

ಭಾರತ್ ಸಂಚಾರ್ ನಿಗಮ್ ಲಿಮಿಡೆಟ್(BSNL) ತನ್ನ ಬಳಕೆದಾರರಿಗೆ ಇದೀಗ ದೊಡ್ಡ ಶಾಕ್ ನೀಡಿದೆ. ಬಳಕೆದಾರರಿಗೆ ಕಡಿಮೆ ದರದಲ್ಲಿ ಉಪಯೋಗ ಆಗುವ ನಿಟ್ಟಿನಲ್ಲಿ ಮೂರು ತಿಂಗಳು, ಆರು ತಿಂಗಳು ಮತ್ತು ವರ್ಷದ ಪ್ಲ್ಯಾನ್ಗಳನ್ನು ಫೆ.10ರಿಂದ ಸ್ಥಗಿತಗೊಳ್ಳಲಿದೆ ಎಂದು ವರದಿಯಾಗಿದೆ.
ಹೌದು, ಕಡಿಮೆ ದರದಲ್ಲಿ ಬಳಕೆದಾರಿಗೆ ಭಾರಿ ಉಪಯೋಗವಾಗುತ್ತಿದ್ದ ಪ್ಲ್ಯಾನ್ಗಳನ್ನು ಫೆ.10 ರಿಂದ ತನ್ನ ಮುಂದಿನ ಯೋಜನೆಗಳನ್ನು ಮುಚ್ಚಲಿದೆ. ಇದರಿಂದ ಬಳಕೆದಾರರು ಮುಂದಿನ ಹೊಸ ಯೋಜನಗಳು ಜಾರಿ ಬರುವವರೆಗೂ ಕಾಯಬೇಕಾದ ಅನಿವಾರ್ಯತೆ ಎದುರಾಗಿದೆ. ಇಲ್ಲವೇ, ಫೆ.10 ರೊಗಳಗೆ ಈ ಮೂರು ಪ್ಲ್ಯಾನ್ಗಳನ್ನು ಕೂಡಲೇ ರಿಚಾರ್ಚ್ ಮಾಡಿಸಬಹುದು.
ವರದಿಗಳ ಪ್ರಕಾರ, BSNLನ 201, 797 ಮತ್ತು 2,999 ಯೋಜನೆಗಳು ಫೆ.10ರಂದು ಸ್ಥಗಿತಗೊಳ್ಳಲಿವೆ. ಈ ಮೂರು ಯೋಜನೆಗಳಿಂದ ಬಳಕೆದಾರರಿಗೆ ಏನೆಲ್ಲಾ ಪ್ರಯೋಜನಗಳು ಇವೆ ಎಂಬುವುದನ್ನು ತಿಳಿಯೋಣ ಬನ್ನಿ..
201ರ ಯೋಜನೆಯ ಮಾನ್ಯತೆ 90 ದಿನಗಳು ಇರಲಿದೆ. ಬಳಕೆದಾರರು 6GB ಡೇಟಾ ಮತ್ತು 300 ನಿಮಿಷಗಳ ಕರೆಯನ್ನು ಪಡೆಯುತ್ತಾರೆ. ಇದನ್ನು ಬಿಟ್ಟರೆ ಅತ್ಯಂತ ಕಡಿಮೆ ದರದಲ್ಲಿ ಬೇರೆ ಯಾವ ಪ್ಲ್ಯಾನ್ ಇಲ್ಲ. ಈ ಯೋಜನೆ BSNL ನ ಅತ್ಯಂತ ಹಳೆ ಯೋಜನೆಯಾಗಿದ್ದು, ದೀರ್ಘಕಾಲದ ವ್ಯಾಲಿಟಿಡಿ ಹೊಂದಿದೆ.
ಈ ಯೋಜನೆಯು 300 ದಿನಗಳ ದೀರ್ಘಾವಧಿಯ ಮಾನ್ಯತೆಯೊಂದಿಗೆ ಬರುತ್ತದೆ. ಇದರಲ್ಲಿ, ಅನಿಯಮಿತ ಕರೆ, ದೈನಂದಿನ 2GB ಡೇಟಾ ಮತ್ತು 100 SMS ಮೊದಲ ಎರಡು ತಿಂಗಳುಗಳು ಅಂದರೆ 60 ದಿನಗಳವರೆಗೆ ಲಭ್ಯವಿದೆ.
ಇದು ಕಂಪನಿಯ ಅತ್ಯಂತ ದುಬಾರಿ ರೀಚಾರ್ಜ್ ಯೋಜನೆಯಾಗಿದೆ. ಇದರಲ್ಲಿ ಒಂದು ವರ್ಷದ ವ್ಯಾಲಿಡಿಟಿಯೊಂದಿಗೆ ಪ್ರತಿದಿನ 3GB ಡೇಟಾವನ್ನು ನೀಡಲಾಗುತ್ತಿದೆ. ಇದಲ್ಲದೆ, ಬಳಕೆದಾರರು ಅನಿಯಮಿತ ಕರೆ ಮತ್ತು ಪ್ರತಿದಿನ 100 SMS ಗಳ ಪ್ರಯೋಜನವನ್ನು ಪಡೆಯುತ್ತಾರೆ. ಹೆಚ್ಚು ಡೇಟಾ ಮತ್ತು ಕರೆ ಮಾಡುವ ಅಗತ್ಯವಿರುವ ಬಳಕೆದಾರರಿಗೆ ಈ ಯೋಜನೆಯು ಉಪಯುಕ್ತವಾಗಿದೆ.
BSNL 17 ದಿನಗಳ ಮಾನ್ಯತೆಯೊಂದಿಗೆ ರೂ 99 ರ ಧ್ವನಿ ವೋಚರ್‌ನಲ್ಲಿ ಅನಿಯಮಿತ ಕರೆಯನ್ನು ನೀಡುತ್ತಿದೆ. ಇದಲ್ಲದೆ, 439 ರೂಗಳ ಯೋಜನೆಯು 90 ದಿನಗಳ ಮಾನ್ಯತೆಯೊಂದಿಗೆ ಬರುತ್ತದೆ. ಇದರಲ್ಲಿ ಅನಿಯಮಿತ ಉಚಿತ ಕರೆ ಮತ್ತು 300 SMS ಲಭ್ಯವಿದೆ. BSNL ನ ಈ ಯೋಜನೆಯು ಸುಮಾರು 3 ತಿಂಗಳ ಮಾನ್ಯತೆಯೊಂದಿಗೆ ಖಾಸಗಿ ಕಂಪನಿಗಳ ಯೋಜನೆಗಳಿಗಿಂತ ಅಗ್ಗವಾಗಿದೆ(ಏಜೆನ್ಸೀಸ್)