿಷಕಾರಿ ಸಸ್ಯ) ತಿಂದರೆ ಕುರಿಗಳು ಮೃತಪಡುತ್ತವೆ. ಈ ಸಸ್ಯ 30 ರಿಂದ 40 ದಿನಗಳಲ್ಲಿ ಬೆಳವಣಿಗೆ ಕಾಣುತ್ತವೆ. 40 ದಿನಗಳ ಒಳಗಡೆ ಪ್ರಾಣಿಗಳು ತಿಂದರೆ ಸಾವನ್ನಪ್ಪುತ್ತವೆ. 40 ದಿನದ ನಂತರ ಸಸ್ಯದಲ್ಲಿ ಕಾಳು ಕಟ್ಟಿದ ನಂತರ ಪ್ರಾಣಿಗಳು ತಿಂದರೆ ಏನು ಆಗುವುದಿಲ್ಲ. ಕುರಿಗಳ ಮೃತಪಟ್ಟಿರುವುದನ್ನು ಮೇಲಧಿಕಾರಿಗಳ ಗಮನಕ್ಕೆ ತರಲಾಗುವುದು. ಒಂದು ಕುರಿಗೆ 5000 ರೂ. ಪರಿಹಾರ ನೀಡಲಾಗುತ್ತದೆ. ರೈತನಿಗೆ ಅಗತ್ಯ ನೆರವು ನೀಡಲಾಗುವುದು ವೈದ್ಯಾಧಿಕಾರಿಗಳು ಭರವಸೆ ನೀಡಿದರು. ಗ್ರಾಪಂ ಸದಸ್ಯ ಮಂಜುನಾಥ, ಮುಖಂಡ ಜಿ. ಬಸವರಾಜ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net