'ಕಿಂಗ್ ಆಫ್ ಕೋಥಾ' ರಿಲೀಸ್​ಗೆ ಕ್ಷಣಗಣನೆ; ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ ಖ್ಯಾತ ನಟ?

WhatsApp Image 2023-08-23 at 1.38.02 PM
Published on

ಕೇರಳ: ದುಲ್ಕರ್​ ಸಲ್ಮಾನ್​ ನಟನೆಯ ಬಹುನಿರೀಕ್ಷಿತ 'ಕಿಂಗ್ ಆಫ್ ಕೋಥಾ' ಸಿನಿಮಾ ಇದೇ ಆಗಸ್ಟ್​ 24 ರಂದು ವಿಶ್ವದಾದ್ಯಂತ ಏಕಕಾಲಕ್ಕೆ ಬಹುತೇಕ ಚಿತ್ರಮಂದಿರಗಳಲ್ಲಿ ರಿಲೀಸ್​ ಆಗಲು ಸಕಲ ತಯಾರಿಗಳೊಂದಿಗೆ ಸಜ್ಜಾಗಿದೆ. ಈ ಮಧ್ಯೆ ಖ್ಯಾತ ಕಾಲಿವುಡ್​ ನಟರೊಬ್ಬರ ಎಂಟ್ರಿ ಚಿತ್ರದಲ್ಲಿದೆ ಎಂದು ಹೇಳಲಾಗಿದೆ. ಆದ್ರೆ, ಆ ನಟ ಯಾರು ಎಂಬ ಕುತೂಹಲ ಇದೀಗ ಸಿನಿಪ್ರೇಕ್ಷಕರಲ್ಲಿ ಕಾಡತೊಡಗಿದೆ.

'ಕಿಂಗ್​ ಆಫ್​ ಕೋಥಾ' ಚಿತ್ರಮಂದಿರಗಳಲ್ಲಿ ಅದ್ಧೂರಿ ಬಿಡುಗಡೆಗೆ ಕ್ಷಣಗಣನೆ ಆರಂಭಗೊಂಡಿದ್ದು, ಚಿತ್ರದ ಬಗ್ಗೆ ಸಿನಿರಸಿಕರಲ್ಲಿ ಸಾಕಷ್ಟು ನಿರೀಕ್ಷೆ ಮೂಡಿದೆ. ಗ್ಯಾಂಗ್​ಸ್ಟರ್​​ ಜಾನರ್​ನ ಸಿನಿಮಾ ಎಂದು ಹೇಳಲಾದ ಈ ಚಿತ್ರದಲ್ಲಿ, ದುಲ್ಕರ್ ಸಲ್ಮಾನ್ ಮತ್ತು ಐಶ್ವರ್ಯ ಲಕ್ಷ್ಮಿ ಮುಖ್ಯಭೂಮಿಕೆಯಲ್ಲಿ ನಟಿಸಿದ್ದಾರೆ.

ಅಭಿಲಾಷ್ ಜೋಶಿ ನಿರ್ದೇಶನದ 'ಕಿಂಗ್​ ಆಫ್​ ಕೋಥಾ' ಚಿತ್ರದಲ್ಲಿ ಖ್ಯಾತ ಕಾಲಿವುಡ್ ನಟ ಧ್ರುವ ವಿಕ್ರಮ್ ವಿಶೇಷ ಪಾತ್ರದಲ್ಲಿ ನಟಿಸಿದ್ದಾರೆ ಎಂಬ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಚರ್ಚೆಯಾಗುತ್ತಿದೆ. ಆದ್ರೆ, ಈ ಕುರಿತು ಚಿತ್ರತಂಡ ಯಾವುದೇ ಅಧಿಕೃತ ಮಾಹಿತಿ ಘೋಷಿಸಿಲ್ಲ. ಸಿನಿಮಾ ತೆರೆ ಮೇಲೆ ಬಂದ ಬಳಿಕ ಈ ವದಂತಿಗೆ ಉತ್ತರ ಸಿಗಬಹುದು ಎಂದು ಅಭಿಮಾನಿಗಳು ನಿರೀಕ್ಷಿಸಿದ್ದಾರೆ.

50 ಕೋಟಿ ರೂ. ಬಜೆಟ್​ನಲ್ಲಿ ಮೂಡಿಬಂದಿರುವ ಕಿಂಗ್​ ಆಫ್​ ಕೋಥಾ ಚಿತ್ರ ಬಾಕ್ಸ್​ ಆಫೀಸ್​ನಲ್ಲಿ ಹೇಗೆ ಕಮಾಲ್ ಮಾಡಲಿದೆ ಎಂಬುದನ್ನು ಕಾದುನೋಡಬೇಕಿದೆ. ಜೀ ಸ್ಟುಡಿಯೋಸ್, ವೇಫೇರರ್ ಫಿಲ್ಮ್ಸ್ ನಿರ್ಮಾಣದ ಈ ಚಿತ್ರದಲ್ಲಿ ಚೆಂಬನ್ ವಿನೋದ್, ಶಬೀರ್, ನೈಲಾ ಉಷಾ, ಶಮ್ಮಿ ತಿಲಕನ್, ಶಾಂತಿ ಕೃಷ್ಣ, ಪ್ರಸನ್ನ, ಗೋಕುಲ್ ಸುರೇಶ್, ಅನಿಖಾ ಸುರೇಂದ್ರನ್, ಸರಣ್ ಶಕ್ತಿ, ಸೇರಿದಂತೆ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net