ತನಿಷ್ಕ್ ಜ್ಯುವೆಲ್ಲರ್ಸ್​ನಲ್ಲಿ ಗನ್​ ತೋರಿಸಿ 25 ಕೋಟಿ ರೂ. ಮೌಲ್ಯದ ಚಿನ್ನಾಭರಣ ದರೋಡೆ; ವಿಡಿಯೋ ನೋಡಿ | Jewellery

dk-2025-03-10t182936499-67cee23df2140
Published on

Jewellery: ಬಿಹಾರದ ಆರ್ರಾ ಪ್ರದೇಶದಲ್ಲಿರುವ ತನಿಷ್ಕ್ ಜ್ಯುವೆಲ್ಲರ್ಸ್ ಶೋರೂಮ್​ನಲ್ಲಿ ಸೋಮವಾರ(ಮಾ.10) ಅಂದಾಜು 25 ಕೋಟಿ ರೂ. ಮೌಲ್ಯದ ಚಿನ್ನಾಭರಣ ಸೇರಿದಂತೆ ನಗದು ಹಣ ಕದ್ದು ಕಳ್ಳರು ಪರಾರಿಯಾಗಿರುವ ಘಟನೆ ನಡೆದಿದೆ.

ಇಲ್ಲಿನ ಅರ್ರಾ ಪೊಲೀಸ್​ ಠಾಣೆ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದ್ದು, ಆಭರಣ ಕದ್ದು ಪರಾರಿಯಾಗುತ್ತಿರುವ ದೃಶ್ಯಗಳು ಸೆರೆಯಾಗಿವೆ.ಇನ್ನು ಈ ಕುರಿತು ಪ್ರಕರಣ ದಾಖಲಾಗಿದ್ದು ಇಬ್ಬರನ್ನು ಬಂಧಿಸಲಾಗಿದೆ. ತನಿಖೆ ಮುಂದರಿದಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಶೋರೂಮ್​ ಮಾಲೀಕ ಕುಮಾರ್ ಮೃತ್ಯುಂಜಯ ಮಾಧ್ಯಮಗಳ ಜತೆ ಮಾತನಾಡಿದ್ದು, '' ದರೋಡೆಕೊರರು ನಗದು ಜತೆಗೆ ಚಿನ್ನಾಭರಣ, ಬಂಗಾರ ಸರಗಳು, ನೆಕ್ಲೇಸ್​ ಮತ್ತು ಕೆಲ ವಜ್ರಗಳು ಸೇರಿ ಬೆಲೆ ಬಾಳುವ ವಸ್ತುಗಳನ್ನು ದೋಚಿದ್ದಾರೆ. ಕಳ್ಳರ ಕೈಚಳಕ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಅಂದಾಜು 25 ಕೋಟಿ ರೂ. ಮೌಲ್ಯದಷ್ಟು ವಸ್ತುಗಳು ಕಳುವಾಗಿವೆ. ಅಲ್ಲದೆ, ಶೋರೂಮ್​ನ ಕರೆಗೆ ಪೊಲೀಸರು ಮೊದಲು ಸ್ಪಂದಿಸಲಿಲ್ಲ ಎಂದು ಆರೋಪಿಸಿದ್ದಾರೆ.''

ಸಿಸಿಟಿವಿಯಲ್ಲಿ ಸೆರೆ

ಸಿಸಿಟಿವಿ ಕ್ಯಾಮೆರಾ ದೃಶ್ಯಾವಳಿಯಲ್ಲಿ 8-9 ಜನರು ಒಳನುಗ್ಗಿ ಶೋರೂಮ್​ ಒಳಗೆ ಇದ್ದ ಸಿಬ್ಬಂದಿ ಮತ್ತು ಉದ್ಯೋಗಿಗಳಿಗೆ ಗನ್​ ತೋರಿಸಿ ಬೆದರಿಸುತ್ತಿರುವುದು ಕಂಡುಬಂದಿದೆ. ನಂತರ ದರೋಡೆಕೋರರು ಕೌಂಟರ್‌ನಲ್ಲಿದ್ದ ನಗದು ಮತ್ತು ಹಲವಾರು ಆಭರಣಗಳನ್ನು ದೋಚಿರುವ ದೃಶ್ಯಗಳು ಸಿಸಿಟಿಯಲ್ಲಿ ಸೆರೆಯಾಗಿವೆ.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net