2.10 ಕೆಜಿ ಬೆಳ್ಳಿ ದೋಚಿದ ಕಳ್ಳರು!

crime
Published on


ನಗರದ ಲಲಿತಾದ್ರಿಪುರ ಬಡಾವಣೆಯ ನಿವಾಸಿ ಪ್ರಶಾಂತ್ ಅವರ ಮನೆಯ ಬಾಗಿಲ ಲಾಕ್ ಮುರಿದು ಒಳ ನುಗ್ಗಿದ ಕಳ್ಳರು 1.20 ಲಕ್ಷ ರೂ. ಮೌಲ್ಯದ 2.10 ಕೆ.ಜಿ. ಬೆಳ್ಳಿ ವಸ್ತುಗಳನ್ನು ದೋಚಿದ್ದಾರೆ.
ಪ್ರಶಾಂತ್ ಸೆ. 10ರಂದು ಬೆಳಗ್ಗೆ 9 ಗಂಟೆಗೆ ಪತ್ನಿಯನ್ನು ಕಾಲೇಜಿಗೆ ಡ್ರಾಪ್ ಮಾಡಿ ಅವರು ಊರಿಗೆ ತೆರಳಿದ್ದರು. ವಾಪಸ್ ರಾತ್ರಿ 9 ಗಂಟೆ ವೇಳೆಗೆ ಮನೆಗೆ ಬಂದಾಗ ಕಳ್ಳತನ ನಡೆದಿರುವುದು ಗೊತ್ತಾಗಿದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಆಲನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net