

ಮಾರ್ಚ್ 21ರಿಂದ ಏಪ್ರಿಲ್ 4ರವರೆಗೆ ನಡೆದಿದ್ದ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ 8,42,173 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು. ಇದರಲ್ಲಿ 5,24,984 ವಿದ್ಯಾರ್ಥಿಗಳು ಪಾಸ್ ಆಗಿದ್ದು, 66.14 ರಷ್ಟು ಫಲಿತಾಂಶ ಬಂದಿದೆ. ಕರ್ನಾಟಕದಾದ್ಯಂತ 15,881 ಪ್ರೌಢಶಾಲೆಗಳಿಂದ 4,61,563 ಹುಡುಗರು ಮತ್ತು 4,34,884 ಹುಡುಗಿಯರು ಪರೀಕ್ಷೆಗೆ ದಾಖಲಾಗಿದ್ದರು. ಶೇ. 74 ಫಲಿತಾಂಶದೊಂದಿಗೆ ಈ ಬಾರಿಯೂ ಹೆಣ್ಣು ಮಕ್ಕಳೇ ಮೇಲುಗೈ ಸಾಧಿಸಿದ್ದಾರೆ. ಗಂಡು ಮಕ್ಕಳು 58.07 ರಷ್ಟು ಫಲಿತಾಂಶಕ್ಕೆ ಪಡೆದಿದ್ದಾರೆ.
625ಕ್ಕೆ 625 ಅಂಕ ಗಳಿಸಿದ ವಿದ್ಯಾರ್ಥಿಗಳ ಪೈಕಿ 22 ವಿದ್ಯಾರ್ಥಿಗಳು ಪೂರ್ಣ ಅಂಕ ಗಳಿಸಿ, ರಾಜ್ಯದ ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ಮೊದಲ ಸ್ಥಾನಕ್ಕೆ ಭರ್ಜರಿ ಪೈಪೋಟಿ ನೀಡಿದ್ದಾರೆ. ವಿಶೇಷ ಎಂದರೆ ಕಳೆದ ಬಾರಿಯ ಫಲಿತಾಂಶಕ್ಕೆ ಹೋಲಿಸಿದರೆ ಈ ಬಾರಿಯ ಫಲಿತಾಂಶದಲ್ಲಿ ಶೇ.8ರಷ್ಟು ಹೆಚ್ಚಳ ಕಂಡುಬಂದಿದೆ.
1. ಜಾಹ್ನವಿ ಎಸ್.ಎನ್ – ಬೆಂಗಳೂರು ದಕ್ಷಿಣ
2. ಭಾವನಾ. ಸಿ- ಬೆಂಗಳೂರು ಗ್ರಾಮಾಂತರ
3. ಧನಲಕ್ಷ್ಮಿ- ಬೆಂಗಳೂರು ದಕ್ಷಿಣ
4. ತಾನ್ಯಾ ಆರ್.ಎನ್ – ಮೈಸೂರು
5. ಮಧುಸೂಧನ್ – ಬೆಂಗಳೂರು ದಕ್ಷಿಣ
6. ಧನುಷ್ – ಮೈಸೂರು
7. ಧೃತಿ – ಮಂಡ್ಯ
8. ನಮಿತ – ಬೆಂಗಳೂರು ದಕ್ಷಿಣ
9. ನಂದನ್ ಎಚ್ಡಿ – ಚಿತ್ರದುರ್ಗ
10. ನಮನ ಕೆ – ಶಿವಮೊಗ್ಗ
11. ಮೊಹಮ್ಮದ್ ಮಸ್ತೂರ್ ಅದಿಲ್ - ತುಮಕೂರು
12. ನಿತ್ಯಾ ಕುಲಕರ್ಣಿ – ಶಿವಮೊಗ್ಗ
13. ಮೌಲ್ಯ .ಡಿ ರಾಜ್ – ಚಿತ್ರದುರ್ಗ
14. ರಂಜಿತ ಎಸಿ- ಬೆಂಗಳೂರು ಗ್ರಾಮಾಂತರ
15. ರೂಪ ಚನಗೌಡ ಪಾಟೀಲ್- ಬೆಳಗಾವಿ
16. ಸಹಿಷ್ಣು .ಎನ್ – ಶಿವಮೊಗ್ಗ
17. ಶಗುಫ್ತಾ ಅಂಜುಮ್ – ಶಿರಸಿ
18. ಸ್ವಸ್ಥಿ ಕಾಮತ್ – ಉಡುಪಿ
19. ಉತ್ಸವ್ ಪಟೇಲ್- ಹಾಸನ
20. ಯಶ್ವಿತಾ ರೆಡ್ಡಿ – ಮಧುಗಿರಿ
21. ಯುಕ್ತ .ಎಸ್ – ಬೆಂಗಳೂರು ದಕ್ಷಿಣ
22. ಅಖಿಲ್ ಅಹ್ಮದ್ ನಡಾಫ್- ವಿಜಯಪುರ
https://www.vijayavani.net/karnataka-sslc-result-2025-22-students-scored-out-of-out