ಈ ಮೂರು ರಾಶಿಯವರು ಯಾರಿಗೂ ಬಕೆಟ್‌ ಹಿಡಿಯಲ್ಲ, ಹೆದರುವುದೂ ಇಲ್ಲವಂತೆ! ನಿಮ್ಮದೂ ಇದೇ ರಾಶಿನಾ? Zodiac Signs

Zodiac Signs
Published on

Zodiac Signs : ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ವ್ಯಕ್ತಿಯ ರಾಶಿಚಕ್ರ ಮತ್ತು ನಕ್ಷತ್ರ ಚಿಹ್ನೆಯು ಆತನ ಭವಿಷ್ಯದ ಜೀವನ, ಆರ್ಥಿಕ ಪರಿಸ್ಥಿತಿ, ವ್ಯಕ್ತಿತ್ವದ ಲಕ್ಷಣಗಳು ಮತ್ತು ಆತನ ಸಕಾರಾತ್ಮಕ ಹಾಗೂ ನಕಾರಾತ್ಮಕ ಗುಣಗಳ ಮೇಲೆ ನೇರವಾಗಿ ಪ್ರಭಾವ ಬೀರುತ್ತದೆ ಎಂದು ನಂಬಲಾಗಿದೆ. ಹೀಗಾಗಿ ಹಿಂದು ಧರ್ಮದಲ್ಲಿ ಜ್ಯೋತಿಷ್ಯಕ್ಕೆ ತುಂಬಾ ಮಹತ್ವವಿದೆ. ಏನೇ ಶುಭ ಕಾರ್ಯ ನಡೆಯಬೇಕೆಂದರೂ ಮೊದಲು ಜ್ಯೋತಿಷ್ಯದ ಮೊರೆ ಹೋಗುತ್ತಾರೆ.

ಅಂದಹಾಗೆ, ಕೆಲವು ರಾಶಿಚಕ್ರ ಚಿಹ್ನೆಗಳಲ್ಲಿ ಜನಿಸಿದ ಜನರು ಸ್ವಾಭಾವಿಕವಾಗಿಯೇ ಸ್ವತಂತ್ರರಾಗಿರುತ್ತಾರೆ ಮತ್ತು ಸ್ವಾತಂತ್ರ್ಯದ ಬಲವಾದ ಬಯಕೆಯನ್ನು ಹೊಂದಿರುತ್ತಾರೆ. ಯಾರ ನಿಯಂತ್ರಣಕ್ಕೂ ಒಳಪಡಲು ಇಷ್ಟಪಡುವುದಿಲ್ಲ ಮತ್ತು ಯಾರಿಗೂ ಹೆದರುವುದಿಲ್ಲ. ತಮಗೆ ಅನಿಸಿದ್ದನ್ನು ಮಾಡುವ ಗುಣವನ್ನು ಹೊಂದಿರುತ್ತಾರೆ. ಏನೇ ಮಾಡಿದರೂ ಅದು ನನ್ನ ಸ್ವಾತಂತ್ರ ಅನ್ನೋ ಬಲವಾದ ನಂಬಿಕೆ ಈ ರಾಶಿಯವರಲ್ಲಿ ಇರುತ್ತದೆ. ಅಲ್ಲದೆ, ಯಾರಿಗೂ ಬಕೆಟ್​ ಹಿಡಿಯುವ ಗುಣ ಇರುವುದಿಲ್ಲ.

ಹಾಗಾದರೆ, ಯಾವ ರಾಶಿಯವರು ಯಾರಿಂದಲೂ ನಿಯಂತ್ರಿಸಲಾಗದ ಅಸಾಧಾರಣ ವ್ಯಕ್ತಿತ್ವವನ್ನು ಹೊಂದಿರುತ್ತಾರೆ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.

ಮೇಷ ರಾಶಿ

ಮೇಷ ರಾಶಿಯಲ್ಲಿ ಜನಿಸಿದ ಜನರು ಸ್ವಾಭಾವಿಕವಾಗಿ ಯುದ್ಧಪ್ರಿಯರೂ ಮತ್ತು ಸ್ವಾರ್ಥಿಗಳೂ ಆಗಿರುತ್ತಾರೆ. ಅವರು ಸ್ವಾಭಾವಿಕವಾಗಿ ನಾಯಕರಾಗಿರುವುದರಿಂದ, ಯಾವುದೇ ಸಂದರ್ಭದಲ್ಲೂ ಅವರು ಇತರರಿಗೆ ವಿಧೇಯರಾಗುವುದಿಲ್ಲ. ಅಂದರೆ, ಬಕೆಟ್​ ಹಿಡಿಯುವ ಕೆಲಸ ಮಾಡುವುದಿಲ್ಲ. ನೀವು ಅವರನ್ನು ನಿಯಂತ್ರಿಸಲು ಪ್ರಯತ್ನಿಸಿದರೆ, ಪರಿಣಾಮಗಳು ತುಂಬಾ ಕೆಟ್ಟದಾಗಿರುತ್ತದೆ ಮತ್ತು ಅನಿರೀಕ್ಷಿತವಾಗಿರುತ್ತವೆ. ಯಾರೂ ಅವರನ್ನು ನಿಯಂತ್ರಿಸಲು ಅಥವಾ ಗುಲಾಮರನ್ನಾಗಿ ಮಾಡಲು ಸಾಧ್ಯವಿಲ್ಲ.

ಮಿಥುನ ರಾಶಿ

ದ್ವಂದ್ವ ಸ್ವಭಾವಕ್ಕೆ ಹೆಸರುವಾಸಿಯಾದ ಮಿಥುನ ರಾಶಿಯವರು ಮಾನಸಿಕವಾಗಿ ಮತ್ತು ಸಾಮಾಜಿಕವಾಗಿ ಯಾವಾಗಲೂ ಸ್ವಾತಂತ್ರ್ಯವನ್ನು ಬಯಸುತ್ತಾರೆ. ಇವರು ತಮ್ಮ ಭಾವನೆಗಳನ್ನು ತಮ್ಮ ಹತ್ತಿರದವರಿಗೂ ವ್ಯಕ್ತಪಡಿಸಲು ಹಿಂಜರಿಯುತ್ತಾರೆ, ಆದ್ದರಿಂದ ಅವರನ್ನು ಅರ್ಥಮಾಡಿಕೊಳ್ಳುವುದು ತುಂಬಾ ಕಷ್ಟ. ನಿರ್ಬಂಧಿತ ದಿನಚರಿಗಳು ಮಿಥುನ ರಾಶಿಯವರನ್ನು ವಿಭಿನ್ನವಾಗಿ ಕಾಣುವಂತೆ ಮಾಡುತ್ತದೆ. ಅವರು ಯಾರಿಗೂ ಸಲಾಂ ಒಡೆಯುವುದಿಲ್ಲ. ತಮ್ಮ ಸ್ವಾತಂತ್ರ್ಯಕ್ಕೆ ಮಾತ್ರ ಬೆಲೆ ಕೊಡುತ್ತಾರೆ ಮತ್ತು ನಿಯಮಗಳನ್ನು ದ್ವೇಷಿಸುತ್ತಾರೆ.

ಧನುಸ್ಸು ರಾಶಿ

ಧನುಸ್ಸು ರಾಶಿಯವರು ಭೌಗೋಳಿಕವಾಗಿ, ತಾತ್ವಿಕವಾಗಿ ಮತ್ತು ಅನುಭವಾತ್ಮಕವಾಗಿ ಸ್ವಾತಂತ್ರ್ಯವನ್ನು ಅನ್ವೇಷಿಸುವ ಸಾಮರ್ಥ್ಯ ಹೊಂದಿದ್ದಾರೆ. ತಮ್ಮ ಸ್ವತಂತ್ರ ಮನೋಭಾವ ಮತ್ತು ಸಾಹಸಮಯ ಸ್ವಭಾವಕ್ಕೆ ಹೆಸರುವಾಸಿಯಾದ ಅವರು ಯಾರ ನಿಯಂತ್ರಣದಲ್ಲೂ ಬದುಕುವುದಿಲ್ಲ. ತಮ್ಮನ್ನು ನಿಯಂತ್ರಿಸುವ ಯಾವುದರಿಂದಲೂ ಅವರು ಸಂಪೂರ್ಣವಾಗಿ ದೂರವಿರುತ್ತಾರೆ. ಜವಾಬ್ದಾರಿಗಳಿಂದ ಬಂಧಿಸಲ್ಪಡಲು ಬಯಸದ ಈ ಜನರನ್ನು ಸಂಬಂಧಗಳ ನೆಪದಿಂದ ಕೂಡ ನಿಯಂತ್ರಿಸಲಾಗುವುದಿಲ್ಲ. ಅವರ ಏಕೈಕ ಅಗತ್ಯ ಸ್ವಾತಂತ್ರ್ಯ ಎಂದು ಅವರಿಗೆ ಮನವರಿಕೆಯಾಗಿದೆ.

ವಿಶೇಷ ಸೂಚನೆ: ಈ ಮೇಲೆ ಉಲ್ಲೇಖಿಸಲಾದ ಎಲ್ಲ ಮಾಹಿತಿಯನ್ನು ವಿವಿಧ ಮಾಧ್ಯಮಗಳು, ಜ್ಯೋತಿಷಿಗಳು, ಪಂಚಾಂಗಗಳು, ನಂಬಿಕೆಗಳು ಹಾಗೂ ಆಧ್ಯಾತ್ಮಿಕ ಪಠ್ಯಗಳಿಂದ ಸಂಗ್ರಹಿಸಲಾಗಿದೆ. ಮಾಹಿತಿ ನೀಡುವುದು ಮಾತ್ರ ನಮ್ಮ ಉದ್ದೇಶವಾಗಿದ್ದು, ಇದನ್ನು ವಿಜಯವಾಣಿ ವೆಬ್​ಸೈಟ್​ ಜವಾಬ್ದಾರರಾಗಿರುವುದಿಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net