ಸಂಬಳ ಏರಿಸಲಿಲ್ಲವೆಂದು ಮಾಲೀಕರ ಮನೆಯಿಂದ ಕದ್ದು ಚಿನ್ನ-ಹಣವನ್ನು ದಾನ ಮಾಡುತ್ತಿದ್ದ ಕಳ್ಳನ ಬಂಧನ!

theft
Published on

ಬೆಂಗಳೂರು: ನಗರದಲ್ಲಿ ಓರ್ವ ವಿಚಿತ್ರ ಕಳ್ಳನ ಬಂಧನವಾಗಿದೆ. ಈತ ಸಂಬಳ ಏರಿಸಲಿಲ್ಲ ಎಂದು ಕಳ್ಳತನ‌ ಮಾಡಿ, ತಪ್ಪಾಯ್ತು ಅಂತಾ ದಾನ ಧರ್ಮ ಮಾಡುತ್ತಿದ್ದ!

ಅಶೋಕನಗರ ಪೊಲೀಸರು ಈ ವಿಚಿತ್ರ ಕಳ್ಳನನ್ನು ಬಂಧಿಸಿದ್ದಾರೆ. ಜಾನ್‌ ಅಲಿಯಾಸ್ ಮಂಜುನಾಥ್ ಎನ್ನುವಾತ ಬಂಧಿತ ಆರೋಪಿಯಾಗಿದ್ದಾನೆ. ಈತ ಮೊದಲಿಗೆ ಮನೆಕಲಸಕ್ಕೆ ಸೇರಿಕೊಳ್ಳುತ್ತಿದ್ದ. ಆದರೆ ಆಮೇಲೆ ಸಂಬಳ ಏರಿಸಲಿಲ್ಲ ಎಂದು ಮಾಲೀಕರ ಮನೆಯಲ್ಲಿಯೇ ಕಳ್ಳತನ ಮಾಡುತ್ತಿದ್ದ.

ಈತನ ಕಥೆ ಬೆಳಕಿಗೆ ಬಂದದ್ದು ಶಾಂತಿನಗರ ಮನೆಯೊಂದರಲ್ಲಿ 2 ಲಕ್ಷ ಮೌಲ್ಯದ ಚಿನ್ನಭಾರಣ ಕಳ್ಳತನ ಮಾಡಿದ್ದ ನಂತರ. ಈತ ಚಿನ್ನ ಹಣವನ್ನೆಲ್ಲ ಕದ್ದು‌, ನಂತರ ದೇವಸ್ಥಾನಕ್ಕೆ ಭೇಟಿ ನೀಡಿ ಹುಂಡಿಯಲ್ಲಿ ಚಿನ್ನ ಹಾಕಿದ್ದ. ಈತ ಅದೆಷ್ಟು ಉದಾರಿ ಎಂದರೆ ಕದ್ದ ಮಾಲಿನಲ್ಲಿ ದೇವಸ್ಥಾನದ ಬಳಿ ಇರುವ ಭೀಕ್ಷಕರಿಗೂ ಕಳ್ಳತನದಲ್ಲಿ ಪಾಲು ನೀಡುತ್ತಿದ್ದ. ಬಳಿಕ ಮಿಕ್ಕ ಚಿನ್ನಭಾರಣ ವನ್ನ ತನ್ನ ಸ್ವಂತಕ್ಕೆ ಉಪಯೋಗಿಸಿಕೊಳ್ಳುತ್ತಿದ್ದ. ಈತ ದಾನದ ವಿಚಾರದಲ್ಲೂ ನಿಷ್ಪಕ್ಷನಾಗಿದ್ದು ತಮಿಳುನಾಡಿನ ಹಿಂದೂ ದೇವಾಲಯ, ಚರ್ಚ್ ಗಳಿಗೆ ಭೇಟಿ ನೀಡಿ ಚಿನ್ನ ಹಂಚುತ್ತಿದ್ದ ಎಂದು ತಿಳಿದು ಬಂದಿದೆ.

ಮನೆ‌ಕೆಲಸ ಮಾಡುವ ನೆಪದಲ್ಲಿ ಕಳ್ಳತನ ಮಾಡುತ್ತಿದ್ದ ಆರೋಪಿ ಜಾನ್, ಸದ್ಯಕ್ಕೆ ಅಶೋಕ್ ನಗರ ಪೊಲೀಸರ ಅಧೀನದಲ್ಲಿ ವಿಚಾರಣೆ ಎದುರಿಸುತ್ತಿದ್ದಾನೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net